
ಮಂಡ್ಯ: ಶ್ವಾನವೊಂದು ಗುಬ್ಬಚ್ಚಿ ಮರಿಯ ಜೊತೆ ಆಟವಾಡಿ ಕಾಲ ಕಳೆಯುತ್ತಿರುವ ವಿಶಿಷ್ಟ ಪ್ರಸಂಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್ನಲ್ಲಿ ನಡೆದಿದೆ.
ಮೂಕ ತುಂಟಾಟ/ಒಡನಾಟ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್ ನಿವಾಸಿಯಾಗಿರುವ ಜಯರಾಂ ಎಂಬುವರ ಮನೆಯಲ್ಲಿ ಹಲವು ದಿನಗಳಿಂದಲೂ ಗುಬ್ಬಚ್ಚಿ ಹಾಗೂ ಶ್ವಾನದ ನಡುವಿನ ತುಂಟಾಟ/ಒಡನಾಟವು ಮನೆಯವರಿಗೆ ಅಚ್ಚರಿ ಮೂಡಿಸಿವೆ. ಈಗ ಈ ಎರಡು ಮೂಕ ಜೀವಿಗಳು ತಮ್ಮ ತುಂಟಾಟದಿಂದ ಮನೆಯವರೊಂದಿಗೆ ಸಂಪೂರ್ಣ ಬೆರೆತು ಹೋಗಿವೆ.
ಆಕಸ್ಮಿಕವಾಗಿ ಕೆಳಗೆ ಬಿದ್ದ ಗುಬ್ಬಚ್ಚಿ ಮರಿಯನ್ನು ಜಯರಾಂ ಕುಟುಂಬಸ್ಥರು ರಕ್ಷಿಸಿ ಪೋಷಣೆ ಮಾಡಿದ್ದಾರೆ. ಈಗ ಆ ಗುಬ್ಬಚ್ಚಿ ಮರಿ ಮನೆಯವರೊಂದಿಗೆ, ಕುಟುಂಬ ಸದಸ್ಯನಂತೆ ಬೆರೆತಿದ್ದು, ಜಯರಾಂ ಮನೆಯಲ್ಲಿರುವ ಶ್ವಾನದೊಂದಿಗೆ ಸೇರಿ ತುಂಟಾಟವಾಡುತ್ತಿದೆ. ಈ ಎರಡೂ ಪ್ರಾಣಿಗಳ ಒಡನಾಟಕ್ಕೆ ಮನೆಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.