IPL 2020: ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಕನ್ನಡಿಗ ದೇವದತ್ ಪಡಿಕ್ಕಲ್!
ಮರಳುಗಾಡಿನ ಮಹಾಯುದ್ಧದಲ್ಲಿ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್, ತಾನೇಂತ ಪುಟಕ್ಕಿಟ್ಟ ಚಿನ್ನ ಅನ್ನೋದನ್ನ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ತೋರಿಸಿಕೊಟ್ಟಿದ್ದಾನೆ. ಬಲಿಷ್ಟ ಹೈದ್ರಾಬಾದ್ ಬೌಲರ್ಗಳನ್ನೇ ದಂಡಿಸಿ, ವಯಸ್ಸು ಚಿಕ್ಕದಾದ್ರೂ ಪ್ರತಿಭೆಗೆ ವಯಸ್ಸಿನ ಲೆಕ್ಕವಿಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾನೆ. ಪಡಿಕ್ಕಲ್ಗೆ ತುಂಬಾ ಇಷ್ಟವಾದ ಕನ್ನಡ ಸಾಂಗ್ ಇದೇ. ಪುನೀತ್ ರಾಜಕುಮಾರ್ ಅಭಿನಯದ ಪವರ್ ಸಿನಿಮಾದ ಧಮ್ ಪವರೇ… ಈ ಹಾಡಿನ ಪವರ್ಗೆ ತಕ್ಕಂತೆ ಪಡಿಕ್ಕಲ್, ದುಬೈ ಅಂಗಳದಲ್ಲಿ ಹೈದ್ರಾಬಾದ್ ಬೌಲರ್ಗಳ ಬೆವರಿಳಿಸಿದ್ದಾನೆ. ಆರ್ಸಿಬಿ ಸೋಲಿಸ್ತೀವಿ ಅಂತಾ ವಾರ್ನಿಂಗ್ ಕೊಟ್ಟಿದ್ದ ಹೈದ್ರಾಬಾದ್ ನಾಯಕ […]

ಮರಳುಗಾಡಿನ ಮಹಾಯುದ್ಧದಲ್ಲಿ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್, ತಾನೇಂತ ಪುಟಕ್ಕಿಟ್ಟ ಚಿನ್ನ ಅನ್ನೋದನ್ನ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ತೋರಿಸಿಕೊಟ್ಟಿದ್ದಾನೆ. ಬಲಿಷ್ಟ ಹೈದ್ರಾಬಾದ್ ಬೌಲರ್ಗಳನ್ನೇ ದಂಡಿಸಿ, ವಯಸ್ಸು ಚಿಕ್ಕದಾದ್ರೂ ಪ್ರತಿಭೆಗೆ ವಯಸ್ಸಿನ ಲೆಕ್ಕವಿಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾನೆ.
ಪಡಿಕ್ಕಲ್ಗೆ ತುಂಬಾ ಇಷ್ಟವಾದ ಕನ್ನಡ ಸಾಂಗ್ ಇದೇ. ಪುನೀತ್ ರಾಜಕುಮಾರ್ ಅಭಿನಯದ ಪವರ್ ಸಿನಿಮಾದ ಧಮ್ ಪವರೇ…
ಈ ಹಾಡಿನ ಪವರ್ಗೆ ತಕ್ಕಂತೆ ಪಡಿಕ್ಕಲ್, ದುಬೈ ಅಂಗಳದಲ್ಲಿ ಹೈದ್ರಾಬಾದ್ ಬೌಲರ್ಗಳ ಬೆವರಿಳಿಸಿದ್ದಾನೆ. ಆರ್ಸಿಬಿ ಸೋಲಿಸ್ತೀವಿ ಅಂತಾ ವಾರ್ನಿಂಗ್ ಕೊಟ್ಟಿದ್ದ ಹೈದ್ರಾಬಾದ್ ನಾಯಕ ವಾರ್ನರ್ ಎದುರೇ, ಪಡಿಕ್ಕಲ್ ಭರ್ಜರಿ ಅರ್ಧಶತಕ ಸಿಡಿಸಿ ಶಾಕ್ ಕೊಟ್ಟುಬಿಟ್ಟ.
ಹೈದ್ರಾಬಾದ್ ವಿರುದ್ಧ ದೇವದತ್
ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 42 ಎಸೆತಗಳನ್ನ ಎದುರಿಸಿದ ದೇವದತ್, 8 ಆಕರ್ಷಕ ಬೌಂಡರಿ ನೆರವಿನೊಂದಿಗೆ 56 ರನ್ಗಳಿಸಿದ್ರು. ಹೀಗೆ ಐಪಿಎಲ್ನಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಆರ್ಸಿಬಿ ತಂಡದ 5ನೇ ಆಟಗಾರ ಅನ್ನೋ ಹಿರಿಮೆಯನ್ನ ತನ್ನದಾಗಿಸಿಕೊಂಡ್ರು.
ದೇಸಿ ಕ್ರಿಕೆಟ್ನಿಂದ ಐಪಿಎಲ್ವರೆಗೆ.. ದಾಖಲೆ ವೀರ ದೇವದತ್! ದೇವದತ್ ದೇಸಿ ಕ್ರಿಕೆಟ್ನಿಂದ ಐಪಿಎಲ್ವರೆಗೂ ಪದಾರ್ಪಣೆ ಮಾಡಿದ ಎಲ್ಲಾ ಫಾರ್ಮೆಟ್ನಲ್ಲೂ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾನೆ. ಫಸ್ಟ್ ಕ್ಲಾಸ್, ಲಿಸ್ಟ್ ಎ, ಟಿಟ್ವೆಂಟಿ ಕ್ರಿಕೆಟ್ನಲ್ಲಿ ಅರ್ಧಶತಕ ಸಿಡಿಸಿದ್ದ ಪಡಿಕ್ಕಲ್, ಈಗ ಐಪಿಎಲ್ನಲ್ಲೂ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದಾನೆ.
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರ ಪ್ರಕಾರ, ಪಡಿಕ್ಕಲ್ ಕರ್ನಾಟಕದಿಂದ ಭಾರತ ತಂಡವನ್ನ ಪ್ರತಿನಿಧಿಸೋ ಮತ್ತೊಬ್ಬ ಪ್ರತಿಭಾವಂತ ಕ್ರಿಕೆಟಿಗ. ನಿಜಕ್ಕೂ ಇದ್ರಲ್ಲಿ ಅತಿಶಯೋಕ್ತಿ ಇಲ್ಲ. ಯಾಕಂದ್ರೆ ಪಡಿಕ್ಕಲ್, ಮೊದಲ ಪಂದ್ಯದಲ್ಲಿ ನೀಡಿದ ಸಾಲಿಡ್ ಪ್ರದರ್ಶನವೇ ಸಾರಿ ಹೇಳ್ತಿದೆ. ಈತನಿಗೆ ಭವ್ಯ ಬವಿಷ್ಯವಿದೆ ಅನ್ನೋದನ್ನ.