ಸಿನಿ ನಶೆ ನಂಟು: ತನಿಖೆಗೂ ಮುನ್ನ ಎದುರಾಯ್ತಾ ಸಮನ್ವಯದ ಕೊರತೆ?
ಬೆಂಗಳೂರು: ಕಳೆದ ವಾರ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟ ಮಾಡಿರುವ ಸುದ್ದಿಯೆಂದರೆ ಅದು ಕನ್ನಡ ಚಿತ್ರರಂಗಕ್ಕೂ ಡ್ರಗ್ಸ್ ಜಾಲಕ್ಕೂ ನಂಟಿದೆ ಎಂಬ ಆರೋಪ. ಚಿತ್ರರಂಗದ ಹಲವು ನಟ, ನಟಿಯರು ಮತ್ತು ಸಂಗೀತಕಾರರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಕೇಂದ್ರದ NCB ತನಿಖಾ ದಳ ಮಾಹಿತಿ ನೀಡುತ್ತಿದ್ದಂತೆ ಅವರೆಲ್ಲಾ ಯಾರಿರಬಹುದು ಅನ್ನೋ ಕುತೂಹಲ, ಕೌತುಕ ಶುರುವಾಗಿತ್ತು. NCB ಕಾರ್ಯ ಶ್ಲಾಘನಾರ್ಹವೇ ಆದರೆ.. ಅದಕ್ಕಿಂತ ಹೆಚ್ಚಾಗಿ ಏಕೆ, ಇದೆಲ್ಲಾ ನಮ್ಮ ಪೊಲೀಸರಿಗೆ ಗೊತ್ತಿಲ್ವಂತಾ? ಕೇಂದ್ರದಿಂದ ಬಂದ NCB ಇದನ್ನೆಲ್ಲ ಹೇಳಬೇಕಾಯಿತಾ? ಅಂತಾ […]

ಬೆಂಗಳೂರು: ಕಳೆದ ವಾರ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟ ಮಾಡಿರುವ ಸುದ್ದಿಯೆಂದರೆ ಅದು ಕನ್ನಡ ಚಿತ್ರರಂಗಕ್ಕೂ ಡ್ರಗ್ಸ್ ಜಾಲಕ್ಕೂ ನಂಟಿದೆ ಎಂಬ ಆರೋಪ. ಚಿತ್ರರಂಗದ ಹಲವು ನಟ, ನಟಿಯರು ಮತ್ತು ಸಂಗೀತಕಾರರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಕೇಂದ್ರದ NCB ತನಿಖಾ ದಳ ಮಾಹಿತಿ ನೀಡುತ್ತಿದ್ದಂತೆ ಅವರೆಲ್ಲಾ ಯಾರಿರಬಹುದು ಅನ್ನೋ ಕುತೂಹಲ, ಕೌತುಕ ಶುರುವಾಗಿತ್ತು.
NCB ಕಾರ್ಯ ಶ್ಲಾಘನಾರ್ಹವೇ ಆದರೆ.. ಅದಕ್ಕಿಂತ ಹೆಚ್ಚಾಗಿ ಏಕೆ, ಇದೆಲ್ಲಾ ನಮ್ಮ ಪೊಲೀಸರಿಗೆ ಗೊತ್ತಿಲ್ವಂತಾ? ಕೇಂದ್ರದಿಂದ ಬಂದ NCB ಇದನ್ನೆಲ್ಲ ಹೇಳಬೇಕಾಯಿತಾ? ಅಂತಾ ಜನ ಮಾತನಾಡಿಕೊಳ್ಳತೊಡಗಿದರು. ಈ ಮಧ್ಯೆ, ಬೆಂಗಳೂರು ಪೊಲೀಸರನ್ನಾಗಲಿ ಅಥವಾ ಸಿಸಿಬಿಯ ನಾರ್ಕೋಟಿಕ್ಸ್ ವಿಭಾಗದ ಪೊಲೀಸರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಗೌಪ್ಯವಾಗಿ ಮಹತ್ವದ ಕಾರ್ಯಾಚರಣೆ ನಡಸಿದೆ ಕೇಂದ್ರ ಸರ್ಕಾರದ ಅಧೀನದಲ್ಲಿರುನ NCB.
ಈ ನಡುವೆ ಹೌದು, ಚಿತ್ರರಂಗಕ್ಕೂ ಡ್ರಗ್ ಮಾಫಿಯಾಗೂ ನಂಟಿದೆ. ಈ ಱಕೆಟ್ನಲ್ಲಿ ಹಲವು ಯುವ ನಟ, ನಟಿಯರು ಸಹ ಅಂದರ್ ಆಗಿದ್ದಾರೆ ಅಂತಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊಸ ಬಾಂಬ್ ಸಿಡಿಸಿದ್ದರು. ಅಷ್ಟೇ ಅಲ್ಲದೆ, ನಟಿಯೊಬ್ಬರ ಕಾರ್ ಅಪಘಾತಕ್ಕೂ ಮತ್ತು ನಟನೊಬ್ಬನ ಹಠಾತ್ ನಿಧನಕ್ಕೂ ಮಾದಕ ವಸ್ತುಗಳ ನಂಟಿದೆ ಎಂಬ ಆರೋಪ ಸಹ ಮಾಡಿದ್ದರು. ಹೀಗಾಗಿ, ಲಂಕೇಶ್ರನ್ನ ಸಿಸಿಬಿ ತನಿಖಾ ದಳವು ವಿಚಾರಣೆಗೆ ಕರೆಸಿ ಮತ್ತಷ್ಟು ಮಾಹಿತಿ ಪಡೆಯಲಿದೆ.
ಆದರೆ, ಈ ನಡುವೆ ತಿಳಿದುಬಂದಿರುವ ಮಾಹಿತಿ ಏನೆಂದರೆ, ಈ ಇಡೀ ಪ್ರಕರಣವನ್ನು ಭೇದಿಸಿದ ಕೇಂದ್ರದ NCB ತನಿಖಾ ಸಂಸ್ಥೆಯು ಇದರ ಕುರಿತಾದ ವಿಚಾರ ಮತ್ತು ಮಾಹಿತಿಯನ್ನು ರಾಜ್ಯದ CCB ಅಧಿಕಾರಿಗಳೊಂದಿಗೆ ಹಂಚಿಕೊಂಡಿಲ್ಲವಂತೆ. ಹೌದು, ದಾಳಿ ನಡೆಸಿದ 10 ದಿನವಾದರೂ CCB ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿಲ್ಲವಂತೆ. ಹಾಗಾಗಿ, ತನಿಖೆಗೆ ಅಗತ್ಯವಿರುವ ಮಾಹಿತಿಯನ್ನ ಅಧಿಕಾರಿಗಳು ಕೇಳಲಿದ್ದಾರೆ.

NCB ಅಧಿಕಾರಿಗಳು CCB ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಇದೀಗ, ಕೇಂದ್ರದ ತನಿಖಾ ಸಂಸ್ಥೆಗೆ ಪತ್ರ ಬರೆಯಲು CCB ಅಧಿಕಾರಿಗಳ ತೀರ್ಮಾನಿಸಿದ್ದಾರೆ. ಜಾಲದಲ್ಲಿ ಯಾವು ನಟರು ಭಾಗಿಯಾಗಿದ್ದಾರೆ ಅಂತಾ ಮಾಹಿತಿ ಕೇಳಲಿರುವ CCB ತಂಡ ಜೊತೆಗೆ ದಾಳಿ ವೇಳೆ ಅಧಿಕಾರಿಗಳಿಗೆ ಸಿಕ್ಕ ಮಾಹಿತಿಯನ್ನು ಸಹ ಪಡೆಯಲು ನಿರ್ಧರಿಸಿದ್ದಾರೆ.



