ದೊಡ್ಡ ಸಮಾಧಾನ: ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕು ಪತ್ತೆಯಾಗಿಲ್ಲ!
ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಹೊಸದಾಗಿ 11 ಜನರಿಗೆ ಕೊರೊನಾ ಅಟ್ಯಾಕ್ ಆಗಿರುವುದು ಪತ್ತೆಯಾಗಿದೆ. ಬೆಳಗಿನ ವರದಿಯಲ್ಲಿ 9 ಮಂದಿಗೆ ಸೋಂಕು ತಗುಲಿತ್ತು. ಸಂಜೆ ವರದಿಯಲ್ಲಿ ಇಬ್ಬರಲ್ಲಿ ಮಾತ್ರ ಕೊವಿಡ್ 19 ದೃಢಪಟ್ಟಿದೆ. ಇದರಿಂದ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಕಲಬುರಗಿ ಜಿಲ್ಲೆಯ 8 ಜನರಿಗೆ ಕೊರೊನಾ ಸೋಂಕು ಅಟ್ಯಾಕ್ ಆಗಿದ್ದು, ಬೆಳಗಾವಿ, ಮೈಸೂರು, ದಾವಣಗೆರೆ ಜಿಲ್ಲೆಯ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. […]
ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಹೊಸದಾಗಿ 11 ಜನರಿಗೆ ಕೊರೊನಾ ಅಟ್ಯಾಕ್ ಆಗಿರುವುದು ಪತ್ತೆಯಾಗಿದೆ. ಬೆಳಗಿನ ವರದಿಯಲ್ಲಿ 9 ಮಂದಿಗೆ ಸೋಂಕು ತಗುಲಿತ್ತು. ಸಂಜೆ ವರದಿಯಲ್ಲಿ ಇಬ್ಬರಲ್ಲಿ ಮಾತ್ರ ಕೊವಿಡ್ 19 ದೃಢಪಟ್ಟಿದೆ. ಇದರಿಂದ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ.
ಇಂದು ಒಂದೇ ದಿನ ಕಲಬುರಗಿ ಜಿಲ್ಲೆಯ 8 ಜನರಿಗೆ ಕೊರೊನಾ ಸೋಂಕು ಅಟ್ಯಾಕ್ ಆಗಿದ್ದು, ಬೆಳಗಾವಿ, ಮೈಸೂರು, ದಾವಣಗೆರೆ ಜಿಲ್ಲೆಯ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತ 534 ಜನರ ಪೈಕಿ 20 ಮಂದಿ ಮೃತಪಟ್ಟಿದ್ದು, 215 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೊರೊನಾ ಪತ್ತೆಯಾಗಿಲ್ಲ: ಸಮಾಧಾನಕರ ಸಂಗತಿಯೆಂದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ. ನಿನ್ನೆ ಬೆಂಗಳೂರು ನಗರದಲ್ಲಿ ಒಂದು ಪ್ರಕರಣ ಮಾತ್ರ ದೃಢಪಟ್ಟಿತ್ತು. ಈವರೆಗೆ ಬೆಂಗಳೂರು ಸಿಟಿಯಲ್ಲಿ 131 ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 58 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ತುಮಕೂರಿನಲ್ಲಿ ಕೋರೊನಾ ಸೋಂಕಿಗೆ ಎರಡನೇ ಬಲಿ: 74 ವರ್ಷದ ವೃದ್ದೆಯೊಬ್ಬರು ತುಮಕೂರಿನಲ್ಲಿ ಕೊರೊನಾಗದಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಸಚಿವ ಸುರೇಶ್ ಕುಮಾರ್ ವೃದ್ಧೆಯ ಸಾವನ್ನು ಖಚಿತಪಡಿಸಿದ್ದಾರೆ. ಆದ್ರೆ ತುಮಕೂರು ಜಿಲ್ಲಾಡಳಿತ ಸಮರ್ಪಕ ಮಾಹಿತಿ ನೀಡದೆ ಹಿಂದುಮುಂದು ನೋಡುತ್ತಿದೆ.
Published On - 5:37 pm, Wed, 29 April 20