Tv9 ಕಾಳಜಿ | ಖಿನ್ನತೆ ಮೆಟ್ಟಿನಿಲ್ಲಲು ಇವೆ ಹಲವು ದಾರಿಗಳು: ಮನೋರೋಗ ತಜ್ಞ ಡಾ.ಸಿ.ಗುರುಪ್ರಸಾದ್​

ಖಿನ್ನತೆಗೆ ಜಾರಿದ ಮೇಲೆ ಇನ್ನೊಬ್ಬರ ಸಹಕಾರ ಇಲ್ಲದೆ ಹೊರಬರುವುದು ಕಷ್ಟ. ಆದರೆ ಡಿಪ್ರೆಶನ್​ಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ನಾವು ಪ್ರಯತ್ನ ಮಾಡಬಹುದು. ನಮ್ಮ ಮನಸನ್ನು ಗಟ್ಟಿಯಾಗಿಸಿಕೊಳ್ಳಲು, ದೃಢವಾಗಿಸಿಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಒಳ್ಳೇ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

Tv9 ಕಾಳಜಿ | ಖಿನ್ನತೆ ಮೆಟ್ಟಿನಿಲ್ಲಲು ಇವೆ ಹಲವು ದಾರಿಗಳು: ಮನೋರೋಗ ತಜ್ಞ ಡಾ.ಸಿ.ಗುರುಪ್ರಸಾದ್​
(ಸಾಂದರ್ಭಿಕ ಚಿತ್ರ)
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 26, 2021 | 9:02 PM

ನಟಿ, ಮಾಡೆಲ್ ಜಯಶ್ರೀ ರಾಮಯ್ಯ ನಿನ್ನೆ (ಜ.25) ಆತ್ಮಹತ್ಯೆ ಮಾಡಿಕೊಂಡ ನಂತರ ಡಿಪ್ರೆಶನ್ (ಖಿನ್ನತೆ) ಬಗ್ಗೆ ಚರ್ಚೆ ಮತ್ತೆ ಆರಂಭವಾಗಿದೆ. ಪ್ರಾಣವನ್ನೇ ಕಸಿಯುವ ತಾಕತ್ತಿರುವ ಡಿಪ್ರೆಶನ್​ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾವುದೇ ವಯಸ್ಸಿನವರಿಗೆ ಬೇಕಾದರೂ ಉಂಟಾಗಬಹುದು. ಖಿನ್ನತೆಯ ಆಳಕ್ಕೆ ಜಾರಿದವರನ್ನು ಸಪೋರ್ಟ್​ ಎಂಬ ಹಗ್ಗ ಮಾತ್ರ ಮೇಲೆತ್ತಬಹುದು. ಖಿನ್ನತೆ ಸ್ವರೂಪ ಹೇಗಿರುತ್ತದೆ? ಟ್ರೀಟ್​​ಮೆಂಟ್​ ಹೇಗೆ ಎಂಬ ಬಗ್ಗೆ ಮನೋರೋಗ ತಜ್ಞ ಡಾ.ಸಿ.ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ.

ಖಿನ್ನತೆಯಲ್ಲಿ ಹಲವು ವಿಧಗಳಿವೆ. ಮಕ್ಕಳಿಂದ ಹಿಡಿದು. ವೃದ್ಧರವರೆಗೂ ಎಲ್ಲ ವಯಸ್ಸಿನವರಿಗೂ ಡಿಪ್ರೆಶನ್​ ಕಾಡುತ್ತದೆ. ಆದರೆ ಆಯಾ ವಯಸ್ಸಿನಲ್ಲಿ ಅದು ಕಾಣಿಸಿಕೊಳ್ಳಲು ಕಾರಣಗಳು ಮತ್ತು ಖಿನ್ನತೆಯ ಸ್ವರೂಪ ಬೇರೆಯದ್ದೇ ಆಗಿರುತ್ತದೆ. ಇನ್ನು ಮಕ್ಕಳಲ್ಲಿ-ವೃದ್ಧರಲ್ಲಿ ಖಿನ್ನತೆಯನ್ನು ಪತ್ತೆ ಹಚ್ಚುವುದು ತುಸು ಕಷ್ಟ. ಆದರೆ ಯುವಜನರಲ್ಲಿ, ಮಧ್ಯವಯಸ್ಕರಲ್ಲಿ ಸುಲಭವಾಗಿ ಗುರುತಿಸಬಹುದು.

ಮಕ್ಕಳ ವರ್ತನೆ ವಿಭಿನ್ನವಾಗಿರುತ್ತದೆ ! ಮಕ್ಕಳಲ್ಲಿ ಖಿನ್ನತೆ ಶುರುವಾಗುವುದಕ್ಕೆ ಹಲವು ಕಾರಣವಿರುತ್ತದೆ. ಅಪ್ಪ-ಅಮ್ಮ ಇದ್ದರೂ ಅವರ ಪ್ರೀತಿಯಿಂದ ವಂಚಿತರಾಗುವ ಮಕ್ಕಳಲ್ಲಿ ಖಿನ್ನತೆ ಉಂಟಾಗಬಹುದು. ಹಾಗೇ ಹೆಚ್ಚಿನ ಅಂಕಪಡೆಯುವಂತೆ, ಸ್ಪರ್ಧೆಗಳಲ್ಲಿ ಸದಾ ಮೊದಲು ಬರುವಂತೆ ಅವರ ಮೇಲೆ ಪಾಲಕರು-ಶಿಕ್ಷಕರು ಹೇರುವ ಒತ್ತಡದಿಂದ ಡಿಪ್ರೆಶನ್​ಗೆ ಜಾರಬಹುದು. ಹೀಗೆ ಖಿನ್ನತೆಗೆ ಜಾರಿದ ಮಕ್ಕಳ ವರ್ತನೆ ವಿಭಿನ್ನವಾಗಿರುತ್ತದೆ. ಅವರು ಊಟ ಮಾಡುವುದಿಲ್ಲ. ಉಳಿದ ಮಕ್ಕಳೊಂದಿಗೆ ಹೊರಗೆ ಆಟವಾಡಲು ಹೋಗಲು ಇಷ್ಟಪಡುವುದಿಲ್ಲ. ಹೊಸ ಬಟ್ಟೆ ಖರೀದಿಯಲ್ಲಿ ನಿರಾಸಕ್ತಿ ಇರುತ್ತದೆ. ಏಕಾಗ್ರತೆ ಹೊಂದಲಾಗದೆ ತಪ್ಪಾಗಿ ಓದುತ್ತಾರೆ, ಬರೆಯುತ್ತಾರೆ.

ಹಾಗೇ 13 ವರ್ಷ ಮೇಲ್ಪಟ್ಟವರಲ್ಲಿ ಖಿನ್ನತೆ ಉಂಟಾದಾಗ ಅಂಥವರ ವರ್ತನೆ ಇನ್ನೂ ವಿಚಿತ್ರವಾಗಿರುತ್ತದೆ. ಆಗ ಹಾರ್ಮೋನುಗಳು ಬದಲಾವಣೆಯಾಗುವ ಸಮಯ ಆಗಿದ್ದರಿಂದ ಸಣ್ಣಸಣ್ಣ ವಿಚಾರಗಳಿಗೂ ಮುನಿಸು, ಅಳು ಎಲ್ಲ ಇರುತ್ತದೆ. ಇದು ಸೂಕ್ಷ್ಮ ಸಮಯವಾಗಿದ್ದರಿಂದ ಡಿಪ್ರೆಶನ್​ಗೆ ಜಾರುವ ಸಂದರ್ಭವೂ ಹೆಚ್ಚಿರುತ್ತದೆ. ಈ ಮಕ್ಕಳು ತಂದೆ-ತಾಯಿಯ ಬಳಿ ಮಾತನಾಡುವ ಧಾಟಿ ಬೇರೆಯೇ ಇರುತ್ತದೆ. ಈ ವಯಸ್ಸು ಹೇಗೆ ಎಂದರೆ ಕಂಡಿದ್ದೆಲ್ಲವೂ ಬೇಕು. ಅದನ್ನು ಅಪ್ಪ ಕೊಡಿಸಲ್ಲ ಎಂದಾಕ್ಷಣ ಸಿಟ್ಟು ಬರಲು ಪ್ರಾರಂಭವಾಗುತ್ತದೆ. ಇನ್ನು ಈ ವಯಸ್ಸಿನಲ್ಲಿ ಖಿನ್ನತೆಗೆ ಜಾರಿದವರು ಅದರಿಂದ ಹೊರಬರಲು ಬೀಡಿ-ಸಿಗರೇಟಿನಂತ ಚಟಕ್ಕೂ ಬೀಳುತ್ತಿರುವುದು ಆತಂಕಕಾರಿ. ಅಪ್ಪ-ಅಮ್ಮ ಕೊಡಿಸೋಲ್ಲ ಎಂದಿದ್ದನ್ನು ಪಡೆಯಲು ಕಳ್ಳತನದ ಹಾದಿಯನ್ನೂ ಹಿಡಿಯುತ್ತಾರೆ. ತಮಗೆ ಏನಾಗುತ್ತಿದೆ ಎಂಬ ಅರಿವು ಅವರಲ್ಲಿ ಇರೋದಿಲ್ಲ. ಏನೋ ಒದ್ದಾಟ ಇರುತ್ತದೆ. ಕೊನೆಗೊಮ್ಮೆ ಮನಸು ಯಾವುದಕ್ಕೂ ಸಹಕರಿಸದೆ ಹೋದಾಗ ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಹಾಗೇ 18 ವರ್ಷ ಮೇಲ್ಪಟ್ಟವರಲ್ಲಿ ಡಿಪ್ರೆಶನ್​ ಕಾಣಿಸಿಕೊಳ್ಳಲೂ ಒತ್ತಡವೇ ಕಾರಣ. ಕೇವಲ ಲವ್​ ಫೇಲ್ಯೂರ್​ ಮಾತ್ರ ಖಿನ್ನತೆಗೆ ಕಾರಣ ಆಗುವುದಿಲ್ಲ. ಚೆನ್ನಾಗಿ ಓದಬೇಕು, ಕೆಲಸಕ್ಕೆ ಸೇರಬೇಕು. ಹಣ ಸಂಪಾದನೆ ಮಾಡಬೇಕು, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ತುಡಿತದಲ್ಲಿ ಇದ್ದವರಿಗೆ ಅಡ್ಡಿಗಳು ಎದುರಾದಾಗ ಅವರು ಖಿನ್ನತೆಗೆ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವಯಸ್ಸಿನವರಿಗೆ ಆಶಾಭಾವನೆ ಹೆಚ್ಚಿರುತ್ತದೆ. ಆದರೆ ಮನೆಯಲ್ಲಿನ ಕಷ್ಟದಿಂದಲೋ, ಪಾಲಕರು ಸ್ಪಂದಿಸದಾಗಲೋ, ಅಂದುಕೊಂಡಿದ್ದನ್ನು ಮಾಡಲು ಸಾಧ್ಯವಾಗದೆ ಇದ್ದಾಗಲೋ ನಿರಾಸೆಗೆ ಒಳಗಾಗುತ್ತಾರೆ. ಇನ್ನು ಕೆಲಸಕ್ಕೆ ಸೇರಿದವರಲ್ಲಿ ಅಲ್ಲಿ ಉಂಟಾಗುವ ಹಿನ್ನಡೆಯಿಂದಲೂ ಡಿಪ್ರೆಶನ್​ಗೆ ಜಾರುತ್ತಾರೆ.

ಕೆಲಸದ ಒತ್ತಡ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರಂತೂ ಬಹುಬೇಗನೇ ಡಿಪ್ರೆಶನ್​ಗೆ ಒಳಗಾಗುತ್ತಾರೆ. ಉದಾಹರಣೆಗೆ ಒಬ್ಬ ಒಳ್ಳೆ ಉದ್ಯಮದಲ್ಲಿದ್ದವನಿಗೆ, ಅದರಲ್ಲಿ ಡಿಮೋಶನ್​ ಆದರೆ ಆತ ಅದರಿಂದ ನೊಂದುಕೊಳ್ಳುತ್ತಾನೆ. ಅವಮಾನ ಎಂದು ಭಾವಿಸುತ್ತಾನೆ. ಏನೇನೋ ಯೋಚನೆ ಮನಸಿಗೆ ಹಚ್ಚಿಕೊಳ್ಳಲು ಶುರು ಮಾಡುತ್ತಾನೆ. ಮನೆಯಲ್ಲಿ ನಮಗೆ ಸಪೋರ್ಟ್ ಇದ್ದರೆ, ಹೊರಗೆ ಕಾಲೇಜಿನಲ್ಲೋ, ಕೆಲಸ ಮಾಡುವ ಸ್ಥಳದಲ್ಲೋ ಉದ್ಭವಿಸುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬಹುದು. ನೋವು, ತಳಮಳಗಳನ್ನು ಹಂಚಿಕೊಂಡು ನಿರಾಳ ಆಗಬಹುದು. ಆದರೆ ಮನೆಯಲ್ಲೇ ಕಷ್ಟ, ಸ್ಪಂದಿಸುವವರು ಯಾರೂ ಇಲ್ಲದಾಗ ಒಂಟಿ ಎಂಬ ಭಾವ ಕಾಡಲು ಶುರುವಾಗುತ್ತದೆ. ನೋವನ್ನು ಹೇಳಿಕೊಳ್ಳಲು ಯಾರೂ ಇರುವುದಿಲ್ಲ. ಮನಸು ಭಾರವೆನಿಸಲು ಪ್ರಾರಂಭವಾಗುತ್ತದೆ. ಮುಂದೊಂದಿನ ಮನಸಿನ ಕಟ್ಟೆ ಒಡೆಯುತ್ತದೆ. ನಿಯಂತ್ರಣಾ ಸಾಮರ್ಥ್ಯವೇ ಮುಗಿದು, ಸಾವೇ ಪರಿಹಾರ ಎಂಬ ತೀರ್ಮಾನಕ್ಕೆ ಬರುತ್ತಾರೆ.

ಸಾವಿನ ಬಗ್ಗೆಯೇ ಆಕರ್ಷಣೆ ಖಿನ್ನತೆಗೆ ಜಾರಿದವರು ಮಾನಸಿಕವಾಗಿ ಎಲ್ಲರಿಂದಲೂ ದೂರ ಆಗುತ್ತಾರೆ. ಅವರಿಗೆ ಯಾರೂ ಸ್ನೇಹಿತರು ಇರುವುದಿಲ್ಲ. ಈ ಭೂಮಿ ಮೇಲೆ ನಮಗೆ ಯಾರೂ ಇಲ್ಲ ಎಂಬ ಭಾವನೆಯೇ ಅವರನ್ನು ಸಾವಿನೆಡೆಗೆ ಕೊಂಡೊಯ್ಯಲು ಶುರು ಮಾಡುತ್ತದೆ. ಮನುಷ್ಯ ಎಷ್ಟೇ ಗಟ್ಟಿಯಾದರೂ ಆತನಿಗೆ ನೋವು, ದುಗುಡದ ಭಾರ ಇಳಿಸಿಕೊಳ್ಳಲು ಇನ್ನೊಬ್ಬರ ಹೆಗಲು ಬೇಕು. ಅಂಥ ಒಂದು ಸಾಂಗತ್ಯ ಸಿಗದವರು ಕುಗ್ಗುತ್ತಾರೆ. ಖಿನ್ನತೆಯ ಆಳಕ್ಕೆ ಇಳಿಯುತ್ತ ಹೋಗುತ್ತಾರೆ. ಹಾಗೆ ಖಿನ್ನತೆಯ ಆಳಕ್ಕೆ ಹೋದಷ್ಟೂ ಅವರಿಗೆ ಸಾವು ಇನ್ನಷ್ಟು ಆಕರ್ಷಕವಾಗಿ ಕಾಣಲು ಶುರುವಾಗುತ್ತದೆ.

ಖಿನ್ನತೆಯಿದೆ ಎಂದು ಹೇಳಿಕೊಳ್ಳಲು ಮುಜುಗರ ಎಷ್ಟೋ ಜನರಿಗೆ ತಮಗೆ ಖಿನ್ನತೆಯಿದೆ ಎಂದು ಗೊತ್ತಿದ್ದರೂ ಅದನ್ನು ಹೇಳಿಕೊಳ್ಳಲು ಮುಜುಗರ. ಇನ್ನೂ ಹಲವರಿಗೆ ಅದರ ಪರಿಹಾರಕ್ಕೆ ಕೌನ್ಸಲಿಂಗ್​, ಚಿಕಿತ್ಸೆ ಪಡೆಯಬೇಕು ಎಂಬುದೂ ತಿಳಿದಿರುವುದಿಲ್ಲ. ಅದರಲ್ಲೂ ಓದಿದವರೇ ಈ ಸಮಸ್ಯೆಗೆ ಸಿಲುಕುತ್ತಿದ್ದಾರೆ. ನಮಗೆ ಡಿಪ್ರೆಶನ್​ ಇದೆ ಎಂದು ಮನೆಯವರ ಬಳಿ ಹೇಳಿಕೊಂಡರೆ ಅವರು ನಂಬುತ್ತಾರಾ? ಸಮಾಜಕ್ಕೆ ಗೊತ್ತಾದರೆ ನಮ್ಮನ್ನು ಹೇಗೆ ನೋಡಬಹುದು ಎಂಬಿತ್ಯಾದಿ ಸ್ಟಿಗ್ಮಾಕ್ಕೆ ಒಳಗಾಗುತ್ತಾರೆ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಬಾರಿಯಾದರೂ ಖಿನ್ನತೆಗೆ ಒಳಗಾಗಿರುತ್ತಾರೆ. ಒಂದಲ್ಲ ಒಂದು ಹಂತದಲ್ಲಿ ಎಲ್ಲರಿಗೂ ಸಾಯಬೇಕು ಎನ್ನಿಸಿರುತ್ತದೆ. ಆ ಭಾವನೆ ನೀರ ಮೇಲೆ ಗುಳ್ಳೆ ಏಳುವಂತೆ. ಗುಳ್ಳೆಗಳು ಎದ್ದು ಹೇಗೆ ಫಟ್​ ಅಂತ ಒಡೆಯುತ್ತವೆಯೋ ಹಾಗೇ ಈ ಅನಿಸಿಕೆ. ಸಾವು ಮನಸಿಗೆ ಬಂದ ತಕ್ಷಣ ಎಲ್ಲರೂ ಅದನ್ನೇ ಮಾಡುವುದಿಲ್ಲ. ಆತ್ಮಸ್ಥೈರ್ಯ ಇದ್ದವರಿಗೆ ಮನಸಲ್ಲಿ ಮೂಡುವ ಇಂಥ ಕೆಟ್ಟ ಭಾವನೆಗಳ ನಿಯಂತ್ರಣ ಕಷ್ಟವಲ್ಲ. ಆದರೆ ಪದೇಪದೆ ಸೋಲುಂಡವರಿಗೆ, ದೌರ್ಜನ್ಯಕ್ಕೆ ಒಳಗಾಗಿ ಖಿನ್ನತೆಯ ಆಳಕ್ಕೆ ಹೋದವರಿಗೆ ಸಾವೆಂಬ ಭಾವನೆಯೇ ಗಟ್ಟಿಯಾಗಿ ಊರಿರುತ್ತದೆ. ಅಂಥವರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದರೆ ಅಲ್ಲಿಗೆ ಅವರ ಅರ್ಧದಷ್ಟು ಒತ್ತಡ ಕಡಿಮೆಯಾಗಿರುತ್ತದೆ. ನಂತರ ಅವರ ಸಮಸ್ಯೆಗಳ ಬಗ್ಗೆ ಪರಿಹಾರ ಹುಡುಕಬಹುದು. ಹಾಗೇ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಕೊಟ್ಟು ಆತ್ಮವಿಶ್ವಾಸ ಮೂಡಿಸಬಹುದು. ಖಿನ್ನತೆಗೆ ಜಾರಿದವರಿಗೆ ಮುಖ್ಯವಾಗಿ ಬೇಕಿರುವುದೇ ಸಪೋರ್ಟ್​. ಅದನ್ನು ಕೊಟ್ಟೇ ಅವರನ್ನು ಅಲ್ಲಿಂದ ಮೇಲೆತ್ತಬೇಕು.

ಹೇಗೆಲ್ಲ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು ಖಿನ್ನತೆಗೆ ಜಾರಿದ ಮೇಲೆ ಇನ್ನೊಬ್ಬರ ಸಹಕಾರ ಇಲ್ಲದೆ ಹೊರಬರುವುದು ಕಷ್ಟ. ಆದರೆ ಹಾಗೆ ಡಿಪ್ರೆಶನ್​ಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ನಾವು ಪ್ರಯತ್ನ ಮಾಡಬಹುದು. ನಮ್ಮ ಮನಸನ್ನು ಗಟ್ಟಿಯಾಗಿಸಿಕೊಳ್ಳಲು, ದೃಢವಾಗಿಸಿಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಒಳ್ಳೆ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಬೆಳಗ್ಗೆ ಎದ್ದು, ವ್ಯಾಯಾಮ, ಯೋಗ, ವಾಕ್​, ಧ್ಯಾನಗಳನ್ನು ಮಾಡುವ ಮೂಲಕ ನಮ್ಮ ಮನಸಿಗೆ ಶಕ್ತಿ ತುಂಬಬೇಕು. ಇನ್ನೂ ಒಂದೆಂದರೆ ಆದಷ್ಟು ಖಾಲಿ ಕುಳಿತುಕೊಳ್ಳುವುದನ್ನು ಬಿಡಬೇಕು. ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹೊರ ಹೋಗಿ ದುಡಿಯಬೇಕು. ಯಾವುದೇ ಕೊರತೆಯಿಲ್ಲದೆ ಖಾಲಿ ಕುಳಿತುಕೊಳ್ಳುವವರಲ್ಲಿ ಖಿನ್ನತೆಯೂ ಹೆಚ್ಚು. ಇಂಥವರನ್ನು ನೋಡಿದರೆ, ಇವರಿಗೇನು ಸಮಸ್ಯೆ? ಚೆನ್ನಾಗೇ ಇದ್ದಾರಲ್ಲ ಎನ್ನಿಸುತ್ತದೆ. ಆದರೆ ವಾಸ್ತವದಲ್ಲಿ ಅವರ ಮನಸು ಹಾಗಿರುವುದಿಲ್ಲ.

ಕೌನ್ಸೆಲಿಂಗ್ ಮೂಲಕ ಪರಿಹಾರ ಸಾಧ್ಯ ಖಿನ್ನತೆಗೆ ಜಾರಿದವರಲ್ಲಿ ಶೇ 50ರಿಂದ 70 ಮಂದಿ ಕೌನ್ಸೆಲಿಂಗ್​ನಿಂದಲೇ ಗುಣಮುಖರಾಗುತ್ತಾರೆ. ಖಿನ್ನತೆಯ ತೀವ್ರತೆ ಹೆಚ್ಚಾದಾಗ ಚಿಕಿತ್ಸೆ ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಇನ್ನು ಶೇ 5ರಷ್ಟು ಪ್ರಕರಣದಲ್ಲಿ ಮಾತ್ರ ಅಡ್ಮಿಟ್​ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ನಿಮ್ಮಲ್ಲಿರುವ ಖಿನ್ನತೆ, ನೋವು, ತಳಮಳವನ್ನು ಹಂಚಿಕೊಳ್ಳುವುದು ಅಂದರೆ ಶೇರ್ ಮಾಡಿಕೊಳ್ಳುವುದು ಬಹಳ ಮುಖ್ಯ. ಸ್ನೇಹಿತರ ಬಳಿಯಾದರೂ ಸರಿ ಹೇಳಿಕೊಳ್ಳಿ. ಆಗಲಿಲ್ಲವಾ ಆಪ್ತಸಮಾಲೋಚಕರು ಇರುತ್ತಾರೆ, ಬಂದು ನೋವು ತೋಡಿಕೊಳ್ಳಿ. ಒಟ್ಟಾರೆ ಮನಸ್ಸಿನಲ್ಲಿ ಪಾಸಿಟಿವಿಟಿ ಬೆಳೆಸಿಕೊಳ್ಳಿ.

ಕಲಾವಿದರ ನೋವು ಕೇಳುವ ವೇದಿಕೆ ಬೇಕು ಕೊರೊನಾ ಬಂದ ಮೇಲೆ ಹಲವು ಕಲಾವಿದರು ಆತ್ಮಹತ್ಯೆ ಮಾಡಿಕೊಂಡರು. ಜಯಶ್ರೀ ರಾಮಯ್ಯ ಸಮಸ್ಯೆ ಏನೆಂಬುದು ನನಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಆದರೆ ನನಗೆ ಅನ್ನಿಸುತ್ತದೆ ಅಂಥ ಕಲಾವಿದರ ನೋವನ್ನು ಮುಕ್ತವಾಗಿ ಹೇಳಿಕೊಳ್ಳಲು ಒಂದು ವೇದಿಕೆ ಬೇಕು. ಟಿವಿ ಚಾನೆಲ್​ಗಳಲ್ಲಾದರೂ ಒಂದು ಪ್ರೋಗ್ರಾಂ ಮಾಡಬೇಕು. ಯಾಕೆಂದರೆ ಅವರೂ ಕೂಡ ಎಂತೆಂಥದ್ದೋ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆರ್ಥಿಕ ಸಂಕಷ್ಟ ಇರಬಹುದು, ಖಿನ್ನತೆ ಇರಬಹುದು ಏನೇ ಇರಬಹುದು. ಅವರ ನೋವಿಗೆ ಸಾಂತ್ವನ ಸಿಗುವಂತಾಗಬೇಕು.

(ನಿರೂಪಣೆ: ಲಕ್ಷ್ಮೀ ಹೆಗಡೆ)

ಡಾ. ಸಿ.ಗುರುಪ್ರಸಾದ್

ಪರಿಚಯ ಡಾ.ಸಿ.ಗುರುಪ್ರಸಾದ್​ ಅವರು ಖ್ಯಾತ ಮನೋರೋಗ ತಜ್ಞರು. ಸದ್ಯ ಬೆಂಗಳೂರಿನ ಬೋರಿಂಗ್ ಆಸ್ಪತ್ರೆ, ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸೈಕಿಯಾಟ್ರಿ ಡಿಪಾರ್ಟ್​ಮೆಂಟ್​ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

Tv9 Digital Live | ಜಯಶ್ರೀ ರಾಮಯ್ಯಗೆ ಬೇಕಿತ್ತು ಸಾಂತ್ವನ, ಸಿಕ್ಕಿದ್ದು ನಿಂದನೆ

ಕ್ಲಿನಿಕಲ್​ ಡಿಪ್ರೆಶನ್​ಗೆ ಒಳಗಾಗಿದ್ದ ಜಯಶ್ರೀ ಸಂಬಂಧಗಳ ಬಗ್ಗೆ ತುಂಬ ಭಯ ಬೆಳೆಸಿಕೊಂಡಿದ್ದರು: ಭಾವನಾ ಬೆಳಗೆರೆ

ಬಣ್ಣದ ಲೋಕದ ಕನಸು ಕಂಡಿದ್ದ ಜಯಶ್ರೀಗೆ ಮನಸಿನ ಬಣ್ಣವೇ ಮಾಸಿಹೋಗಿತ್ತು; ಜೀವವನ್ನೇ ಕಸಿಯಿತು ಖಿನ್ನತೆಯೆಂಬ ಕೂಪ

‘5ನೇ ವಯಸ್ಸಿನಲ್ಲೇ ರೇಪ್​ ಆಗಿತ್ತು.. ನನ್ನನ್ನು ಹೆಣ್ಣುಮಕ್ಕಳೂ ಬಿಟ್ಟಿರಲಿಲ್ಲಮ್ಮಾ..’: ಜಯಶ್ರೀ ರಾಮಯ್ಯ ಅಂತರಾಳದ ನೋವು ರೇಖಾರಾಣಿ ಮಾತಿನಲ್ಲಿ

Published On - 9:01 pm, Tue, 26 January 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ