ರಿಲೀಸ್​ಗೂ ಮುನ್ನ.. D ಬಾಸ್ ಫ್ಯಾನ್ಸ್​ಗಳಿಂದ ‘ರಾಬರ್ಟ್’​ ಸಿನಿಮಾ ಪೋಸ್ಟರ್ ಬಿಡುಗಡೆ

ಮೈಸೂರು: ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ರಿಲೀಸ್​ ಎಂದರೆ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಹೀಗಾಗಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಹುನಿರೀಕ್ಷೆಯ ಚಿತ್ರ ರಾಬರ್ಟ್ ಬಿಡುಗಡೆಗೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ. ರಾಬರ್ಟ್ ಸಿನಿಮಾ ಈಗಾಗಲೇ ವಿಭ್ಬಿನ್ನ ಶೈಲಿಯ ಟ್ರೈಲರ್, ಟೀಸರ್ ಹಾಗೂ ಪೋಸ್ಟರ್​ಗಳಿಂದ ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚು ಮಾಡಿದ್ದು, ಈಗ ಮತ್ತಷ್ಟು ಕುತೂಹಲ ಕೆರಳಿಸುವ ಪೋಸ್ಟರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದಲೇ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಾಲೆಂಜಿಂಗ್ […]

ರಿಲೀಸ್​ಗೂ ಮುನ್ನ.. D ಬಾಸ್ ಫ್ಯಾನ್ಸ್​ಗಳಿಂದ ‘ರಾಬರ್ಟ್’​ ಸಿನಿಮಾ ಪೋಸ್ಟರ್ ಬಿಡುಗಡೆ

Updated on: Nov 16, 2020 | 1:50 PM

ಮೈಸೂರು: ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ರಿಲೀಸ್​ ಎಂದರೆ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಹೀಗಾಗಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಹುನಿರೀಕ್ಷೆಯ ಚಿತ್ರ ರಾಬರ್ಟ್ ಬಿಡುಗಡೆಗೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ.

ರಾಬರ್ಟ್ ಸಿನಿಮಾ ಈಗಾಗಲೇ ವಿಭ್ಬಿನ್ನ ಶೈಲಿಯ ಟ್ರೈಲರ್, ಟೀಸರ್ ಹಾಗೂ ಪೋಸ್ಟರ್​ಗಳಿಂದ ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚು ಮಾಡಿದ್ದು, ಈಗ ಮತ್ತಷ್ಟು ಕುತೂಹಲ ಕೆರಳಿಸುವ ಪೋಸ್ಟರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದಲೇ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗುವ ಮುನ್ನವೇ ಹವಾ ಶುರು ಮಾಡಿದೆ. ಬ್ರಾಂಡ್ ಆಫ್ ಸ್ಯಾಂಡಲ್​ವುಡ್ ಡಿ ಬಾಸ್ ಫ್ಯಾನ್ಸ್ ಕೆ.ಆರ್.ನಗರ ಟೀಂ‌ನಿಂದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ರಾಬರ್ಟ್ ಚಿತ್ರದ ಕಟೌಟ್​ಗೆ ಕ್ಷೀರಾಭಿಷೇಕ ಮಾಡಿದ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.


pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us