ಪ್ರವಾಹ ಸಂತ್ರಸ್ತನ ಮನೆ ಮೇಲೆ ನಕಲಿ ಐಟಿ ಅಧಿಕಾರಿಗಳಿಂದ ರೇಡ್
ಬಾಗಲಕೋಟೆ: ಪ್ರವಾಹ ಸಂತ್ರಸ್ತನ ಮನೆ ಮೇಲೆ ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿರುವ ಘಟನೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದಲ್ಲಿ ನಡೆದಿದೆ. ಜಪ್ತಿ ಮಾಡುವ ನೆಪದಲ್ಲಿ 12,500 ರೂ. ಮತ್ತು ಮೂರು ಮೊಬೈಲ್ ವಶಕ್ಕೆ ಪಡೆದು ಲಕ್ಷ್ಮಣ ಎಂಬುವರಿಗೆ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. Go-07 Gc 8275 ನಂಬರಿನ ಕಾರಿನಲ್ಲಿ ಡಿಸೆಂಬರ್ 23ರಂದು ಬೆಳಗ್ಗೆ 4 ಗಂಟೆಗೆ ಐಟಿ ಅಧಿಕಾರಿಗಳೆಂದು ಹೇಳಿಕೊಂಡು ಓರ್ವ ಮಹಿಳೆ ಸೇರಿದಂತೆ 7 ಜನರು ಬಂದಿದ್ದಾರೆ. ಮನೆಯ ಹಾಲ್ನಲ್ಲಿನ ಹಾಸುಕಲ್ಲು, […]
ಬಾಗಲಕೋಟೆ: ಪ್ರವಾಹ ಸಂತ್ರಸ್ತನ ಮನೆ ಮೇಲೆ ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿರುವ ಘಟನೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದಲ್ಲಿ ನಡೆದಿದೆ. ಜಪ್ತಿ ಮಾಡುವ ನೆಪದಲ್ಲಿ 12,500 ರೂ. ಮತ್ತು ಮೂರು ಮೊಬೈಲ್ ವಶಕ್ಕೆ ಪಡೆದು ಲಕ್ಷ್ಮಣ ಎಂಬುವರಿಗೆ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Go-07 Gc 8275 ನಂಬರಿನ ಕಾರಿನಲ್ಲಿ ಡಿಸೆಂಬರ್ 23ರಂದು ಬೆಳಗ್ಗೆ 4 ಗಂಟೆಗೆ ಐಟಿ ಅಧಿಕಾರಿಗಳೆಂದು ಹೇಳಿಕೊಂಡು ಓರ್ವ ಮಹಿಳೆ ಸೇರಿದಂತೆ 7 ಜನರು ಬಂದಿದ್ದಾರೆ. ಮನೆಯ ಹಾಲ್ನಲ್ಲಿನ ಹಾಸುಕಲ್ಲು, ಬ್ಯಾಗ್, ಪೆಟ್ಟಿಗೆ ಕಿತ್ತು ವಂಚಕರು ಜಾಲಾಡಿದ್ದಾರೆ.
ಪ್ರವಾಹದ ವೇಳೆ ಲಕ್ಷ್ಮಣ ಅಲಗೂರ ಮನೆಗೆ ಕೋಟಿ ಕೋಟಿ ಹಣ ತೇಲಿ ಬಂದಿದೆ ಎಂದು ಇತ್ತೀಚೆಗೆ ಸುದ್ದಿ ಹಬ್ಬಿತ್ತು. ಈ ಸುದ್ದಿ ತಿಳಿದು ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ವಂಚನೆ ಮಾಡಿದ್ದಾರೆ. ನಕಲಿ ಐಟಿ ದಾಳಿ ಹಿಂದೆ ಅಲಗೂರು ಗ್ರಾಮಸ್ಥರ ಕೈವಾಡದ ಶಂಕೆ ವ್ಯಕ್ತವಾಗಿದೆ.
ಬೆಳಗಾವಿಗೆ ಬಂದು ಭೇಟಿಯಾಗಿ ಎಂದು ತೆರಿಗೆ ಇಲಾಖೆಯ ವಿಳಾಸ ಕೊಟ್ಟು ಹೋಗಿದ್ರು. ಲಕ್ಷ್ಮಣ ಅಲಗೂರ ಬೆಳಗಾವಿಗೆ ಹೋದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇದರಿಂದ ಕಂಗಾಲಾದ ಲಕ್ಷ್ಮಣ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Published On - 7:36 am, Sat, 4 January 20