ದಾವಣಗೆರೆ: ಸಾಲಬಾಧೆಯಿಂದ ಬೇಸತ್ತಿದ್ದ ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯರಗುಂಟೆ ಗ್ರಾಮದಲ್ಲಿ ನಡೆದಿದ್ದು, ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದೆಬಿಹಾಳ ತಾಲೂಕಿನ ಆಲೂರು ಗ್ರಾಮದ ನಿವಾಸಿ ಮಲ್ಲಪ್ಪ ಬಿರಾದಾರ (45) ಆತ್ಮಹತ್ಯೆ ಮಾಡಿಕೊಂಡವರು. ಇವರು ಬ್ಯಾಂಕ್ನಲ್ಲಿ ತುಂಬ ಸಾಲ ಮಾಡಿಕೊಂಡಿದ್ದರು. ಆದರೆ ಕಳೆದ ವರ್ಷ ಬೆಳೆ ನಷ್ಟವಾಗಿ, ಸಾಲವನ್ನು ತೀರಿಸಲು ಸಾಧ್ಯವಾಗದೇ ಮಲ್ಲಪ್ಪ ಬಿರಾದಾರ ವಿಷ ಸೇವಿಸಿದ್ದಾರೆ. ಪೊಲೀಸರು ಮಲ್ಲಪ್ಪನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಸಂತೆಯಲ್ಲಿ ಕಂತೆ ಕಂತೆ ಖೋಟಾ ನೋಟ್ ಜೊತೆ ಪತ್ತೆಯಾದ ಐನಾತಿಗಳು ಅರೆಸ್ಟ್