ಕ್ಷುಲಕ ಕಾರಣಕ್ಕೆ ಮಾರಾಮಾರಿ: ಒಬ್ಬನ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

ಹಾಸನ: ಕ್ಷುಲಕ ಕಾರಣಕ್ಕೆ ಯುವಕರ ಎರಡು ಗುಂಪುಗಳ ನಡುವೆ ನೆಡೆದ ಮಾರಮಾರಿಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಹಾಸನದ ರಿಂಗ್ ರಸ್ತೆಯಲ್ಲಿರುವ ಉಲ್ಲಾಸ್ ಬಾರ್ ಬಳಿ ನೆಡೆದಿದೆ. ಆಗಿದ್ದಾದರು ಏನು? ನಗರದ ರಿಂಗ್ ರಸ್ತೆಯಲ್ಲಿರುವ ಉಲ್ಲಾಸ್ ಬಾರ್ ಬಳಿ ತನ್ನ ಸ್ನೇಹಿತರೊಂದಿಗೆ ನಿಂತಿದ್ದ ಮನು ಎಂಬ ಯುವಕನೆಡೆಗೆ ಕುಡಿದ ಮತ್ತಿನಲ್ಲಿದ್ದ ಪುನೀತ್ ಹಾಗೂ ಚಂದನ್ ಎಂಬಿಬ್ಬರು ಬಾಟಲ್ ಬಿಸಾಡಿದ್ದಾರೆ. ಇದನ್ನು ಪ್ರಶ್ನಿಸಿದ ಮನುವಿನ ಮೇಲೆ ಪುನೀತ್ ಹಾಗೂ ಚಂದನ್ ಹಲ್ಲೆ ಮಾಡಿದ್ದಾರೆ. […]

ಕ್ಷುಲಕ ಕಾರಣಕ್ಕೆ ಮಾರಾಮಾರಿ: ಒಬ್ಬನ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

Updated on: Jul 17, 2020 | 12:37 PM

ಹಾಸನ: ಕ್ಷುಲಕ ಕಾರಣಕ್ಕೆ ಯುವಕರ ಎರಡು ಗುಂಪುಗಳ ನಡುವೆ ನೆಡೆದ ಮಾರಮಾರಿಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಹಾಸನದ ರಿಂಗ್ ರಸ್ತೆಯಲ್ಲಿರುವ ಉಲ್ಲಾಸ್ ಬಾರ್ ಬಳಿ ನೆಡೆದಿದೆ.

ಆಗಿದ್ದಾದರು ಏನು?
ನಗರದ ರಿಂಗ್ ರಸ್ತೆಯಲ್ಲಿರುವ ಉಲ್ಲಾಸ್ ಬಾರ್ ಬಳಿ ತನ್ನ ಸ್ನೇಹಿತರೊಂದಿಗೆ ನಿಂತಿದ್ದ ಮನು ಎಂಬ ಯುವಕನೆಡೆಗೆ ಕುಡಿದ ಮತ್ತಿನಲ್ಲಿದ್ದ ಪುನೀತ್ ಹಾಗೂ ಚಂದನ್ ಎಂಬಿಬ್ಬರು ಬಾಟಲ್ ಬಿಸಾಡಿದ್ದಾರೆ. ಇದನ್ನು ಪ್ರಶ್ನಿಸಿದ ಮನುವಿನ ಮೇಲೆ ಪುನೀತ್ ಹಾಗೂ ಚಂದನ್ ಹಲ್ಲೆ ಮಾಡಿದ್ದಾರೆ.

ನಂತರ ಘಟನಾ ಸ್ಥಳಕ್ಕೆ ಬಂದ ಮನುವಿನ ಸ್ನೇಹಿತರು ಪುನೀತ್ ಹಾಗೂ ಚಂದನ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪುನೀತ್(28) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೆ ಸಾವನ್ನಪ್ಪಿದ್ದು, ಚಂದನ್ ಗೆ ಗಂಭೀರ ಗಾಯಗಳಾಗಿವೆ. ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Published On - 12:34 pm, Fri, 17 July 20