Lockdown ಟೈಂ​ನಲ್ಲಿ ಈ ಬಾಯ್ಸ್ ಫುಡ್ ಡೆಲಿವರಿ ಮಾಡ್ತಿದ್ರಾ, Drugs Supply ಮಾಡ್ತಿದ್ರಾ!?

ಬೆಂಗಳೂರು: ಲಾಕ್‌ಡೌನ್ ಸಮಯದಲ್ಲೂ ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೈಯಾಗಿದ್ದು, ಪೊಲೀಸರಿಗೂ ಅನುಮಾನ ಬಾರದಂತೆ ಫುಡ್ ಡೆಲಿವರಿ ಬಾಯ್ಸ್‌ನಂತೆ ಹೋಗಿ ಮಾದಕವಸ್ತು ಸಪ್ಲೈ ಮಾಡಿದ್ದಾರೆ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ. Essential Services ಸೋಗಿನಲ್ಲಿ ಡ್ರಗ್ಸ್ ಸಪ್ಲೈ! ಆರೋಪಿಗಳು ಅಗತ್ಯ ಸೇವೆ ಹೆಸರಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎನ್ನಲಾಗಿದೆ. ಪ್ರತಿಷ್ಠಿತ ಫುಡ್ ಡೆಲಿವರಿ ಕಂಪನಿಯ ಟಿ-ಶರ್ಟ್ ಧರಿಸಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು. ಹೈ-ಫೈ ಏರಿಯಾಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಪೆಡ್ಲರ್‌ಗಳು ಎಂ.ಜಿ.ರೋಡ್, ಹಲಸೂರು, ಜಯನಗರ, ಜೆ.ಪಿ.ನಗರ, ಕಮ್ಮನಹಳ್ಳಿ, ಬಾಣಸವಾಡಿ, ಕೋರಮಂಗಲ, […]

Lockdown ಟೈಂ​ನಲ್ಲಿ ಈ ಬಾಯ್ಸ್ ಫುಡ್ ಡೆಲಿವರಿ ಮಾಡ್ತಿದ್ರಾ, Drugs Supply ಮಾಡ್ತಿದ್ರಾ!?

Updated on: Sep 17, 2020 | 12:12 PM

ಬೆಂಗಳೂರು: ಲಾಕ್‌ಡೌನ್ ಸಮಯದಲ್ಲೂ ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೈಯಾಗಿದ್ದು, ಪೊಲೀಸರಿಗೂ ಅನುಮಾನ ಬಾರದಂತೆ ಫುಡ್ ಡೆಲಿವರಿ ಬಾಯ್ಸ್‌ನಂತೆ ಹೋಗಿ ಮಾದಕವಸ್ತು ಸಪ್ಲೈ ಮಾಡಿದ್ದಾರೆ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ.

Essential Services ಸೋಗಿನಲ್ಲಿ ಡ್ರಗ್ಸ್ ಸಪ್ಲೈ!
ಆರೋಪಿಗಳು ಅಗತ್ಯ ಸೇವೆ ಹೆಸರಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎನ್ನಲಾಗಿದೆ. ಪ್ರತಿಷ್ಠಿತ ಫುಡ್ ಡೆಲಿವರಿ ಕಂಪನಿಯ ಟಿ-ಶರ್ಟ್ ಧರಿಸಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು. ಹೈ-ಫೈ ಏರಿಯಾಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಪೆಡ್ಲರ್‌ಗಳು ಎಂ.ಜಿ.ರೋಡ್, ಹಲಸೂರು, ಜಯನಗರ, ಜೆ.ಪಿ.ನಗರ, ಕಮ್ಮನಹಳ್ಳಿ, ಬಾಣಸವಾಡಿ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಏರಿಯಾಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು.

ಸಿಲಿಕಾನ್ ಸಿಟಿಯಲ್ಲಿ ಲಾಕ್ ಡೌನ್ ವೇಳೆಯೂ ಗಾಂಜಾ ಭರ್ಜರಿ ಸೇಲ್ ಆಗಿದ್ದು, ಪುಡ್ ಡೆಲಿವರಿ ಬಾಯ್ಸ್​ನಂತೆ ಗಾಂಜಾ ಪೆಡ್ಲರ್ ಮತ್ತು ಡೀಲರ್​ಗಳು ಕೆಲಸ ಮಾಡಿದ್ದರು. ಡೆಲಿವರಿ ಬಾಯ್ಸ್ ಅಂದ್ರೆ ಯಾರಿಗೂ ಅನುಮಾನ ಬರಲ್ಲಾ, ಪೊಲೀಸರು ಚೆಕ್ ಮಡೋದಿಲ್ಲ ಜೊತೆಗೆ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬರೋದಿಲ್ಲಾ ಎಂದು ಈ ಉಪಾಯ ಹೂಡಿದ್ದರು.