AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಕರ್ಣ: ಅಸ್ಥಿ ನಿಕ್ಷೇಪಣಾ ಕೆರೆ ಜಾಗ ಒತ್ತುವರಿ ವಿವಾದ ಕೊನೆಗೂ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ

ಕಾರವಾರ: ಒತ್ತುವರಿ ಜಾಗ ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಬಾಯಿಗೆಬಂದಂತೆ ಬೈದು, ಭದ್ರತೆಗೆ ತೆರಳಿದ ಪೊಲೀಸರು ಮತ್ತು ವರದಿಗಾರರಿಗೂ ಆವಾಜ್ ಹಾಕಿ ಕೊನೆಯಲ್ಲಿ ಕ್ಷಮಾಪಣೆ ಕೇಳಿ ಒತ್ತುವರಿ ತೆರವಿಗೆ ಅವಕಾಶ ಮಾಡಿಕೊಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ನಡೆದಿದೆ. ಘಟನೆಯ ವಿವರ : ಗೋಕರ್ಣದ ತಾಮ್ರಗೌರಿ ದೇವಾಲಯದ ಎದುರಿನಲ್ಲಿರುವ ತಾಮ್ರಪರ್ಣಿ ( ಅಸ್ಥಿ ನಿಕ್ಷೇಪಣಾ ಕೆರೆ)ಕೆರೆಯ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂದು ಸ್ಥಳೀಯರಾದ ಪ್ರದೀಪ ಗಣಿಯನ್ ಎಂಬುವರು ತಾಲೂಕು ಮಟ್ಟದ ಅಧಿಕಾರಿಗಳಿಗೆ […]

ಗೋಕರ್ಣ: ಅಸ್ಥಿ ನಿಕ್ಷೇಪಣಾ ಕೆರೆ ಜಾಗ ಒತ್ತುವರಿ ವಿವಾದ ಕೊನೆಗೂ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ
ಸಾಧು ಶ್ರೀನಾಥ್​
| Edited By: |

Updated on: Nov 12, 2020 | 12:46 PM

Share

ಕಾರವಾರ: ಒತ್ತುವರಿ ಜಾಗ ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಬಾಯಿಗೆಬಂದಂತೆ ಬೈದು, ಭದ್ರತೆಗೆ ತೆರಳಿದ ಪೊಲೀಸರು ಮತ್ತು ವರದಿಗಾರರಿಗೂ ಆವಾಜ್ ಹಾಕಿ ಕೊನೆಯಲ್ಲಿ ಕ್ಷಮಾಪಣೆ ಕೇಳಿ ಒತ್ತುವರಿ ತೆರವಿಗೆ ಅವಕಾಶ ಮಾಡಿಕೊಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ನಡೆದಿದೆ.

ಘಟನೆಯ ವಿವರ : ಗೋಕರ್ಣದ ತಾಮ್ರಗೌರಿ ದೇವಾಲಯದ ಎದುರಿನಲ್ಲಿರುವ ತಾಮ್ರಪರ್ಣಿ ( ಅಸ್ಥಿ ನಿಕ್ಷೇಪಣಾ ಕೆರೆ)ಕೆರೆಯ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂದು ಸ್ಥಳೀಯರಾದ ಪ್ರದೀಪ ಗಣಿಯನ್ ಎಂಬುವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ರು. ನಂತರ ಕುಮಟಾ ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕರು ಸರ್ವೆ ನಡೆಸಿ ತಹಶೀಲ್ದಾರರಿಗೆ ಒತ್ತುವರಿಯಾಗಿರುವ ಬಗ್ಗೆ ವರದಿ ನೀಡಿದ್ದರು. ಆದರೆ ಕುಮಟಾ  ತಹಶೀಲ್ದಾರ್ ಮಾತ್ರ ಒತ್ತುವರಿಯಾಗಿಲ್ಲ ಎಂದು ದೂರುದಾರರಿಗೆ ತಿಳಿಸಿದ್ದರು. ನಂತರ ಮತ್ತೆ ದೂರುದಾರ ಪ್ರದೀಪ್ ಗಣಿಯನ್ ಲೋಕಾಯುಕ್ತಕ್ಕೆ ಪುನಃ ದೂರು ಸಲ್ಲಿಸಿ ಇಲ್ಲಿನ ಪರಿಸ್ಥಿಯನ್ನು ವಿವರಿಸಿದ್ದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಜಾಗ ಒತ್ತುವರಿ ಬಗ್ಗೆ ಸರ್ವೆಮಾಡಿ ವರದಿ ನೀಡುವಂತೆ ಮತ್ತೆ ಜಿಲ್ಲಾ ಭೂಮಾಪನ ಇಲಾಖೆ ನಿರ್ದೇಶಕರಿಗೆ ಆದೇಶಿಸಿದ್ರು. ಅದರಂತೆ ಜಿಲ್ಲಾ ಭೂ ಮಾಪನ ನಿರ್ದೇಶಕರು ಒತ್ತುವರಿ ಸಾಬೀತಾಗಿರುವ ಬಗ್ಗೆ ಲೋಕಾಯುಕ್ತಕ್ಕೆ ವರದಿ ನೀಡಿದ್ರು. ಲೋಕಾಯುಕ್ತ ಸೂಚನೆ ಪ್ರಕಾರ ಕುಮಟಾ ತಹಶೀಲ್ದಾರ್ ಮೇಘರಾಜ ನಾಯ್ಕ ನೇತೃತ್ವದ ಅಧಿಕಾರಿಗಳ ತಂಡ ಒತ್ತುವರಿ ಜಾಗವನ್ನು ತೆರವುಗೊಳಿಸಲು ಬಂದಿದ್ದ ಸಂದರ್ಭದಲ್ಲಿ ಒತ್ತುವರಿ ಮಾಡಿದ್ದ ಸ್ಥಳೀಯರಾದ ರಾಮಚಂದ್ರ ನಿರ್ವಾಣೇಶ್ವರ ಮತ್ತು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರಲ್ಲದೇ ಎರಡು ಗಂಟೆಗೂ ಹೆಚ್ಚು ಕಾಲ ರಂಪಾಟ ನಡೆಸಿ ಕೊನೆಯಲ್ಲಿ ತೆರವಿಗೆ ಒಪ್ಪಿಗೆ ನೀಡಿದರು. ನಂತರ ಅಧಿಕಾರಿಗಳು ಕೆರೆಯ ಜಾಗದಲ್ಲಿ ಕಟ್ಟಿದ ಕಟ್ಟೆಯನ್ನು ಒಡೆದು ತೆರವು ಮಾಡಿದ್ರು.

ಕೊನೆಯಲ್ಲಿ ಕ್ಷಮೆ : ಒತ್ತರುವರಿ ಜಾಗವನ್ನು ತೆಗೆಯಲು ಒಪ್ಪಿಗೆ ನೀಡಿ ಮಾತನಾಡಿದ ಖಾಸಗಿ ಜಾಗದ ಮಾಲೀಕ ರಾಮಚಂದ್ರ ನಿರ್ವಾಣೇಶ್ವರ ನಮ್ಮ ಮನೆಯವರು ನೊಂದ ಮನಸ್ಸಿನಿಂದ ಆವೇಶದಲ್ಲಿ ಕೆಲವು ಮಾತನಾಡಿರಬಹುದು. ಇದರಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ . ಯಾರ ಮೇಲೂ ದ್ವೇಷದಿಂದ ಆಡಿದ ಮಾತಲ್ಲ ಎಂದು ಕ್ಷಮೆಯಾಚಿಸಿದ್ರು.

ಉಳಿದ ಕಡೆಯೂ ತೆರವು ಕಾರ್ಯಕ್ಕೆ ಒತ್ತಾಯ : ಗೋಕರ್ಣ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಅತಿಕ್ರಮಣ ಕಟ್ಟಡಗಳು ಬಹಳಷ್ಟಿದ್ದು , ಇದರಂತೆ ತ್ವರಿತವಾಗಿ ತೆರವು ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂತು. ಅಸ್ಥಿ ನಿಕ್ಷೇಪಣೆಗೆ ಬರುವ ಪುರಾತನ ಪಷ್ಕರಣಿಯ ಜಾಗ ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿತ್ತು. ಅದರಂತೆ ಸದ್ಯ ಒತ್ತುವರಿ ತೆರವಾಗಿದೆ. ಆ ಜಾಗ ಮತ್ತೆ ಒತ್ತುವರಿಯಾಗದಂತೆ ಅಸ್ಥಿ ನಿಕ್ಷೇಪಣೆ ಮಾಡಲು ಮುಕ್ತವಾಗಿರಬೇಕು ಮತ್ತು ಗೋಕರ್ಣದ ಉಳಿದ ಭಾಗದಲ್ಲೂ ಇರುವ ಹಲವು ಒತ್ತುವರಿ ಜಾಗವನ್ನ ತೆರವು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ