ಹೊಸಗುಡ್ಡದ ಹಳ್ಳಿಯಲ್ಲಿ ಕೆಮಿಕಲ್ ಗೋದಾಮು ಸ್ಫೋಟಗೊಂಡಿದ್ದು ಏಕೆ? ಸ್ಫೋಟದ ಅಸಲಿ ಸತ್ಯ ಬಯಲು
ಬೆಂಗಳೂರು: ಹೊಸಗುಡ್ಡದಹಳ್ಳಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿದ್ದಾರೆ. ದುರಂತ ಅಂದ್ರೆ ಆರೋಪಿಗಳ ಸ್ಥಾನದಲ್ಲಿರುವವರು ತಮ್ಮದೊಂದು ಸಣ್ಣ ನಿರ್ಲಕ್ಷ್ಯದ ಫಲವಾಗಿ ಇಳಿ ವಯಸ್ಸಿನಲ್ಲಿ ಪುತ್ರನೊಂದಿಗೆ ಪೊಲೀಸ್ ಅತಿಥಿಗಳಾಗಿದ್ದಾರೆ. ಇನ್ನು ಈ ಅಗ್ನಿ ದುರಂತ ನಡೆಯಲು ಕಾರಣವೇನು? ಅಸಲಿಗೆ ಅಷ್ಟು ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಳ್ಳಲು ಕಾರಣವಾದ ಕೆಮಿಕಲ್ಸ್ ಯಾವುದು? ಹೊಸಗುಡ್ಡದ ಹಳ್ಳಿಯಲ್ಲಿ ಕೆಮಿಕಲ್ ಗೋದಾಮು ಸ್ಫೋಟಗೊಂಡಿದ್ದು ಏಕೆ? ಎಂಬುದರ ಬಗ್ಗೆ ಬ್ಯಾಟರಾಯನಪುರ ಪೊಲೀಸರ ತನಿಖೆ ವೇಳೆ ಅಸಲಿ ಸತ್ಯ ಬಯಲಾಗಿದೆ. ಗೋದಾಮು ಧಗಧಗ […]

ಬೆಂಗಳೂರು: ಹೊಸಗುಡ್ಡದಹಳ್ಳಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿದ್ದಾರೆ. ದುರಂತ ಅಂದ್ರೆ ಆರೋಪಿಗಳ ಸ್ಥಾನದಲ್ಲಿರುವವರು ತಮ್ಮದೊಂದು ಸಣ್ಣ ನಿರ್ಲಕ್ಷ್ಯದ ಫಲವಾಗಿ ಇಳಿ ವಯಸ್ಸಿನಲ್ಲಿ ಪುತ್ರನೊಂದಿಗೆ ಪೊಲೀಸ್ ಅತಿಥಿಗಳಾಗಿದ್ದಾರೆ.
ಇನ್ನು ಈ ಅಗ್ನಿ ದುರಂತ ನಡೆಯಲು ಕಾರಣವೇನು? ಅಸಲಿಗೆ ಅಷ್ಟು ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಳ್ಳಲು ಕಾರಣವಾದ ಕೆಮಿಕಲ್ಸ್ ಯಾವುದು? ಹೊಸಗುಡ್ಡದ ಹಳ್ಳಿಯಲ್ಲಿ ಕೆಮಿಕಲ್ ಗೋದಾಮು ಸ್ಫೋಟಗೊಂಡಿದ್ದು ಏಕೆ? ಎಂಬುದರ ಬಗ್ಗೆ ಬ್ಯಾಟರಾಯನಪುರ ಪೊಲೀಸರ ತನಿಖೆ ವೇಳೆ ಅಸಲಿ ಸತ್ಯ ಬಯಲಾಗಿದೆ.
ಗೋದಾಮು ಧಗಧಗ ಎಂದು ಉರಿಯಲು ಕಾರಣವೇನು? ನವೆಂಬರ್ 10ರ ಬೆಳಗ್ಗೆ 10:30ರ ಸಮಯದಲ್ಲಿ ISO PROPYL ALCOHOL ಎಂಬ ಕೆಮಿಕಲ್ ರವಾನೆ ಮಾಡಲಾಗ್ತಿತ್ತು. ಗೋದಾಮಿನಿಂದ ಲಿಂಗರಾಜಪುರದಲ್ಲಿರೋ ಒಂದು ಇಂಡಸ್ಟ್ರಿಗೆ ಕಳುಹಿಸಲಾಗ್ತಿತ್ತು. ಗೋದಾಮು ಸಿಬ್ಬಂದಿ 8 ಬ್ಯಾರಲ್ಗಳಲ್ಲಿ ಕೆಮಿಕಲ್ ಸಾಗಿಸುತ್ತಿದ್ರು. ಪ್ರತಿ ಬ್ಯಾರಲ್ 85ಕೆಜಿ ತೂಕ ಇರಬೇಕು ಎಂದು ಗೋದಾಮು ಮಾಲೀಕ ಸೂಚಿಸಿದ್ರು. ಆದರೆ ಒಂದು ಬ್ಯಾರಲ್ 85ಕೆಜಿಗಿಂತ ಕಡಿಮೆ ಇತ್ತು. ಹೀಗಾಗಿ ಸಿಬ್ಬಂದಿ ಗೋದಾಮು ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ರು. ಆಗ ಬೇರೆ ಬ್ಯಾರಲ್ನಿಂದ ಟ್ರಾನ್ಸ್ ಫರ್ ಮಾಡುವಂತೆ ಮಾಲೀಕ ಸೂಚಿಸಿದ್ದ. ಹೊರಗೆ ಇಟ್ಟಿದ್ದ ಬ್ಯಾರಲ್ನಿಂದ ಕೆಮಿಕಲ್ ವರ್ಗಾವಣೆ ಮಾಡುವ ವೇಳೆ ಬ್ಯಾರಲ್ಗಳ ನಡುವೆ ಘರ್ಷಣೆಯಾಗಿದೆ. ಹಾಗೂ ಬಿಸಿಲು ಹೆಚ್ಚಾಗಿದ್ದ ಕಾರಣ ಕಾವು ಹೆಚ್ಚಾಗಿ ಬೆಂಕಿ ತೀರ್ವತೆ ಹೆಚ್ಚಾಗಿ ಈ ವೇಳೆ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಗೋದಾಮಿಗೆ ಆವರಿಸಿದೆ.
320 ಬ್ಯಾರಲ್ ಸ್ಫೋಟ: ಗೋದಾಮಿನಲ್ಲಿ ವಿವಿಧ ಮಾದರಿಯ 320 ಬ್ಯಾರಲ್ಗಳಿದ್ದವು. ಅವುಗಳಲ್ಲಿ ಸುಮಾರು 64 ಸಾವಿರ ಲೀಟರ್ ಕೆಮಿಕಲ್ಸ್ ಇತ್ತು. 64 ಸಾವಿರ ಲೀಟರ್ ಕೆಮಿಕಲ್ಸ್ ಇದ್ದಿದ್ದರಿಂದ ಬೆಂಕಿ ನಂದಿಸಲು ಕಷ್ಟವಾಯ್ತು. ಬೆಂಕಿ ನಂದಿಸಲು ಸತತ 24 ಗಂಟೆಗೂ ಅಧಿಕ ಸಮಯ ಬೇಕಾಯ್ತು. ಬೆಂಕಿ ಕಾಣಿಸಿಕೊಂಡ ಬಳಿಕ ಒಂದೊಂದೇ ಬ್ಯಾರಲ್ ಸ್ಫೋಟಗೊಳ್ಳುತ್ತಿತ್ತು. ಉಗ್ರಾಣದಲ್ಲಿ ಸ್ಟೋರ್ ಆಗಿದ್ದ 320 ಬ್ಯಾರಲ್ಗಳಲ್ಲಿದ್ದ 16 ಬಗೆಯ ಕೆಮಿಕಲ್ಸ್ ಬೆಂಕಿಗೆ ಆಹುತಿಯಾಗಿದೆ.
ಮಾಲೀಕ ಸಜ್ಜನ್ ರಾಜ್ 1974 ರಲ್ಲಿ ಕೆಮಿಕಲ್ ವ್ಯವಹಾರ ಆರಂಭಿಸಿದ್ದರು. 1978ರಲ್ಲಿ ತನ್ನದೇ ಸ್ವಂತ ಕಂಪನಿ ತೆರೆದು ಉದ್ಯಮ ಆರಂಭಿಸಿದ್ರು. ನಂತರ 1992ರಲ್ಲಿ ಹೊಸಗುಡ್ಡದ ಹಳ್ಳಿಯಲ್ಲಿ ಜಾಗ ಖರೀದಿಸಿ ಸಜ್ಜನ್ ರಾವ್ ಪತ್ನಿ ಕಮಲ ಸಜ್ಜನ್ ರಾಜ್ ಹೆಸರಿನಲ್ಲಿ ಜಿಎಸ್ಟಿ ಪರವಾನಗಿ ಪಡೆದ್ರು. ಗೋದಾಮಿಗೆ ಮುಂಬೈ, ಕೊಚ್ಚಿನ್, ಚೆನ್ನೈನಿಂದ ಕೆಮಿಕಲ್ಸ್ ತರಿಸಿಕೊಳ್ಳಲಾಗ್ತಿತ್ತು. ಬಳಿಕ ಕೆಮಿಕಲ್ಸ್ ಅನ್ನು ಫಾರ್ಮ್ ಇಂಡಸ್ಟ್ರೀಸ್ಗೆ ರವಾನೆ ಮಾಡಲಾಗುತಿತ್ತು. ಬೇರೆ ಬೇರೆ ಕಾರ್ಖಾನೆಗಳಿಗೆ ತಿನ್ನರ್ ಕೆಮಿಕಲ್ಸ್ ಗೆಂದು ಕಳುಹಿಸಲಾಗ್ತಿತ್ತು. ಮೊನ್ನೆ ISO PROPYL ALCOHOL ಅನ್ನು ಥಿನ್ನರ್ ಆಗಿ ಬಳಸಲು ಲಿಂಗರಾಜಪುರದ ಕಾರ್ಖಾನೆಗೆ ಕಳುಹಿಸಲು ಲೋಡ್ ಮಾಡಲಾಗಿತ್ತು. ಲೋಡ್ ಮಾಡಿದ್ದ ಕೆಲವೇ ನಿಮಿಷಗಳಲ್ಲಿ ಅವಘಡ ನಡೆದಿದೆ.
ಇದನ್ನೂ ಓದಿ: ಕೆಮಿಕಲ್ ತುಂಬಿದ ಬ್ಯಾರೆಲ್ನಲ್ಲಿ ದಿಢೀರ್ ಬೆಂಕಿ: ನಿನ್ನೆ ಹೊತ್ತಿದ ಬೆಂಕಿ ಇನ್ನೂ ನಂದಿಲ್ಲ.. ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ




