ವರದಕ್ಷಿಣೆ ಕಿರುಕುಳ: ಗೃಹಿಣಿ ನಿಗೂಢ ಸಾವು, ಯಾವೂರಲ್ಲಿ?

ಮೈಸೂರು: ಮೆಲ್ಲಹಳ್ಳಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು ಸಂಭವಿಸಿದೆ. ಸಾವಿಗೆ ಕಾರಣ ಏನು ಎಂದು ಖಚಿತವಾಗಿಲ್ಲ. ಆದರೆ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಂಜುಳಾ(20) ಮೃತ ಗೃಹಿಣಿ. ಹಳ್ಳಿಕೆರೆಹುಂಡಿಯ ಮಂಜುಳಾ ಹಾಗೂ ಮೆಲ್ಲಹಳ್ಳಿ ಗ್ರಾಮದ ಹೇಮಂತ್ ಪ್ರೀತಿಸಿ ಮದುವೆ ಆಗಿದ್ದರು. ಒಂದು ಮಗು ಹುಟ್ಟಿದ ನಂತರ ತವರು ಮನೆಯಿಂದ 2 ಲಕ್ಷ ಹಣ ತರುವಂತೆ ಕಿರುಕುಳ ನೀಡುತ್ತಿದ್ದರಂತೆ. ಈ ವೇಳೆ ಮಂಜುಳಾ ತಂದೆ ಪುಟ್ಟಸ್ವಾಮಿ ಗೌಡ ಹಣ ನೀಡಲು ಒಂದು ತಿಂಗಳ ಸಮಯ […]

ವರದಕ್ಷಿಣೆ ಕಿರುಕುಳ: ಗೃಹಿಣಿ ನಿಗೂಢ ಸಾವು, ಯಾವೂರಲ್ಲಿ?
ಆಯೇಷಾ ಬಾನು

Updated on: Oct 07, 2020 | 10:00 AM

ಮೈಸೂರು: ಮೆಲ್ಲಹಳ್ಳಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು ಸಂಭವಿಸಿದೆ. ಸಾವಿಗೆ ಕಾರಣ ಏನು ಎಂದು ಖಚಿತವಾಗಿಲ್ಲ. ಆದರೆ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಂಜುಳಾ(20) ಮೃತ ಗೃಹಿಣಿ.

ಹಳ್ಳಿಕೆರೆಹುಂಡಿಯ ಮಂಜುಳಾ ಹಾಗೂ ಮೆಲ್ಲಹಳ್ಳಿ ಗ್ರಾಮದ ಹೇಮಂತ್ ಪ್ರೀತಿಸಿ ಮದುವೆ ಆಗಿದ್ದರು. ಒಂದು ಮಗು ಹುಟ್ಟಿದ ನಂತರ ತವರು ಮನೆಯಿಂದ 2 ಲಕ್ಷ ಹಣ ತರುವಂತೆ ಕಿರುಕುಳ ನೀಡುತ್ತಿದ್ದರಂತೆ. ಈ ವೇಳೆ ಮಂಜುಳಾ ತಂದೆ ಪುಟ್ಟಸ್ವಾಮಿ ಗೌಡ ಹಣ ನೀಡಲು ಒಂದು ತಿಂಗಳ ಸಮಯ ಕೇಳಿದ್ದರು. ಆದ್ರೆ ನಿನ್ನೆ ಅನುಮಾನಸ್ಪದವಾಗಿ ಮಂಜುಳಾ ಸಾವನ್ನಪ್ಪಿದ್ದಾಳೆ.

ಮಂಜುಳಾ ಪತಿ ಕುಟುಂಬಸ್ಥರು ಪೋಷಕರಿಗೆ ಸಾವಿನ ಬಗ್ಗೆ ಮಾಹಿತಿ ನೀಡದೇ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ರು. ಈ ವೇಳೆ ಮಂಜುಳ ಪೋಷಕರು ಮಾಹಿತಿ ಪಡೆದು ಪೊಲೀಸರ ಸಮೇತ ತೆರಳಿ ಅಂತ್ಯಕ್ರಿಯೆ ನಿಲ್ಲಿಸಿದ್ದಾರೆ. ಮಂಜುಳಾ ಮೃತದೇಹಕ್ಕೆ ಬೆಂಕಿ ಹಚ್ಚುವ ವೇಳೆ ಪೊಲೀಸರು ತಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗಂಡ ಹೇಮಂತ್, ಮಾವ ಪುಟ್ಟಸ್ವಾಮಿ, ಅತ್ತೆ ಭಾಗ್ಯ, ಮೈದುನ ಯಶವಂತ್ ವಿರುದ್ಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us