10 ವರ್ಷದಿಂದ ಬತ್ತಿದ್ದ ಕೊಳವೆ ಬಾವಿಗಳಿಗೆ ಮರು ಜೀವ! ಉಕ್ಕುತ್ತಿದ್ದಾಳೆ ಗಂಗೆ..

  • TV9 Web Team
  • Published On - 13:27 PM, 14 Oct 2020
10 ವರ್ಷದಿಂದ ಬತ್ತಿದ್ದ ಕೊಳವೆ ಬಾವಿಗಳಿಗೆ ಮರು ಜೀವ! ಉಕ್ಕುತ್ತಿದ್ದಾಳೆ ಗಂಗೆ..

ಬಾಗಲಕೋಟೆ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬತ್ತಿದ್ದ ಕೊಳವೆ ಬಾವಿಗಳು ಮರು ಜೀವ ಪಡೆದುಕೊಳ್ಳುತ್ತಿವೆ. 10 ವರ್ಷಗಳಿಂದ ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಕೆರೆಗಳು ತುಂಬಿವೆ. ರಸ್ತೆಗಳಲ್ಲಿ ನೀರು ನಿಂತಿದೆ. ಇದರ ಜೊತೆಗೆ ಜಿಲ್ಲೆಯ ಹಲವೆಡೆ ಹಲವು ವರ್ಷಗಳಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಹರಿಯುತ್ತಿದೆ.

ಚಿಮ್ಮಡ, ರಬಕವಿಯ ಬ್ರಹ್ಮಾನಂದ ನಗರದಲ್ಲಿನ ವಿಜಯ ಹೂಗಾರ ಮನೆಯ ಬೋರ್‌ವೆಲ್‌ನಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದನ್ನು ಕಂಡು ಬೋರ್‌ವೆಲ್‌ ಮಾಲೀಕ ಸಂತಸ ವ್ಯಕ್ತಪಡಿಸಿದ್ದಾನೆ. ಆದರೆ ಜಿಲ್ಲೆಯ ಬೇರೆ ಬೇರೆ ಕಡೆ ಮಳೆ ಅನಾಹುತ ಸೃಷ್ಟಿಸಿದ್ದು, ಅನುಕೂಲವೂ ಆಗಿದೆ.