ಖಾಸಗಿ ಲ್ಯಾಬ್ ನೀಡಿದ ಕೊರೊನಾ ತಪ್ಪು ವರದಿ, ನವಜಾತ ಶಿಶು ಸಾವಿನಲ್ಲಿ ಅಂತ್ಯ
ಕೊರೊನಾ ಸೋಂಕು ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು, ಲ್ಯಾಬ್ಗಳು ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಮುಂದುವರಿದಿದೆ. ಈ ಬಾರಿ, ಖಾಸಗಿ ಲ್ಯಾಬ್ ನೀಡಿದ ತಪ್ಪು ವರದಿಯು ನವಜಾತ ಶಿಶು ಸಾವಿನಲ್ಲಿ ಅಂತ್ಯವಾಗಿದೆ. ಮೊದಲು ತಾಯಿಗೆ ಕೊರೊನಾ ಪಾಸಿಟಿವ್ ಎಂದು ಖಾಸಗಿ ಲ್ಯಾಬ್ ವರದಿ ನೀಡಿತ್ತು. ಇದರಿಂದ ವೈದ್ಯರು ಗಾಬರಿಗೆಬಿದ್ದು, ಅಮ್ಮನ ಬೆಚ್ಚನೆಯ ಮಡಿಲಲ್ಲಿ ಇರಬೇಕಿದ್ದ ನವಜಾತ ಶಿಶುವನ್ನು ಹೆತ್ತಮ್ಮನಿಂದ ಪ್ರತ್ಯೇಕವಾಗಿಸಿದರು. 18ರಂದು ಕೋವಿಡ್ ಆಸ್ಪತ್ರೆ ನಾರ್ಮಲ್ ಡಿಲೆವರಿ ಆಗಿತ್ತು. ನಂತರದ ಪರೀಕ್ಷೆ ವೇಳೆ ನೆಗೆಟಿವ್ ಎಂದು ವರದಿ […]
ಕೊರೊನಾ ಸೋಂಕು ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು, ಲ್ಯಾಬ್ಗಳು ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಮುಂದುವರಿದಿದೆ. ಈ ಬಾರಿ, ಖಾಸಗಿ ಲ್ಯಾಬ್ ನೀಡಿದ ತಪ್ಪು ವರದಿಯು ನವಜಾತ ಶಿಶು ಸಾವಿನಲ್ಲಿ ಅಂತ್ಯವಾಗಿದೆ.
ಮೊದಲು ತಾಯಿಗೆ ಕೊರೊನಾ ಪಾಸಿಟಿವ್ ಎಂದು ಖಾಸಗಿ ಲ್ಯಾಬ್ ವರದಿ ನೀಡಿತ್ತು. ಇದರಿಂದ ವೈದ್ಯರು ಗಾಬರಿಗೆಬಿದ್ದು, ಅಮ್ಮನ ಬೆಚ್ಚನೆಯ ಮಡಿಲಲ್ಲಿ ಇರಬೇಕಿದ್ದ ನವಜಾತ ಶಿಶುವನ್ನು ಹೆತ್ತಮ್ಮನಿಂದ ಪ್ರತ್ಯೇಕವಾಗಿಸಿದರು. 18ರಂದು ಕೋವಿಡ್ ಆಸ್ಪತ್ರೆ ನಾರ್ಮಲ್ ಡಿಲೆವರಿ ಆಗಿತ್ತು.
ನಂತರದ ಪರೀಕ್ಷೆ ವೇಳೆ ನೆಗೆಟಿವ್ ಎಂದು ವರದಿ ಬಂದಿದೆ. ತಾಯಿಗೆ ಮೊದಲು ಪಾಸಿಟಿವ್ ಹಿನ್ನೆಲೆ ಮಗುವನ್ಮು NICU ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಆ ವೇಳೆ, ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ. ಲ್ಯಾಬ್‌ನ ತಪ್ಪು ವರದಿಯಿಂದ ತಾಯಿ ಮಗುವನ್ನು ಪ್ರತ್ಯೇಕವಾಗಿ ಇರಿಸಿದ್ದರು ಎಂದು ಆರೋಪಿಸಲಾಗಿದೆ.