ಯೋಧನ ಮೇಲೆ ಹಲ್ಲೆ: ಕೇಸ್ ವಾಪಸ್, ತನಿಖೆ ಬಳಿಕ ಪೊಲೀಸರ ವಿರುದ್ಧ ಕ್ರಮ

ಯೋಧನ ಮೇಲೆ ಹಲ್ಲೆ: ಕೇಸ್ ವಾಪಸ್, ತನಿಖೆ ಬಳಿಕ ಪೊಲೀಸರ ವಿರುದ್ಧ ಕ್ರಮ

ಬೆಂಗಳೂರು: ಸದಲಗಾ ಪೊಲೀಸರ ಮೇಲೆ ಸಿಆರ್‌ಪಿಎಫ್‌ ಯೋಧ ಸಚಿನ್ ಸಾವಂತ್ ಹಲ್ಲೆ ಆರೋಪ ಸಂಬಂಧ ಪ್ರಕರಣವನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಕೇಸ್ ವಾಪಸ್ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಜೊತೆಗೆ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿರುವ ಸರ್ಕಾರ, ವರದಿ ಬಂದ ಬಳಿಕ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗಳ್ಳಲು ನಿರ್ಧರಿಸಿದೆ.

ಏ.23ರಂದು ಯಕ್ಸಂಬಾದಲ್ಲಿ ಮಾಸ್ಕ್ ಧರಿಸದಿದ್ದದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಯೋಧ ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿತ್ತು. ಈ ಸಂಬಂಧ ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ CRPF ಯೋಧ ಸಚಿನ್​ನನ್ನು ಬಂಧಿಸಲಾಗಿತ್ತು. ನಂತರ 14 ದಿನಗಳ ಕಾಲ ಯೋಧನಿಗೆ ನ್ಯಾಯಾಂಗ ಬಂಧನ ವಿಧಿಸಿ ಹಿಂಡಲಗಾ ಜೈಲಿನಲ್ಲಿಡಲಾಗಿತ್ತು.

ಏ.28ರಂದು ಯೋಧ ಸಚಿನ್ ಜಾಮೀನು ಮೇಲೆ ಹೊರ ಬಂದಿದ್ದು ಇಲ್ಲಿನ CRPF ಘಟಕಕ್ಕೆ ಮರಳಿದ್ದರು. ಸದಲಗಾ ಪೊಲೀಸರು ಆತನ ಹಿಂಭಾಗದ ಮೇಲೆ ಬಾಸುಂಡೆ ಬರುವ ಹಾಗೆ ಥಳಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಮಧ್ಯೆ ಎಲ್ಲೆಡೆ ಘಟನೆ ಸಂಬಂಧ ಭಾರಿ ವಿರೋಧಗಳು ವ್ಯಕ್ತವಾಗಿದ್ದವು.

Click on your DTH Provider to Add TV9 Kannada