Daily Horoscope 1st Novermber 2024: ನವೆಂಬರ್ ಮೊದಲ ದಿನ ಯಾವ ರಾಶಿಗೆ ಏನು ಫಲ?

Daily Horoscope 1st November 2024: ನವೆಂಬರ್ 1,​ 2024ರ ನರಕ ಚತುರ್ದಶಿ​​ ದಿನ ನಿಮ್ಮ ಭವಿಷ್ಯ ಹೇಗಿದೆ? ಶುಕ್ರವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

Daily Horoscope 1st Novermber 2024: ನವೆಂಬರ್ ಮೊದಲ ದಿನ ಯಾವ ರಾಶಿಗೆ ಏನು ಫಲ?
ರಾಶಿ ಭವಿಷ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Nov 01, 2024 | 1:01 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತಿ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಆಯುಷ್ಮಾನ್​​, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:49 ರಿಂದ ಮಧ್ಯಾಹ್ನ 12:16 ರವರೆಗೆ, ಯಮಘಂಡ ಕಾಲ 15:10 ರಿಂದ 16:36ರವರೆಗೆ, ಗುಳಿಕ ಕಾಲ ಬೆಳಿಗ್ಗೆ 07:56 ರಿಂದ 09:23 ರವರೆಗೆ.

ಮೇಷ ರಾಶಿ :ಮಾತಿನಿಂದ ಗೆಲ್ಲುವುದು ಕಷ್ಟವಾದೀತು. ಕಾನೂನಿಗೆ ಯೋಗ್ಯವಾದ ದಾರಿಯಲ್ಲಿ ಸಂಪಾದನೆಯನ್ನು ಆಲೋಚಿಸಿ. ಮನಸ್ಸು ಬಿಚ್ಚಿ ಇಂದು ನೀವು ಯಾವ ಕಾರ್ಯವನ್ನೂ ಮಾಡುವುದಿಲ್ಲ. ಎಲ್ಲದಕ್ಕೂ ನಿಮ್ಮೊಳಗೆ ಭಯವಿರುವುದು. ಅತಿಯಾದ ಸುಖವು ನಿಮ್ಮ‌ ಕ್ರಿಯಾತ್ಮಕತೆಯನ್ನು ಕೊಲ್ಲುವುದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವುದು ನಿಮ್ಮ ಸ್ವಭಾವವಗಳಲ್ಲಿ ಒಂದು. ವಾಹನದ ಖರೀದಿಯನ್ನು ಮಾಡಬೇಕಾಗಿ ಬಂದಿರುವುದುರಿಂದ ಅನಿವಾರ್ಯವಾಗಿ ಸಾಲವನ್ನು ಮಾಡುವಿರಿ. ತಾಯಿಯ ಜೊತೆ ಜಗಳ ಮಾಡಿಕೊಳ್ಳಬೇಕಾಗುವುದು. ಇಂದು ಮನೆಯ ಕೆಲಸಗಳು ಪರ್ವತಾಕಾರದಲ್ಲಿ ಹಾಗೆಯೇ ಇರುವುದು. ಆಯಾಸದ ಕಾರಣ ಅಲ್ಪ ವಿಶ್ರಾಂತಿ ಬೇಕಾಗುವುದು. ಸಂಗಾತಿಯ ಮೇಲೆ ನಿಮಗೆ ಅನುಮಾನ ಹೊಗೆ ಕಾಣಿಸಬಹುದು. ಪ್ರೇಮವು ಮುರಿದು ಹೋಗುವ ಸಾಧ್ಯತೆ ಇದೆ. ಬಿಡಸಲಾಗದ ಸಮಸ್ಯೆಗಳು ನಿಮ್ಮನ್ನು ಇಬ್ಬಂದಿ ಮಾಡಬಹುದು. ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯುವ ಕಡೆ ಕೆಲಸ ಮಾಡುವಿರಿ.

ವೃಷಭ ರಾಶಿ :ನಿಮಗೆ ಆಗದವರಿಂದಲೇ ಸಹಕಾರವನ್ನು ಪಡೆಯಬೇಕಾಗಬಹುದು. ಕೆಲವು ಪ್ರತಿನಿಧಿಗಳಿಂದ ನಿಮಗೆ ಮಾನಸಿಕ ತೊಂದರೆಯಾಗಲಿದೆ. ಸಹೋದರರ ಶೀತಲ ಸಮರವು ಇಂದು ಎಲ್ಲರಿಗೂ ತಿಳಿಯಬಹುದು. ವ್ಯಾಪಾರವನ್ನು ನಿರ್ಲಕ್ಷ್ಯದಿಂದ ನಷ್ಟ ಮಾಡಿಕೊಳ್ಳುವಿರಿ. ಬಂಧುಗಳ ಮನೆಯಲ್ಲಿ ವಾಸಮಾಡಬೇಕಾದ ಸ್ಥಿತಿಯು ಬರಬಹುದು. ರಾಜಕೀಯದ ಹೊಡೆತದ ನೋವು ಬಾಧಿಸುವುದು. ಅಲ್ಪ ಆದಾಯಕ್ಕೆ ತೃಪ್ತಿಪಡಬೇಕಾಗುವುದು. ಇಂದು ಖುಷಿಯಿಂದ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ದಾಂಪತ್ಯವು ಆನಂದದಿಂದ ಇರಲು ಒಂದು ಕಡೆಯಿಂದ ಮಾತ್ರ ಸಹಕಾರ ಸಾಲದು. ಅಕ್ಷಮ್ಯ ತಪ್ಪಿಗೂ ಕ್ಷಮೆಯನ್ನು ನೀಡಿ ದೊಡ್ಡವರಾಗುವಿರಿ. ಹೊಗಳಿಕೆಯಿಂದ ನಿಮ್ಮ ದುಃಖಕ್ಕೆ ವಿರಾಮ ಸಿಗುವುದು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಉದಗವೇಗಕ್ಕೆ ಒಳಗಾಗದೇ ಇರಲು ನೀವು ಪ್ರಯತ್ನಿಸುವಿರಿ. ಸ್ನೇಹಿತರ ಇಚ್ಛೆಯನ್ನು ಪೂರೈಸಲು ನೀವು ಸಮರ್ಥರಾಗುವಿರಿ. ಸರಿಯಾದ ಹೂಡಿಕೆಯಿಂದ ನಿಮಗೆ ಲಾಭವಾಗುವುದು.

ಮಿಥುನ ರಾಶಿ :ಕಾರ್ಯವನ್ನು ನೋಡಿಕೊಂಡು ಬೇರೆಯಬರಿಗೆ ಸಮಯವನ್ನು ಕೊಡಿ. ನೀವು ಇಂದು ಆಡಿದ ದುಡುಕಿನ ಮಾತಿನಿಂದ ನಿಮ್ಮ ನೆಮ್ಮದಿ ಕೆಡುವುದು. ವಿದ್ಯಾಭ್ಯಾಸದಲ್ಲಿ ಒಂದು ಮಟ್ಟಿನ ಪ್ರಗತಿಯು ಇರಲಿದೆ. ಹಣದ ಹೊಂದಾಣಿಕೆಯು ಇಂದು ಕಷ್ಟವಾಗಬಹುದು. ವ್ಯಾವಹಾರಿಕ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಕೃಷಿ‌ಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೆಚ್ಚು ಮಾಡುವಿರಿ. ನಿಮಗೆ ಸಂಬಂಧಿಸಿದ ಕಾರ್ಯವನ್ನಷ್ಟೇ ಮಾಡಿ. ಎಲ್ಲವು ಸರಿ ಇದ್ದರೂ ತಪ್ಪನ್ನು ಹುಡುಕುವವರು ಇರುತ್ತಾರೆ. ಇಂದಿನ ಕೆಲವು ಸಂದರ್ಭವನ್ನು ನೀವು ನಿಭಾಯಿಸಲು ಕಷ್ಟವಾದೀತು. ಅತಿಯಾದ ಕೋಪವು ನಿಮ್ಮ ದಿನವನ್ನು ಕೆಡಿಸುವುದು. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಬಹಳ ದಿಮಗಳ ಅನಂತರ ನಿಮ್ಮ ಮನಸ್ಸು ಎಲ್ಲಿಲ್ಲದ ಉತ್ಸಾಹದಲ್ಲಿ ಇರುವುದು. ತಂದೆಯಿಂದ ನಿಮಗೆ ಅಲ್ಪ ಧನಸಹಾಯವಾಗಲಿದೆ.

ಕರ್ಕಾಟಕ ರಾಶಿ :ಮಾತುಗಾರರಿಗೆ ಒಳ್ಳೆಯ ಅವಕಾಶಗಳು ಲಭ್ಯವಾಗುವುದು. ನಿಮ್ಮ ಬದಲಾವಣೆಯನ್ನು ಕುಟುಂಬವು ಸ್ವೀಕರಿಸುವುದು ಕಷ್ಟ. ಬಂಧುಗಳ ಸ್ಥಿರಾಸ್ತಿಯ ಖರೀದಿಯನ್ನು ಮಾಡಲಿದ್ದೀರಿ. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ನಿಮ್ಮ ಗಾಂಭಿರ್ಯವು ನಿಮ್ಮರಿಗೆ ಭಯವನ್ನು ತರಿಸುವುದು. ಆಸ್ತಿಗೆ ಸಂಬಂಧಪಟ್ಟ ಹಳೆಯ ದಾಖಲೆಗಳನ್ನು ನೀವು ಪರಿಶೀಲಿಸುವಿರಿ. ಕೆಲವರ ಸಲಹೆಗಳು ನಿಮ್ಮ ಮನಸ್ಸಿಗೆ ಹೊಡಿಸದೇ ಇರಬಹುದು. ಇಂದಿನ‌ ನಿಮ್ಮ‌ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಯಾರ ಮಾತನ್ನೂ ಕೇಳುವ ಮನಃಸ್ಥಿತಿಯು ನಿಮ್ಮದಾಗಿ ಇರುವುದಿಲ್ಲ. ಯಾವುದನ್ನೂ ಆಗದು ಎಂಬ ಮಾತು ನಿಮ್ಮಿಂದ ಬರುವುದು ಬೇಡ. ಒಳ್ಳೆಯದರ ನಿರೀಕ್ಷೆಯಿಂದ ನಿಮಗೆ ಸಂತೋಷವಿದೆ. ನೀವು ಗೌಪ್ಯವಾಗಿ ಮಾಡುವ ಧನಸಂಪಾದನೆಯು ವ್ಯಕ್ತವಾಗಬಹುದು. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ.

ಸಿಂಹ ರಾಶಿ :ಎಂದೇ ಆದ ಪರಿಚಯದಿಂದ ನಿಮಗೆ ಸಹಾಯವಾಗಲಿದೆ. ವ್ಯವಹಾರವನ್ನು ತೂಗಿಸಿಕೊಂಡು ಹೋಗುವ ತಂತ್ರಗಳನ್ನು ಅರಿಯುವುದು ಉತ್ತಮ. ಉದ್ಯೋಗದ ನಿಮಿತ್ತ ಹೆಚ್ಚು ತಿರುಗಾಟವು ಆಗಲಿದೆ. ಸಂಗಾತಿಯ ಮಾತುಗಳು ನಿಮ್ಮ‌ ಸ್ವಾಭಿಮಾನಕ್ಕೆ ತೊಂದರೆಯನ್ನು ಉಂಟುಮಾಡುವುದು. ನೀವು ಅಪಮಾನವನ್ನೂ ಸಹಿಸಿಕೊಂಡು ಕೆಲಸದಲ್ಲಿ ಮಗ್ನರಾಗುವಿರಿ. ತಿರುಗೇಟು ನೀಡಲು ನೀವಾಗಿಯೇ ಪ್ರಯತ್ನ ಪಡುವುದು ಬೇಡ. ನಿಮ್ಮ ಶ್ರೇಯಸ್ಸನಲ್ಲಿ ಬಂಧುಗಳ‌ ಪಾತ್ರವು ಬಹಳ ಇರಲಿದೆ. ಸಾಮಾಜಿಕವಾಗಿ ಉತ್ತಮ‌ ಬಾಂಧವ್ಯವು ಇರಲಿದೆ‌. ನಿಮ್ಮ ಆಸಕ್ತಿಯ‌ ವಿಚಾರವು ಬದಲಾಗುವುದು. ನಿಮ್ಮ ಸ್ವಭಾವವು ದುರುಪಯೋಗ ಆಗುವುದು. ಕೃಷಿಯಲ್ಲಿ ಸಾಧಿಸಿದ ಖುಷಿ ಇರಲಿದೆ. ಅಕಾರಣವಾಗಿ ದುಃಖದ ಸನ್ನಿವೇಶಗಳು ಎದುರಾಗಬಹುದು. ಮನಸ್ಸಿಗೆ ಹಿಡಿಸುವ ಕೆಲಸವನ್ನು ಮಾಡಿ. ಕಾಕತಾಳೀಯವನ್ನೇ ನಿಜವೆಂದು ನಂಬುವಿರಿ.

ಕನ್ಯಾ ರಾಶಿ :ಪುಣ್ಯ ಕರ್ಮಗಳು ನಿಮಗೆ ಫಲವನ್ನು ಕೊಡಲಿವೆ. ವಿಶ್ವಾಸವನ್ನು ಗಳಿಸದೇ ನೀವು ವ್ಯವಹಾರದಲ್ಲಿ ಯಶಸ್ಸು ಸಾಧ್ಯವಾಗದು. ಆರ್ಥಿಕತೆಯನ್ನು ನೀವು ಬಲಗೊಳಿಸಿಕೊಳ್ಳುವಿರಿ. ದುರಭ್ಯಾಸದಿಂದ ಧನನಷ್ಟವನ್ನು ಮಾಡಿಕೊಳ್ಳುವಿರಿ. ಮಿತ್ರರಿಂದ ನಿಮಗೆ ಮೋಸವಾಗುವುದು. ವ್ಯಾವಹಾರಿಕ ಸಂಬಂಧಗಳನ್ನು ಹಾಗೆಯೇ ಉಳಿಸಿಕೊಳ್ಳಿ. ಧಾರ್ಮಿಕ ವಿಚಾರದಲ್ಲಿ ನೀವು ಹೆಚ್ಚು ತಿಳಿವಳಿಕೆಯು ಇರಲಿದೆ. ವಿದೇಶವನ್ನು ಸುತ್ತುವ ಮನಸ್ಸಾಗಲಿದೆ. ಸ್ಥಿರಾಸ್ತಿಯನ್ನು ಸ್ವಲ್ಪ ನಷ್ಟಕೊಳ್ಳುವಿರಿ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಸಕಾರಾತ್ಮಕ ವಿಚಾರಕ್ಕೆ ನಿಮಗೆ ಪ್ರಶಂಸೆಯು ಸಿಗಬಹುದು. ವಿನ್ಯಾಸಕಾರರಿಗೆ ಇಂದು ಬಿಡುವು ಇರದು. ಸಹೋದ್ಯೋಗಿಯ ಜೊತೆ ಪ್ರೇಮವಾಗುವುದು. ಪೆಟ್ಟು ತಿನ್ನದ ಶಿಲೆಯು ಶಿಲ್ಪವಾಗದು ಎಂಬ ಮಾತು ನೆನಪಿರಲಿ. ಭವಿಷ್ಯದ ಕುರಿತ ನಿಮ್ಮ ಯೋಜನೆಗಳು ಸುರಕ್ಷಿತವೇ ಎಂದು ತಿಳಿಯಿರಿ.

ತುಲಾ ರಾಶಿ :ನಿಮ್ಮ ದ್ವಂದ್ವಗಳಿಗೆ ಕೂಡಲೇ ಪರಿಹಾರ ಸಿಗುತ್ತದೆ. ಆದೇ ಅದನ್ನು ಕಾಣುವ ದೃಷ್ಟಿ ಬೇಕು. ಇಂದು ನಿಮ್ಮ ಮನಸ್ಸನ್ನು ಒಂದೇ ಕಾರ್ಯದಲ್ಲಿ ನಿಲ್ಲಿಸಲಾಗದು. ನಾಜೂಕಾದ ಕಾರ್ಯಗಳಿಗೆ ನಿಮಗೆ ಪ್ರಶಂಸೆಯೂ ಅಪಹಾಸ್ಯವೂ ಸಿಗಲಿದೆ. ಕೋಪದಿಂದ ನಿಮ್ಮ‌ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಕುಟುಂಬದ ಕಲಹಕ್ಕೆ ಹೆದರಿ ಹೊಸ ಜೀವನವನ್ನು ನಡೆಸಲು ಇಚ್ಛಿಸುವಿರಿ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗುವುದು. ಖರ್ಚಿನ ಬಗ್ಗೆ ಸರಿಯಾದ ಚಿತ್ರಣವಿರಲಿ.‌ ನಿಮ್ಮ ವಸ್ತುಗಳು ಕಾಣಿದಸದೇ ಉದ್ವೇಗಕ್ಕೆ ಸಿಕ್ಕಿಕೊಳ್ಳುವಿರಿ. ಎಲ್ಲವೂ ನಿಮಗೆ ದುರದೃಷ್ಟದಂತೆ ತೋರುವುದು. ಸ್ನೇಹಿತರ ನೋವಿಗೆ ಸ್ಪಂದಿಸಿದೇ ಇರಲು ಆಗದು. ನಿಮ್ಮ ಅಭಿರುಚಿಗೆ ಪ್ರೋತ್ಸಾಹವು ಸಿಗಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಉದ್ಯಮದಲ್ಲಿ ನಿಮಗೆ ಆಗದವರನ್ನು ಕೈ ಬಿಡುವಿರಿ.

ವೃಶ್ಚಿಕ ರಾಶಿ :ಭೂ ವ್ಯವಹಾರದಲ್ಲಿ ಒಬ್ಬರಿಗೂ ಹೊಂದಾಣಿಕೆ ಆಗದೇ ತಪ್ಪು ಹೋಗಬಹುದು. ಸಭ್ಯತೆಯನ್ನು ನೀವು ಉಳಿಸಿಕೊಳ್ಳುವುದು ಕಷ್ಟ. ಜಾಣ್ಮೆಯಿಂದ ಮಾಡುವ ಸರ್ಕಾರದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಯ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಬರುವ ಅಡೆತಡೆಗಳನ್ನು ನೀವು ಧೈರ್ಯವಾಗಿ ಎದುರಿಸುವಿರಿ. ಕೆಲವನ್ನು ಉದ್ವಿಗ್ನತೆಯಿಂದ ಮಾಡುವಿರಿ. ಒಂದೇ ವಿಚಾರವನ್ನು ಮತ್ತೆ ಹೇಳಿ ಹಿಂಸಿಸುವುದು ಬೇಡ. ನಿಮ್ಮ‌ ಕನಸನ್ನು ಸಾಕಾರಗೊಳಿಕೊಳ್ಳುವತ್ತ ನಿಮ್ಮ ಆಲೋಚನೆಯು ಇರಲಿದೆ. ಪ್ರೇಮ‌ಸಂಬಂಧವು ಸಡಿಲವಾಗಬಹುದು. ಯಾರಿಗಾದರೂ ನಿಮ್ಮ ಯೋಗ್ಯತೆಗೆ ಅನುಸಾರವಾಗಿ ಧನ ಸಹಾಯವನ್ನು ಮಾಡುವಿರಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ‌ ಮೇಲೆ ಪ್ರಭಾವವನ್ನು ಬೀರುವುದು.

ಧನು ರಾಶಿ :ಯಾವ ಗಾಯವೇ ಆದರೂ ಆರಲು ದಿನ ಬೇಕು. ಅದನ್ನು ಕೆರಳಿಸಲು ಹೋಗುವುದು ಬೇಡ. ಈಗ ಮಾಡುತ್ತಿರುವ ಉದ್ಯೋಗದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು. ಆರ್ಥಿಕಸ್ಥಿತಿಯಲ್ಲಿ ಚೇತರಿಕೆ ಇರಲಿದೆ‌. ಮಹಿಳೆಯರಿಗೆ ಹೆಚ್ಚಿನ ಸಹಕಾರವು ಸಿಕ್ಕಿ ಇಂದಿನ‌ ಕಾರ್ಯವು ಅನಾಯಾಸವಾಗಿ ಮುಗಿಯುವುದು. ಉನ್ನತ ಅಧಿಕಾರದ ಆಸೆಯನ್ನು ಆಪ್ತರು ನಿಮ್ಮೊಳಗೆ ತುಂಬುವರು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗಬಹುದು. ಇಂದಿನ ನಿಮ್ಮ ಕಾರ್ಯಕೌಶಲಕ್ಕೆ ಬೆರಗಾಗಬಹುದು. ಸಂತೋಷವನ್ನು ಹೆಚ್ಚಿಸಿಕೊಳ್ಳಲು ಆಗದು. ನಿಮ್ಮ ಕನಸುಗಳು ಭಗ್ನವಾಗಬಹುದು. ನಿಮ್ಮ ಮನಸ್ಸು ಹತಾಶೆಯಿಂದ ಇರುವುದು. ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಯೋಚಿಸುವುದು ಒಳ್ಳೆಯದು. ನಿಮ್ಮ ಭಾವವನ್ನು ಯಾರೂ ಅರ್ಥಮಾಡಿಕೊಳ್ಳಲಾರರು. ನಿಮ್ಮ ಉದ್ದೆಶವು ದಾರಿ ತಪ್ಪುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾಧ್ಯತೆ ಇದೆ.

ಮಕರ ರಾಶಿ :ಪ್ರಯತ್ನಿಸಿದ ಕಾರ್ಯದಲ್ಲಿ ನಿಮಗೆ ಸಮಾಧಾನ ಇರುವುದು. ಅವಕಾಶಗಳನ್ನು ನೀವು ಪರೀಕ್ಷಿಸಿ ಒಪ್ಪಿಕೊಳ್ಳುವಿರಿ. ಊಹಿಸದ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯಬಹುದು. ಗಣ್ಯರ ಭೇಡಿಯಾಗಲಿದೆ. ಅಧಿಕಾರಿಗಳ ಜೊತೆ ಉದ್ಯೋಗದ ವಿಚಾರವನ್ನು ಚರ್ಚಿಸುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಬರುವುದು ನಿಮಗೆ ಕಷ್ಟವಾಗುವುದು. ಸಂಗಾತಿಯಿಂದ ಮಾನಸಿಕ ಒತ್ತಡ ಎನಿಸಬಹುದು. ನಿಮ್ಮ‌ನ್ನು ಅರ್ಥಮಾಡಿಕೊಳ್ಳದೇ ನಿಮ್ಮಿಂದ ದೂರಾಗಬಹುದು. ಇಂದು ನಿಮ್ಮ ರೂಪಕ್ಕೆ ಆಕರ್ಷಣೆ ಇರಲಿದೆ. ವಾಹನದ ಓಡಾಟವನ್ನು ನೀವು ನಿಲ್ಲಿಸಿ. ಆಹಾರದ ಸ್ವೀಕಾರದ ಸಮಯವು ವಿಳಂಬವಾಗಬಹುದು. ನೆರೆಹೊರೆಯ ಜೊತೆ ವಾಗ್ವಾದ ನಡೆಯಬಹುದು. ಯಾರನ್ನು ಬೆರಳು ಮಾಡಿ ತೋರಿಸಬೇಡಿ. ನಿಮ್ಮ ಕೊರತೆಯನ್ನು ನೀವು ಮುಚ್ಚಿಡುವಿರಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ನೀವಾಗಿಯೇ ಕಾರ್ಯಗಳನ್ನು ಮೈಮೇಲೆ ತಂದುಕೊಳ್ಳುವಿರಿ.

ಕುಂಭ ರಾಶಿ :ಉದ್ಯೋಗಕ್ಕಾಗಿ ದೂರ ತೆರಳುವುದು ನಿಮ್ಮವರಿಗೆ ಇಷ್ಟವಾಗದು. ಸುಮ್ಮನೆ ಮನೆಯಿಂದ ಎಲ್ಲಿಗಾದರೂ ಹೋಗುವಿರಿ. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ನಿಮ್ಮದಾದ ವಸ್ತುವನ್ನು ನೀವು ಪಡೆಯಲು ಕಷ್ಟವಾಗುವುದು. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇದ್ದರೂ ಅನವಾರ್ಯವಾಗುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಯಾರಾದರೂ ಪ್ರಶ್ನಿಸಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಮಾಹಿತಿ ಇರಲಿ. ಹಳೆಯ ನೆನಪುಗಳನ್ನು ನಿಮ್ಮನ್ನು ಕಾಡಬಹುದು. ಗಾಯವನ್ನು ಕೆರೆದು ಹುಣ್ಣು ಮಾಡಿಕೊಳ್ಳುವಿರಿ. ಇಂದಿನ ಪ್ರಯಾಣವು ಬಹಳ ಕಷ್ಟಕರ ಎನಿಸಬಹುದು. ದಾಂಪತ್ಯಕ್ಕೆ ಹೆಚ್ಚಿನ ಸಮಯವನ್ನು ಕೊಡುವಿರಿ. ಪುಣ್ಯ ಸ್ಥಳಗಳ ಬಗ್ಗೆ ಮಾಹಿತಿಯು ಸಿಗುವುದು. ಸಾಲದ ಮುಕ್ತಾಯವು ಕಷ್ಟವಾಗಬಹುದು. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು. ತಾಯಿಯಿಂದ ನಿಮಗೆ ಏನಾದರೂ ಉಡುಗೊರೆಯಾಗಿ ಸಿಗಬಹುದು. ನಿಮ್ಮನ್ನು ಯಾರಾದರೂ ಗುಪ್ತವಾಗಿ ಗಮನಿಸಬಹುದು.

ಮೀನ ರಾಶಿ :ಇಂದು ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣುವುದು ಬೇಡ. ತಾಳ್ಮೆಯಿಂದ ಕೆಲಸಗಳನ್ನು ಪೂರ್ಣ ಮಾಡಿ ನೀವು ಯಶಸ್ವಿಯಾಗುವಿರಿ. ಶುಭಾಶುಭಗಳಿಗೆ ಎಲ್ಲದಕ್ಕೂ ಕಾರಣವು ಇರಲಿದೆ. ಅನಾಯಾಸವಾಗಿ ಸಿಕ್ಕ ಅವಕಾಶಗಳು ನಿಮಗೆ ಇಷ್ಟವಾಗದು. ಯಾರ ಪ್ರಭಾವವನ್ನೂ ನೀವು ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ನಿಮ್ಮ ಕಾರ್ಯದ ಮೇಲೆ ನಿಮಗೆ ಗಮನವು ಕಡಿಮೆ ಆಗಬಹುದು. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹವು ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಳ್ಳುವಿರಿ. ಉದ್ಯೋಗದ ದೃಢತೆಯನ್ನು ನೀವು ಸಾಬೀತುಮಾಡಿಸಿಕೊಳ್ಳುವಿರಿ. ಸುಳ್ಳಾಡುವವರ ಬಗ್ಗೆ ಅತಿಯಾದ ಕೋಪವಿರಲಿದೆ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಆದಷ್ಟು ಬೇರೆ ಚಟುವಟಿಕೆಗಳ ಮೂಲಕ ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತವಾದ ಸ್ಥಳವೂ ನಿಮಗೆ ಬಹಳ ಆಪ್ತ ಎನಿಸುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ಗ್ಯಾರಂಟಿ ಯೋಜನೆಗಳ ಬಗ್ಗೆ ಯೋಚನೆ ಮಾಡಿದ್ದೇ ಡಿಕೆ ಶಿವಕುಮಾರ್: ಹೆಬ್ಬಾಳ್ಕರ್
ಗ್ಯಾರಂಟಿ ಯೋಜನೆಗಳ ಬಗ್ಗೆ ಯೋಚನೆ ಮಾಡಿದ್ದೇ ಡಿಕೆ ಶಿವಕುಮಾರ್: ಹೆಬ್ಬಾಳ್ಕರ್
ವೈಟ್​ಹೌಸ್​ನಲ್ಲೂ ದೀಪಾವಳಿ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್
ವೈಟ್​ಹೌಸ್​ನಲ್ಲೂ ದೀಪಾವಳಿ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್
ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್, ಯಾವ ಕಾರಣಕ್ಕೂ ನಿಲ್ಲಿಸಲಾಗದು: ಮಂಜು
ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್, ಯಾವ ಕಾರಣಕ್ಕೂ ನಿಲ್ಲಿಸಲಾಗದು: ಮಂಜು
ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಿದ್ದರಾಮಯ್ಯ
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಿದ್ದರಾಮಯ್ಯ
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
‘ಬಘೀರ’ ಯಶಸ್ಸು: ಪುನೀತ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ
‘ಬಘೀರ’ ಯಶಸ್ಸು: ಪುನೀತ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ