ರೈತ ಮಗನಿಗೆ 9ನೇ ರ‍್ಯಾಂಕ್! ಅಪ್ಪಟ ಗ್ರಾಮೀಣ ಪ್ರತಿಭೆಯ ಸಾಧನೆಗೆ ಪ್ರಶಂಸೆ ಮಹಾಪೂರ

ವಿಜಯಪುರ: ಒಳ್ಳೇ ಕಾಲೇಜ್​, ಟ್ಯೂಷನ್​ ಕ್ಲಾಸ್​, ಕಂಪ್ಯೂಟರ್​ ಹೀಗೆ ಎಲ್ಲಾ ಸೌಕರ್ಯವನ್ನ ಬಳಸಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯುವ ಮಂದಿ ಬಹಳಷ್ಟು ಇದ್ದಾರೆ. ಆದರೆ, ಇಂಥ ಯಾವುದೇ ಅನುಕೂಲಗಳಿಲ್ಲದೆ ಇರುವುದನ್ನೇ ಬಳಸಿಕೊಂಡು ಸಾಧನೆ ಮಾಡುವವರೇ ನಿಜಕ್ಕೂ ಗ್ರೇಟ್​. ಅಂಥದ್ದೇ ಒಂದು ಅಪ್ಪಟ ಗ್ರಾಮೀಣ ಪ್ರತಿಭೆ ಜಿಲ್ಲೆಯ ಸಿಂದಗಿ ಜ್ಞಾನಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿ ಮಾಳಪ್ಪ ನಿಂಗಪ್ಪ ಹೊಸಮನಿ. ಹೌದು, ರೈತನ ಮಗನಾಗಿರುವ ಮಾಳಪ್ಪ ಹೊಸಮನಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 9ನೇ ರ‍್ಯಾಂಕ್ […]

ರೈತ ಮಗನಿಗೆ 9ನೇ ರ‍್ಯಾಂಕ್! ಅಪ್ಪಟ ಗ್ರಾಮೀಣ ಪ್ರತಿಭೆಯ ಸಾಧನೆಗೆ ಪ್ರಶಂಸೆ ಮಹಾಪೂರ

Updated on: Jul 14, 2020 | 4:11 PM

ವಿಜಯಪುರ: ಒಳ್ಳೇ ಕಾಲೇಜ್​, ಟ್ಯೂಷನ್​ ಕ್ಲಾಸ್​, ಕಂಪ್ಯೂಟರ್​ ಹೀಗೆ ಎಲ್ಲಾ ಸೌಕರ್ಯವನ್ನ ಬಳಸಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯುವ ಮಂದಿ ಬಹಳಷ್ಟು ಇದ್ದಾರೆ. ಆದರೆ, ಇಂಥ ಯಾವುದೇ ಅನುಕೂಲಗಳಿಲ್ಲದೆ ಇರುವುದನ್ನೇ ಬಳಸಿಕೊಂಡು ಸಾಧನೆ ಮಾಡುವವರೇ ನಿಜಕ್ಕೂ ಗ್ರೇಟ್​. ಅಂಥದ್ದೇ ಒಂದು ಅಪ್ಪಟ ಗ್ರಾಮೀಣ ಪ್ರತಿಭೆ ಜಿಲ್ಲೆಯ ಸಿಂದಗಿ ಜ್ಞಾನಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿ ಮಾಳಪ್ಪ ನಿಂಗಪ್ಪ ಹೊಸಮನಿ.

ಹೌದು, ರೈತನ ಮಗನಾಗಿರುವ ಮಾಳಪ್ಪ ಹೊಸಮನಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿದ್ದಾನೆ. ಪರೀಕ್ಷೆಯಲ್ಲಿ ಶೇಕಡಾ 97.66 ಅಂಕ ಗಳಿಸಿ ಎಲ್ಲರ ಗಮನ ಸೆಳೆದಿರುವ ಮಾಳಪ್ಪ ಮೂಲತಃ ಕಲಬುರಗಿ ಜಿಲ್ಲೆಯ ಯಾತನೂರ ಮೂಲದ ಯುವಕ. ಸಿಂದಗಿಯಲ್ಲಿ ಬಾಡಿಗೆ ರೂಂ ಮಾಡಿಕೊಂಡು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿದ್ದಾನೆ.

ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದಿರುವ ಮಾಳಪ್ಪನ ಸಾಧನೆಗೆ ಇದೀಗ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ತನ್ನ ಸಾಧನೆಯ ಬಗ್ಗೆ ವಿಡಿಯೋ ಮೂಲಕ ಸಂತಸ ಹಂಚಿಕೊಂಡಿರುವ ವಿದ್ಯಾರ್ಥಿಯ ಮಾತು ಇದೀಗ ಸಖತ್ ವೈರಲ್ ಆಗಿದೆ.

Published On - 3:46 pm, Tue, 14 July 20