ಶಾಲಾ ಸ್ಥಿತಿಗತಿ ಅರಿಯಲು ಮೊದಲ ಬಾರಿಗೆ BEO ವಾಸ್ತವ್ಯ!
ಕೊಪ್ಪಳ: ಗ್ರಾಮದ ಸಮಸ್ಯೆಗಳನ್ನು ಖುದ್ದಾಗಿ ಅರಿಯಲು ತಮ್ಮ ಅಧಿಕಾರದ ಅವಧಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು. ಹಾಗೆಯೇ ಶಾಲಾ ಸ್ಥಿತಿಗತಿಗಳನ್ನು ತಿಳಿಯಲು ಇತ್ತೀಚೆಗಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಶಾಲಾ ವಾಸ್ತವ್ಯ ಹೂಡಿದ್ದರು. ಇದೀಗ ಶಿಕ್ಷಣ ಸಚಿವರ ಶಾಲಾ ವಾಸ್ತವ್ಯದಿಂದ ಪ್ರೇರಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಸಹ ಶಾಲಾ ವಾಸ್ತವ್ಯ ಮಾಡಿದ್ದಾರೆ. ಗಂಗಾವತಿ ತಾಲೂಕಿನ ಈಳಿಗನೂರು ಗ್ರಾಮದ ಶಾಲೆಯಲ್ಲಿ ಬಿಇಒ ಸೋಮಶೇಖರಗೌಡ ತಡರಾತ್ರಿ ವಾಸ್ತವ್ಯ ಹೂಡಿದ್ದರು. ವಾಸ್ತವ್ಯದ ಪೂರ್ವದಲ್ಲಿ ಗ್ರಾಮದ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಗೀತೆಗಳನ್ನು ಹಾಡುತ್ತಾ […]
ಕೊಪ್ಪಳ: ಗ್ರಾಮದ ಸಮಸ್ಯೆಗಳನ್ನು ಖುದ್ದಾಗಿ ಅರಿಯಲು ತಮ್ಮ ಅಧಿಕಾರದ ಅವಧಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು. ಹಾಗೆಯೇ ಶಾಲಾ ಸ್ಥಿತಿಗತಿಗಳನ್ನು ತಿಳಿಯಲು ಇತ್ತೀಚೆಗಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಶಾಲಾ ವಾಸ್ತವ್ಯ ಹೂಡಿದ್ದರು. ಇದೀಗ ಶಿಕ್ಷಣ ಸಚಿವರ ಶಾಲಾ ವಾಸ್ತವ್ಯದಿಂದ ಪ್ರೇರಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಸಹ ಶಾಲಾ ವಾಸ್ತವ್ಯ ಮಾಡಿದ್ದಾರೆ.
ಗಂಗಾವತಿ ತಾಲೂಕಿನ ಈಳಿಗನೂರು ಗ್ರಾಮದ ಶಾಲೆಯಲ್ಲಿ ಬಿಇಒ ಸೋಮಶೇಖರಗೌಡ ತಡರಾತ್ರಿ ವಾಸ್ತವ್ಯ ಹೂಡಿದ್ದರು. ವಾಸ್ತವ್ಯದ ಪೂರ್ವದಲ್ಲಿ ಗ್ರಾಮದ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಗೀತೆಗಳನ್ನು ಹಾಡುತ್ತಾ ಮೆರವಣಿಗೆ ಸಾಗಿ, ಬಳಿಕ ಶಾಲೆಯಲ್ಲಿ ವಾಸ್ತವ್ಯ ಮಾಡಿದರು. ಬಿಇಒ ಸೋಮಶೇಖರಗೌಡಗೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಸಾಥ್ ನೀಡಿದರು. ಈ ಮೂಲಕ ರಾಜ್ಯದಲ್ಲಿಯೇ ಶಾಲಾ ವಾಸ್ತವ್ಯ ಮಾಡಿದ ಮೊದಲ ಬಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾದರು.