ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾಗೆ ಮಲಯಾಳಂ ಹೀರೋನೇ ವಿಲನ್​!

|

Updated on: Mar 21, 2021 | 8:25 PM

'ಪುಷ್ಪ' ಸಿನಿಮಾದಲ್ಲಿ ಮುಖ್ಯ ವಿಲನ್​ ಆಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದಕ್ಕೆ ಚಿತ್ರತಂಡ ಸಾಕಷ್ಟು ಹುಡುಕಾಟ ನಡೆಸಿತ್ತು. ಹೀಗಾಗಿ, ವಿಲನ್​ ಹೆಸರು ಬಹಿರಂಗಗೊಂಡಿರಲಿಲ್ಲ.

ಅಲ್ಲು ಅರ್ಜುನ್​ ಪುಷ್ಪ ಸಿನಿಮಾಗೆ ಮಲಯಾಳಂ ಹೀರೋನೇ ವಿಲನ್​!
ಫಹಾದ್​ ಫಾಸಿಲ್​-ಅಲ್ಲು ಅರ್ಜುನ್
Follow us on

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾ ಸಾಕಷ್ಟು ವಿಚಾರಗಳಿಗೆ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಒಂದು ಕಡೆಯಾದರೆ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎನ್ನುವ ವಿಚಾರ ಮತ್ತೊಂದು ಕಡೆ. ಈ ಮಧ್ಯೆ ಮಲಯಾಳಂನ ಖ್ಯಾತ ನಟನೋರ್ವ ಈ ಚಿತ್ರದಲ್ಲಿ ಬಣ್ಣ ಹಚ್ಚೋಕೆ ರೆಡಿ ಆಗಿದ್ದಾರೆ. ಅದೂ, ವಿಲನ್​ ಆಗಿ.

‘ಪುಷ್ಪ’ ಸಿನಿಮಾದಲ್ಲಿ ಮುಖ್ಯ ವಿಲನ್​ ಆಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದಕ್ಕೆ ಚಿತ್ರತಂಡ ಸಾಕಷ್ಟು ಹುಡುಕಾಟ ನಡೆಸಿತ್ತು. ಹೀಗಾಗಿ, ವಿಲನ್​ ಹೆಸರು ಬಹಿರಂಗಗೊಂಡಿರಲಿಲ್ಲ. ಈಗ ಸಿನಿಮಾಗೆ ಕೊನೆಗೂ ವಿಲನ್​ ಸಿಕ್ಕಂತಾಗಿದೆ. ಮಲಯಾಳಂನ ಖ್ಯಾತ ನಟ ಫಹಾದ್​ ಫಾಸಿಲ್​ ಚಿತ್ರಕ್ಕೆ ವಿಲನ್​ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಇಂದು ಅಧಿಕೃತ ಘೋಷಣೆ ಮಾಡಿದೆ.

‘ಅಲಾ ವೈಕುಂಠಪುರಂಲೋ’ ಸಿನಿಮಾ ನಂತರ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ ರಂಗಸ್ಥಳಂ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. ರಂಗಸ್ಥಳಂ ಸಿನಿಮಾ ಕತೆ ಹಳ್ಳಿ ಹಿನ್ನೆಲೆಯಲ್ಲಿ ಸಾಗಿತ್ತು. ಈ ಸಿನಿಮಾ ಕಾಡಿನ ಹಿನ್ನೆಲೆ ಹೊಂದಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಟ್ರಕ್​ ಡ್ರೈವರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪುಷ್ಪಾ ಸಿನಿಮಾದಲ್ಲಿ ಬಿಗ್​ ಟ್ವಿಸ್ಟ್?​​: ಪೋಸ್ಟರ್​​ನಲ್ಲಿ ಸಿಕ್ತು ಹೊಸ ಸೂಚನೆ