ಈರುಳ್ಳಿ ರಾಶಿಯಲ್ಲಿ ಕುಳಿತು ಡಂಬಳ ರೈತನ ಕಣ್ಣೀರು, ನೆರವಿಗಾಗಿ ಸಿಎಂಗೆ ಮೊರೆ

ಈರುಳ್ಳಿ ರಾಶಿಯಲ್ಲಿ ಕುಳಿತು ಡಂಬಳ ರೈತನ ಕಣ್ಣೀರು, ನೆರವಿಗಾಗಿ ಸಿಎಂಗೆ ಮೊರೆ

ಮುಂಡರಗಿ: ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕೆ ಎಲ್ಲೆಡೆ ಲಾಕ್ ಡೌನ್ 2.0 ಜಾರಿಯಲ್ಲಿದೆ. ಇದು ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿನ್ನೆಲೆಯಲ್ಲಿ ರೈತ ಹುಚ್ಚಪ್ಪ ರಾಜೂರ, ಈರುಳ್ಳಿ ರಾಶಿಯಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಜೊತೆಗೆ, ತಮ್ಮ ಸಹಾಯಕ್ಕೆ ಬರುವಂತೆ ಸಿಎಂ ಯಡಿಯೂರಪ್ಪ ಅವ್ರಿಗೆ ಕೈಮುಗಿದು ಬೇಡಿಕೊಂಡಿದ್ದಾರೆ. ಇದು ಸುಮಾರು ೩೦೦ ಚೀಲ ಈರುಳ್ಳಿ ಬೆಳೆದ ರೈತನ ಗೋಳಾಟ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತ ರೈತ ಹುಚ್ಚಪ್ಪ ರಾಜೂರ, ಲಕ್ಷಾಂತರ ವೆಚ್ಚ ಮಾಡಿ ಈರುಳ್ಳಿ ಬೆಳೆ ಬೆಳೆದಿದ್ದೇನೆ. ಖರೀದಿದಾರರು ಇಲ್ಲದೇ ಜಮೀನಿನಲ್ಲೇ ಕೊಳೆಯುತ್ತಿದೆ ಅಂತಾ ತಮ್ಮ ಬವಣೆ ತೋಡಿಕೊಂಡಿದ್ದಾರೆ. ಸಾಲಗಾರರ ಕಾಟದಿಂದ ಗ್ರಾಮಕ್ಕೂ ಹೋಗಲು ಆಗುತ್ತಿಲ್ಲ. ಸಮಸ್ಯೆ ಇತ್ಯರ್ಥ ಆಗದಿದ್ರೆ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ರೈತ ಹೇಳಿದ್ದಾರೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ ರೈತ.

Published On - 5:11 pm, Wed, 29 April 20

Click on your DTH Provider to Add TV9 Kannada