ಅಟ್ಟಿಕಾ ಗೋಲ್ಡ್ ಮಾಲೀಕನ ಮನೆಗೆ ಗಡಪಾರಿ ಇಟ್ಟ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದೇನು?

ಅಟ್ಟಿಕಾ ಗೋಲ್ಡ್ ಮಾಲೀಕನ ಮನೆಗೆ ಗಡಪಾರಿ ಇಟ್ಟ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದೇನು?

ಬೆಂಗಳೂರು: ಬಾಣಸವಾಡಿ ಸರ್ವಿಸ್‌ ರಸ್ತೆಯಲ್ಲಿರುವ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕನ ಮನೆ ಮೇಲೆ‌ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ‌ ಚಿನ್ನ ಇಟ್ಟಿರುವ ಮಾಹಿತಿ ಮೇರೆಗೆ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಮನೆಯಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಸದ್ಯ ಮನೆಯನ್ನು ಅಟ್ಟಿಕಾ ಬಾಬು ನವೀಕರಿಸುತ್ತಿದ್ದಾರೆ. ಮನೆಯ ಗೋಡೆಗಳಲ್ಲಿ ರಹಸ್ಯ ಬಾಕ್ಸ್​ ಮಾಡಿಸಿ ಅದರಲ್ಲಿ ಅಕ್ರಮ‌ ಚಿನ್ನ ಇಟ್ಟಿರುವ ಮಾಹಿತಿ ಬಂದಿತ್ತು. ಹೀಗಾಗಿ ಮನೆಯೆ ಗೋಡೆ ಒಡೆದು ಅಧಿಕಾರಿಗಳು ಶೋಧ ನಡೆಸಿದ್ದಾರೆ. ಸಿಸಿಬಿ ಪೊಲೀಸರ ತನಿಖೆ ವೇಳೆ ರಹಸ್ಯ ಬಾಕ್ಸ್‌ ಮಾತ್ರ ಪತ್ತೆಯಾಗಿದೆ. ಆದ್ರೆ ಯಾವುದೇ ಚಿನ್ನಾಭರಣ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಅಟ್ಟಿಕಾ ಬಾಬು ಎಲ್ಲಿ?
ಬಾಬು ಮನೆಯ ಮೇಲೆ ಸುಮಾರು 10 ಗಂಟೆಗಳ ಕಾಲ ದಾಳಿ ನಡೆದಿದೆ. ಗ್ಯಾಸ್​ ಕಟರ್​ಗಳನ್ನು ಬಳಸಿ, ದೊಡ್ಡದಾದ ರಹಸ್ಯ ಬಾಕ್ಸ್​ವೊಂದನ್ನು ಕತ್ತರಿಸಿ, ಪರಿಶೀಲಿಸಲಾಗಿದೆ. ಈ ಮಧ್ಯೆ, ದಾಳಿಯ ಸುಳಿವರಿತ ಅಟ್ಟಿಕಾ ಬಾಬು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಲ್ಲ.
Click on your DTH Provider to Add TV9 Kannada