ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲುವನ್ನ ಕಸಿದುಕೊಂಡ ಆನ್ಫೀಲ್ಡ್ ಅಂಪೈರ್
ಕೊನೇ ಎಸೆತದವರೆಗೂ ರಣರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಸೂಪರ್ ಓವರ್ನಲ್ಲಿ ಪಂದ್ಯ ಗೆದ್ದು ಬೀಗಿತು. ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ, ಇದೇ ಪಂದ್ಯದಲ್ಲಿ ಪಂಜಾಬ್ ಸೋಲೋದಕ್ಕೆ ಅಂಪೈರ್ ಮಾಡಿದ ಮಹಾ ಪ್ರಮಾದವೇ ಕಾರಣ. ಡೆಲ್ಲಿ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಅಂಪೈರ್ ಮಾಡಿದ ಮಹಾ ಎಡವಟ್ಟಿನಿಂದ, ಸೂಪರ್ ಓವರ್ ನಡೆಯೋ ಹಾಗಾಯ್ತು. ಪಂಜಾಬ್ ತಂಡ ಸೋಲೋ ಹಾಗಾಯ್ತು. ಒಂದು ವೇಳೆ ಆನ್ಫೀಲ್ಡ್ ಅಂಪೈರ್ ಪ್ರಮಾದ ಮಾಡದೇ ಇದ್ದಿದ್ರೆ, ಪಂಜಾಬ್ ಗೆಲುವಿನ ಕೇಕೆ ಹಾಕ್ತಿತ್ತು. ಅಂಪೈರ್ ನಿತಿನ್ […]

ಕೊನೇ ಎಸೆತದವರೆಗೂ ರಣರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಸೂಪರ್ ಓವರ್ನಲ್ಲಿ ಪಂದ್ಯ ಗೆದ್ದು ಬೀಗಿತು. ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ, ಇದೇ ಪಂದ್ಯದಲ್ಲಿ ಪಂಜಾಬ್ ಸೋಲೋದಕ್ಕೆ ಅಂಪೈರ್ ಮಾಡಿದ ಮಹಾ ಪ್ರಮಾದವೇ ಕಾರಣ.
ಡೆಲ್ಲಿ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಅಂಪೈರ್ ಮಾಡಿದ ಮಹಾ ಎಡವಟ್ಟಿನಿಂದ, ಸೂಪರ್ ಓವರ್ ನಡೆಯೋ ಹಾಗಾಯ್ತು. ಪಂಜಾಬ್ ತಂಡ ಸೋಲೋ ಹಾಗಾಯ್ತು. ಒಂದು ವೇಳೆ ಆನ್ಫೀಲ್ಡ್ ಅಂಪೈರ್ ಪ್ರಮಾದ ಮಾಡದೇ ಇದ್ದಿದ್ರೆ, ಪಂಜಾಬ್ ಗೆಲುವಿನ ಕೇಕೆ ಹಾಕ್ತಿತ್ತು.
ಅಂಪೈರ್ ನಿತಿನ್ ಮೆನನ್ ಎಡವಟ್ಟು.. ಪಂಜಾಬ್ಗೆ ಸೋಲು!
ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕಿಂಗ್ಸ್ ಇಲೆವೆನ್ಗೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಮಾಡಿ, ಗೆಲುವಿನ ದಡಕ್ಕೆ ಕೊಂಡೊಯ್ದಿದ್ರು. ಕಗಿಸೋ ರಬಾಡರ 19ನೇ ಓವರ್ನ 2ನೇ ಎಸೆತವನ್ನ ಮಯಾಂಕ್ ಬೌಂಡರಿ ಬಾರಿಸಿದ್ರು. 3ನೇ ಎಸೆತವನ್ನ ಎಕ್ಟ್ರಾ ಕವರ್ನತ್ತ ಚೆಂಡನ್ನ ಡ್ರೈವ್ ಮಾಡಿದ್ದ ಮಯಾಂಕ್, ಎರಡು ರನ್ ಓಡಿದ್ರು.
ಇಲ್ಲೇ ನೋಡಿ.. ಅಂಪೈರ್ ನಿತಿನ್ ಮೆನನ್ ಮಾಡಿದ ಮಹಾ ಎಡವಟ್ಟು. ಮಯಾಂಕ್ ಅಗರ್ವಾಲ್, ಎರಡು ರನ್ನ್ನ ಕಂಪ್ಲೀಟ್ ಆಗಿ ಓಡಿರ್ತಾರೆ. ಆದ್ರೆ, ಇನ್ನೊಂದು ಬದಿಯಲ್ಲಿದ್ದ ಕ್ರಿಸ್ ಜೋರ್ಡನ್, ಸರಿಯಾಗಿ ಗೆರೆ ಮುಟ್ಟಿಲ್ಲ ಅಂತ ಒಂದು ರನ್ ಕಡಿತಗೊಳಿಸಿದ್ರು.
ಕ್ರಿಕೆಟ್ ಆಡೋ ಪ್ರತಿಯೊಬ್ಬರಿಗೂ ಗೊತ್ತಾಗುತ್ತೆ ಜೋರ್ಡಾನ್ ಕ್ರೀಸ್ ಗೆರೆ ಮುಟ್ಟಿದ್ದಾರೆ ಅನ್ನೋದು. ಆದ್ರೆ, ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಆಗಿರೋ ನಿತಿನ್ ಮೆನನ್, ಜೋರ್ಡಾನ್ ಸರಿಯಾಗಿ ಗೆರೆ ಮುಟ್ಟಿಲ್ಲ. ಇದು ಶಾರ್ಟ್ ರನ್ ಅಂತ ಒಂದೇ ರನ್ ನೀಡಿಬಿಡ್ತಾರೆ.
ಅಂಪೈರ್ ಮೆನನ್ ವಿರುದ್ಧ ಸೆಹ್ವಾಗ್ ಕಿಡಿ! ಇನ್ನೂ ಅಂಪೈರ್ ಮೆನನ್ ಎಡವಟ್ಟಿನ ಬಗ್ಗೆ ಪಂಜಾಬ್ ತಂಡ, ಮ್ಯಾಚ್ ರೆಫ್ರಿಗೆ ವರದಿ ಸಲ್ಲಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೆನನ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಕಾಮೆಂಟೆರಿ ಮಾಡ್ತಿದ್ದ ಸುನಿಲ್ ಗವಾಸ್ಕರ್ ಕೂಡ, ಇದು ಸರಿಯಾದ ನಿರ್ಧಾರವಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಈ ಪಂದ್ಯದಲ್ಲಿ ಅಂಪೈರ್ ಮೆನನ್ಗೆ ಮ್ಯಾಚ್ ಆಫ್ ದಿ ಮ್ಯಾಚ್ ಕೊಡ್ಬೇಕು ಅಂತ ಟೀಕೆ ಮಾಡಿದ್ದಾರೆ.
ಆನ್ಫೀಲ್ಡ್ ಅಂಪೈರ್ ಇಂದ ಏನೋ ಮಿಸ್ಟೇಕ್ ಆಗಿದೆ ಅಂತಿಟ್ಕೊಳ್ಳೋಣ. ಆದ್ರೆ ಥರ್ಡ್ ಅಂಪೈರ್ ಹಾಗೂ ಸಾಕಷ್ಟು ಟೆಕ್ನಾಲಜಿ ಮುಂದುವರೆದಿದ್ರೂ, ಪಂಜಾಬ್ ತಂಡಕ್ಕೆ ಆನ್ ಫೀಲ್ಡ್ ಅಂಪೈರ್ಗಳಿಂದ ಮೋಸವಾಗಿರೋದು ನಿಜಕ್ಕೂ ದುರಂತ.




