ಕುಡಿದ ಅಮಲಿನಲ್ಲಿ ಹೆತ್ತ ತಂದೆ-ತಾಯಿಯನ್ನೇ ಹತ್ಯೆಗೈದ ಪಾಪಿ ಪುತ್ರ, ಎಲ್ಲಿ?
ಕೊಡಗು:ಕುಡಿದ ಅಮಲಿನಲ್ಲಿದ್ದ ಮಗ ಹೆತ್ತವರನ್ನೇ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ನಾಪೋಕ್ಲು ತಾಲೂಕಿನ ಕೋಕೇರಿ ಗ್ರಾಮದಲ್ಲಿ ನಡೆದಿದೆ. ರಾಜು(70) ಮತ್ತು ಗೌರಿ(65) ಕೊಲೆಯಾದ ದಂಪತಿ. ಗ್ರಾಮದ ಶಿವಾಜಿ ಸೋಮಯ್ಯ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತರು, ಮಾಲೀಕ ನೀಡಿದ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ನಿನ್ನೆ ರಾತ್ರಿ ದಂಪತಿಯ ಮಗ ಅಯ್ಯಪ್ಪ ಕುಡಿದ ಮತ್ತಿನಲ್ಲಿ ದಂಪತಿಯನ್ನ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಕೂಡಲೇ ಕಾರ್ಯೋನ್ಮುಖರಾದ […]

ಕೊಡಗು:ಕುಡಿದ ಅಮಲಿನಲ್ಲಿದ್ದ ಮಗ ಹೆತ್ತವರನ್ನೇ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ನಾಪೋಕ್ಲು ತಾಲೂಕಿನ ಕೋಕೇರಿ ಗ್ರಾಮದಲ್ಲಿ ನಡೆದಿದೆ. ರಾಜು(70) ಮತ್ತು ಗೌರಿ(65) ಕೊಲೆಯಾದ ದಂಪತಿ.
ಗ್ರಾಮದ ಶಿವಾಜಿ ಸೋಮಯ್ಯ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತರು, ಮಾಲೀಕ ನೀಡಿದ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ನಿನ್ನೆ ರಾತ್ರಿ ದಂಪತಿಯ ಮಗ ಅಯ್ಯಪ್ಪ ಕುಡಿದ ಮತ್ತಿನಲ್ಲಿ ದಂಪತಿಯನ್ನ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಅಪರಾಧಿ ಅಯ್ಯಪ್ಪನನ್ನು ಬಂಧಿಸಿದ್ದಾರೆ.




