ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ನೆಚ್ಚಿನ ಪ್ರಾಣಿಗಳ ಹುಟ್ಟುಹಬ್ಬವನ್ನು ತಮ್ಮ ಕುಟುಂಬದ ಸದಸ್ಯರೊಬ್ಬರ ಜನುಮ ದಿನ ಎಂಬಂತೆ ಸಡಗರದಿಂದ ಆಚರಿಸುವುದು ತೀರ ಸಾಮಾನ್ಯವಾಗಿದೆ..ಆದರೆ ಇಲ್ಲೊಂದು ಕುಟುಂಬ ಸ್ವಲ್ಪ ವಿಭಿನ್ನವಾಗಿ ಮನೆಯಲ್ಲಿ ಸಾಕಿದ್ದ ಹುಂಜಗಳ ಬರ್ತ್ ಡೇಯನ್ನು ಸಂಭ್ರಮದಿಂದ ಆಚರಿಸಿದೆ.. !
ಬೆಳಗಾವಿಯ ಮಾಳಿಗಲ್ಲಿಯ ಮೇಘನಾ ಲಂಗರಖಂಡೆ ಕುಟುಂಬಸ್ಥರಿಂದ ಈ ವಿಶಿಷ್ಟ ಹುಟ್ಟುಹಬ್ಬ ಆಚರಣೆ ನಡೆದಿದೆ. ತಮ್ಮ ಮನೆಯಲ್ಲಿ ಸಾಕಿದ ಹುಂಜಗಳಿಗೆ ಶೇರು ಹಾಗೂ ವೀರು ಅಂತಾ ಹೆಸರಿಟ್ಟಿದ್ದು, ಇವುಗಳ 5ನೇ ವರ್ಷದ ಜನ್ಮದಿನವನ್ನು ಕೇಕ್ ಕತ್ತರಿಸಿ, ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ ಮೇಲೆ ಕೂಡ ಹುಂಜಗಳ ಚಿತ್ರವನ್ನೇ ನಮೂದಿಸಿದ್ದನ್ನು ನೋಡಬಹುದು.. ಹುಂಜಗಳ ಹುಟ್ಟುಹಬ್ಬ ಆಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
Published On - 12:35 pm, Mon, 21 December 20