PSG ಚಾಂಪಿಯನ್ಸ್… ಈ ಸಲ ಕಪ್ RCBಗೆ?
ಶನಿವಾರ ಬುಡಾಪೆಸ್ಟ್‌ನ ಪುಸ್ಕಾಸ್ ಅರೆನಾದಲ್ಲಿ ನಡೆದ 2026ರ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ PSG ತಂಡವು ಆರ್ಸೆನಲ್ ಕ್ಲಬ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4–3 ಅಂತರದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಿದೆ.
ಯುಇಎಫ್‌ಎ ಚಾಂಪಿಯನ್ಸ್ ಲೀಗ್ನಲ್ಲಿ ಫ್ರಾನ್ಸ್ ಕ್ಲಬ್ ಪ್ಯಾರಿಸ್ ಸೈಂಟ್-ಜರ್ಮೈನ್ (PSG) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಈ ಬಾರಿ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಇಂತಹದೊಂದು ಲೆಕ್ಕಾಚಾರಕ್ಕೆ ಮುಖ್ಯ ಕಾರಣ ಉಭಯ ತಂಡಗಳ ನಡುವಣ ಸಾಮ್ಯತೆ.
ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು ಯುರೋಪ್ನ ಬಲಿಷ್ಠ ಫುಟ್ಬಾಲ್ ತಂಡ ಎನಿಸಿಕೊಂಡರೂ ಮೊದಲ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲ್ಲಲು ತೆಗೆದುಕೊಂಡಿದ್ದು ಬರೋಬ್ಬರಿ 55 ವರ್ಷಗಳು. ಅದರಂತೆ 2025 ರ ಚಾಂಪಿಯನ್ಸ್ ಲೀಗ್ ಫೈನಲ್ನಲ್ಲಿ ಇಂಟರ್ ಮಿಲಾನ್ ತಂಡವನ್ನು 5-0 ಅಂತರದಿಂದ ಮಣಿಸಿ ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು.
ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ನ ಬಲಿಷ್ಠ ತಂಡ ಎನಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು 18 ವರ್ಷಗಳನ್ನು ತೆಗೆದುಕೊಂಡಿತ್ತು. ಅದರಂತೆ ಐಪಿಎಲ್ 2025ರ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಮೊದಲ ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು.
ಉಭಯ ತಂಡಗಳು ಸುದೀರ್ಘ ಕಾಯುವಿಕೆಯ ಬಳಿಕ 2025 ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಆದರೆ ಮೊದಲ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಪ್ಯಾರಿಸ್ ಸೈಂಟ್-ಜರ್ಮೈನ್ (PSG) ತನ್ನ ಕಿರೀಟ ಮುಡಿಗೇರಿಸಿಕೊಂಡಿದೆ.
ಅಂದರೆ ಶನಿವಾರ ಬುಡಾಪೆಸ್ಟ್‌ನ ಪುಸ್ಕಾಸ್ ಅರೆನಾದಲ್ಲಿ ನಡೆದ 2026ರ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ PSG ತಂಡವು ಆರ್ಸೆನಲ್ ಕ್ಲಬ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4–3 ಅಂತರದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಿದೆ.
ಅಂದರೆ ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು 2025, 2026 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಕಳೆದ ಬಾರಿ ಪಿಎಸ್ಜಿ ಚಾಂಪಿಯನ್ ಆದ ಬಳಿಕ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಪಿಎಸ್ಜಿ ಮತ್ತೊಮ್ಮೆ ಯುರೋಪ್ ಲೀಗ್ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿರುವ ಕಾರಣ, ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ.


