ಅರಮನೆ ಆವರಣದಲ್ಲಿಯೇ ನಡೆದ ಗಜಪಡೆಗೆ ಭಾರ ಹೊರಿಸುವ ತಾಲೀಮು
ಮೈಸೂರು: ದಸರಾ ಸಮಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ವೈವಿಧ್ಯತೆ ಕಣ್ತುಂಬಿಕೊಳ್ಳೋದೆ ರೋಮಾಂಚಕ. ಮೈಸೂರು ದಸರಾ ಎಷ್ಟೊಂದು ಸುಂದರ ಎಂಬಂತೆ ದಸರಾ ಸಂಭ್ರಮವನ್ನು ವರ್ಣಿಸಲಾಗದು, ಅದನ್ನು ನೋಡಿಯೇ ಆನಂದಿಸಬೇಕು. ಆದರೆ ರಾಜ್ಯದಲ್ಲಿ ಕೊರೊನಾ ಆರ್ಭಟದಿಂದಾಗಿ ಈ ಬಾರಿ ದಸರಾ ಕಳೆ ಕಡಿಮೆಯಾಗಿದೆ. ಆದರೂ ಕೊರೊನಾ ನಡುವೆಯೇ ಮುಂಜಾಗೃತ ಕ್ರಮಗಳನ್ನು ಕೈಗೊಂಡು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಆಚರಿಸಲು ಸರ್ಕಾರ ಮುಂದಾಗಿದೆ. ಇನ್ನು ಈ ವರ್ಷದ ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ಶುರುವಾಗಿದೆ. ಅರಮನೆ ಆವರಣದಲ್ಲಿ ಮರಳು ಮೂಟೆ […]

ಮೈಸೂರು: ದಸರಾ ಸಮಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ವೈವಿಧ್ಯತೆ ಕಣ್ತುಂಬಿಕೊಳ್ಳೋದೆ ರೋಮಾಂಚಕ. ಮೈಸೂರು ದಸರಾ ಎಷ್ಟೊಂದು ಸುಂದರ ಎಂಬಂತೆ ದಸರಾ ಸಂಭ್ರಮವನ್ನು ವರ್ಣಿಸಲಾಗದು, ಅದನ್ನು ನೋಡಿಯೇ ಆನಂದಿಸಬೇಕು. ಆದರೆ ರಾಜ್ಯದಲ್ಲಿ ಕೊರೊನಾ ಆರ್ಭಟದಿಂದಾಗಿ ಈ ಬಾರಿ ದಸರಾ ಕಳೆ ಕಡಿಮೆಯಾಗಿದೆ. ಆದರೂ ಕೊರೊನಾ ನಡುವೆಯೇ ಮುಂಜಾಗೃತ ಕ್ರಮಗಳನ್ನು ಕೈಗೊಂಡು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಆಚರಿಸಲು ಸರ್ಕಾರ ಮುಂದಾಗಿದೆ.
ಇನ್ನು ಈ ವರ್ಷದ ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ಶುರುವಾಗಿದೆ. ಅರಮನೆ ಆವರಣದಲ್ಲಿ ಮರಳು ಮೂಟೆ ಹೊರಿಸಿ ಗಣ ಪಡೆಗೆ ತಾಲೀಮು ಮಾಡಲಾಗುತ್ತಿದೆ. ಪ್ರತಿ ವರ್ಷ ಗಜ ಪಡೆ ಅರಮನೆ ನಗರಿಯಲ್ಲಿ ಸಂಚಾರ ನಡೆಸಿ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿಯೇ ತಾಲೀಮು ನಡೆಸಲಾಗುತ್ತಿದೆ. ಅಲ್ಲದೆ ವಿಶೇಷವಾಗಿ ಇದೇ ಮೊದಲ ಬಾರಿಗೆ ಅಭಿಮನ್ಯು ಜಂಬೂಸವಾರಿ ದಿನ ಅಂಬಾರಿ ಹೊರಲಿದ್ದಾನೆ. 759 kg ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ದಸರಾ ವೈಭವವನ್ನು ಹೆಚ್ಚಿಸಲಿದ್ದಾನೆ.



Published On - 1:28 pm, Thu, 8 October 20




