ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಬೆಂಗಳೂರು ಆಸ್ಪತ್ರೆಗಳ ಬೆಡ್ ಪುರಾಣ..
ಬೆಂಗಳೂರು:ಕೊರೊನಾ ಸೋಂಕಿತರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 5879 ಬೆಡ್ ಗಳು ಮೀಸಲಿಟ್ಟಿದ್ದೇವೆ ಅಂತ ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಸುಳ್ಳು ಕಥೆ ಹೇಳಿದರಾ? ಅನ್ನೋ ಅನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ.ಎಷ್ಟೇ ಕಾಲ್ ಮಾಡಿದ್ರು ಕೆಲ ಆಸ್ಪತ್ರೆಗಳು ಕಾಲ್ ಪಿಕ್ ಮಾಡ್ತಿಲ್ಲ ಅನ್ನೋ ಮಾಹಿತಿ ಟಿವಿ9 ನಡೆಸಿದ ರಿಯಾಲಿಟಿ ಚೆಕ್ ಮುಖಾಂತರ ಬೆಡ್ ಬುಕ್ಕಿಂಗ್ ಬಂಡವಾಳ ಬಟಾಬಯಲಾಗಿದೆ. ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಕೊರೊನಾ ಸೋಂಕಿತರಿಗೆಂದೇ 5879 ಬೆಡ್ ಗಳು ಮೀಸಲಿಟ್ಟಿದ್ದೇವೆ ಅಂತ ಹೇಳಿಕೊಂಡಿದ್ರು. ಆದರೆ ಟಿವಿ9 ನೆಡೆಸಿದ ರಿಯಾಲಿಟಿ ಚೆಕ್ […]

ಬೆಂಗಳೂರು:ಕೊರೊನಾ ಸೋಂಕಿತರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 5879 ಬೆಡ್ ಗಳು ಮೀಸಲಿಟ್ಟಿದ್ದೇವೆ ಅಂತ ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಸುಳ್ಳು ಕಥೆ ಹೇಳಿದರಾ? ಅನ್ನೋ ಅನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ.ಎಷ್ಟೇ ಕಾಲ್ ಮಾಡಿದ್ರು ಕೆಲ ಆಸ್ಪತ್ರೆಗಳು ಕಾಲ್ ಪಿಕ್ ಮಾಡ್ತಿಲ್ಲ ಅನ್ನೋ ಮಾಹಿತಿ ಟಿವಿ9 ನಡೆಸಿದ ರಿಯಾಲಿಟಿ ಚೆಕ್ ಮುಖಾಂತರ ಬೆಡ್ ಬುಕ್ಕಿಂಗ್ ಬಂಡವಾಳ ಬಟಾಬಯಲಾಗಿದೆ.
ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಕೊರೊನಾ ಸೋಂಕಿತರಿಗೆಂದೇ 5879 ಬೆಡ್ ಗಳು ಮೀಸಲಿಟ್ಟಿದ್ದೇವೆ ಅಂತ ಹೇಳಿಕೊಂಡಿದ್ರು. ಆದರೆ ಟಿವಿ9 ನೆಡೆಸಿದ ರಿಯಾಲಿಟಿ ಚೆಕ್ ನಲ್ಲಿ ಕಂಡುಬಂದ ಮಾಹಿತಿ ಏನೆಂದರೆ.. ಕೆಲ ಆಸ್ಪತ್ರೆಗಳಿಗೆ ಬೆಡ್ ಗಳ ವಿಚಾರವಾಗಿ ಕಾಲ್ ಮಾಡಿದ್ರೆ ಕಾಲ್ ಪಿಕ್ ಮಾಡೋರೆ ಇಲ್ಲದಂತಾಗಿದೆ. ಕಾಲ್ ಪಿಕ್ ಮಾಡಿದರೂ ನಮ್ಮಲ್ಲಿ ಬೆಡ್ ಮಾತ್ರ ಖಾಲಿ ಇಲ್ಲ ಆನ್ನೋ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಮೊದಲಿಗೆ ಕಿಮ್ಸ್ ಆಸ್ಪತ್ರೆಗೆ ಕಾಲ್ ಮಾಡಿದ್ರೆ ಆಕ್ಸಿಜನ್ ಬೆಡ್ ಗಳು ಖಾಲಿ ಇಲ್ಲ ಎನ್ನುತ್ತಿದ್ದಾರೆ. ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಕಾಲ್ ಮಾಡಿದ್ರೆ ಅಲ್ಲಿಯೂ ಸಹ ನಮ್ಮಲ್ಲಿ ಬೆಡ್ ಗಳು ಖಾಲಿ ಇಲ್ಲ ಅನ್ನುತ್ತಿದ್ದಾರೆ. ನಂತರ ಸೇಂಟ್ ಜಾನ್ಸ್ ಆಸ್ಪತ್ರೆಗೆ ಕಾಲ್ ಮಾಡಿದ್ರೆ ಅಲ್ಲಿ ನೇರವಾಗಿ ಕೊರೊನಾ ಸೋಂಕಿತರನ್ನ ಅಡ್ಮಿಟ್ ಮಾಡಿಕೊಳ್ಳುವುದಿಲ್ಲ. ನೀವು ಬಿಬಿಎಂಪಿ ಮೂಲಕವೇ ಬರಬೇಕು ಅಂತಿದ್ದಾರೆ. ಇನ್ನು ಬಿಡದಿ ಬಳಿಯ ರಾಜರಾಜೇಶ್ವರಿ ಆಸ್ಪತ್ರೆಗೆ ಕಾಲ್ ಮಾಡಿದ್ರೆ ನಮ್ಮಲ್ಲಿ ಜನರಲ್ ವಾರ್ಡ್ ಗೆ ಬೇಕಾದರೆ ಅಡ್ಮಿಟ್ ಮಾಡಿಕೊಳ್ತೀವಿ. ಐಸಿಯು ವಾರ್ಡ್ ನಲ್ಲಿ ಬೆಡ್ ಖಾಲಿ ಇಲ್ಲ ಅಂತಿದ್ದಾರೆ.
ಆದರೆ ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ನೋಡಿದ್ರೆ ಟ್ವಿಟರ್ ನಲ್ಲಿ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನೂರು ಬೆಡ್ ಗಳು, ಕಿಮ್ಸ್ ನಲ್ಲಿ 50 ಬೆಡ್ ಗಳು, ದೇವನಹಳ್ಳಿ ರಸ್ತೆಯ ಆಕಾಶ್ ಆಸ್ಪತ್ರೆಯಲ್ಲಿ 625 ಬೆಡ್ ಗಳು, ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ 156 ಬೆಡ್ ಗಳು ಖಾಲಿ ಇವೆ ಹಾಗೂ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 300 ಬೆಡ್ ಗಳು ಬುಕ್ಕಿಂಗ್ ಮಾಡಿದ್ದೀವಿ ಅನ್ನುತ್ತಿದ್ದಾರೆ. ಹಾಗಿದ್ರೆ ಕಮೀಷನರ್ ಜನರಿಗೆ ಸುಳ್ಳು ಮಾಹಿತಿ ನೀಡಿದರಾ ಅನ್ನೋ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.




