ನಿಮ್ಮನ್ನು ನಕ್ಕು ನಲಿಸುತ್ತಿರುವ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ತೀರ್ಪುಗಾರಾಗಿರುವ ಸೃಜನ್ ಮತ್ತು ಶೃತಿಯ ಮನದಾಳದ ಮಾತು!
ಶೃತಿ ಅವರಿಗೆ ಖಂಡಿತ ವಯಸ್ಸಾಗುತ್ತಿಲ್ಲ. ತಮ್ಮ ಮೋಹಕ ಮತ್ತು ಮಾಸದ ಮುಗುಳುನಗೆಯಿಂದ ಎಂಥವರನ್ನೂ ಮೋಡಿ ಮಾಡಿಬಿಡುವ ಶೃತಿಗೆ ಈಗ 46 ರ ಪ್ರಾಯ ಅಂದರೆ ನಂಬಲಾಗಲ್ಲ. ತಮ್ಮ ವಯಸ್ಸಿಗಿಂತ ಅವರು 10-12 ವರ್ಷ ಚಿಕ್ಕವರಾಗಿ ಕಾಣುತ್ತಾರೆ.
ಬೆಂಗಳೂರು: ಕನ್ನಡ ಟಿವಿ ಚ್ಯಾನೆಲ್ ಗಳಲ್ಲಿ ಬರುವ ಕಾಮಿಡಿ ಶೋಗಳನ್ನು ನೀವು ನಿಯಮಿತ ನೋಡುತ್ತಿದ್ದರೆ ಮತ್ತು ‘ಮಜಾಭಾರತ’ ಆಫ್ ಏರ್ ಆಗಿದ್ಕಕ್ಕೆ ಬೇಜಾರು ಮಾಡಿಕೊಂಡಿದ್ದರೆ ನಿಮಗೊಂದು ಸಂತೋಷದ ಸುದ್ದಿ ಇದೆ ಮಾರಾಯ್ರೇ. ಸೃಜನ್ ಲೋಕೇಶ್ (Srijan Lokesh) ಮತ್ತು ಕನ್ನಡದ ಖ್ಯಾತ ನಟಿ ಶೃತಿ (Shruthi) ಅವರು ತೀರ್ಪುಗಾರರಾಗಿರುವ ವಿನೂತನ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ (Gichchi Giligili) ಕನ್ನಡ ಕಲರ್ಸ್ ಟಿವಿಯಲ್ಲಿ ಶುರುವಾಗಿದೆ ಮತ್ತು ಅದಾಗಲೇ ಕನ್ನಡಿಗರಿಂದ ಪ್ರಶಂಸೆಯನ್ನೂ ಬಾಚಿಕೊಳ್ಳುತ್ತಿದೆ. ಕನ್ನಡ ಟಿವಿ ಲೋಕದಲ್ಲಿ ಸೃಜನ್ ಲೋಕೇಶ್ ಬಹಳ ದೊಡ್ಡ ಮತ್ತು ಮನೆ ಮಾತಾಗಿರುವ ಹೆಸರು. ಅವರು ಒಂದು ಕಾಮಿಡಿ ಶೋ ನಡೆಸಿಕೊಡುತ್ತಾರೆ ಅಂತಾದ್ರೆ ಚ್ಯಾನೆಲ್ ಗಳು ಟಿ ಅರ್ ಪಿ ಬಗ್ಗೆ ಯೋಚನೆ ಮಾಡುವುದೇ ಬೇಕಿಲ್ಲ. ಕನ್ನಡ ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಮಂಜು ಪಾವಗಡ ಅವರು ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
‘ಗಿಚ್ಚಿ ಗಿಲಿಗಿಲಿ’ ಶೋ ನಿರ್ಮಾಪಕರು ಶುಕ್ರವಾರ ಬೆಂಗಳೂರಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು ಮತ್ತು ಇದರಲ್ಲಿ ಭಾಗಿಯಾಗಿದ್ದ ಸೃಜನ್ ಹಾಗೂ ಶೃತಿ ತಮ್ಮ ರೋಲ್, ಸ್ಪರ್ಧಿಗಳು ಮತ್ತು ಅವರಲ್ಲಿರುವ ಪ್ರತಿಭೆ, ತೀರ್ಪುಗಾರರಾಗಿ ಅವರ ಮೇಲಿರುವ ಹೊಣೆಗಾರಿಕೆ ಮತ್ತು ಜವಾಬ್ದಾರಿ, ಅವರಿಬ್ಬರ ನಡುವಿನ ಕೆಮಿಸ್ಟ್ರಿ ಮತ್ತು ತಮಗಿರುವ ಸವಾಲುಗಳ ಬಗ್ಗೆ ಪರಸ್ಪರ ಕಾಲೆಳೆಯುತ್ತಾ, ಅಪ್ಯಾಯತೆಯಿಂದ ಮಾತಾಡಿದರು. ಸೃಜನ್ ನೀಲಿ ಬಣ್ಣದ ಬ್ಲೇಜರ್ ಮತ್ತು ಅದರೊಳಗೆ ಚೆಕ್ಸ್ ವೇಸ್ ಕೋಟ್ ಧರಿಸಿ ಎಂದಿನಂತೆ ಆಕರ್ಷಕವಾಗಿ ಕಾಣುತ್ತಿದ್ದರು.
ಟೀಮ್ ಇಂಡಿಯಾದ ಅಗ್ರಮಾನ್ಯ ಬ್ಯಾಟರ್ ವಿರಾಟ್ ಕೊಹ್ಲಿ ಥರ ಹೇರ್ ಸ್ಟೈಲ್ ಮತ್ತು ಗಡ್ಡ ಅವರಿಗೆ ಚೆನ್ನಾಗಿ ಒಪ್ಪುತ್ತಿದೆ. ಟಿವಿ ಲೋಕದ ಸೂಪರ್ ಸ್ಟಾರ್ ಅಂದ್ರೆ ಸುಮ್ಮೇನಾ ಮಾರಾಯ್ರೇ?
ಶೃತಿ ಅವರಿಗೆ ಖಂಡಿತ ವಯಸ್ಸಾಗುತ್ತಿಲ್ಲ. ತಮ್ಮ ಮೋಹಕ ಮತ್ತು ಮಾಸದ ಮುಗುಳುನಗೆಯಿಂದ ಎಂಥವರನ್ನೂ ಮೋಡಿ ಮಾಡಿಬಿಡುವ ಶೃತಿಗೆ ಈಗ 46 ರ ಪ್ರಾಯ ಅಂದರೆ ನಂಬಲಾಗಲ್ಲ. ತಮ್ಮ ವಯಸ್ಸಿಗಿಂತ ಅವರು 10-12 ವರ್ಷ ಚಿಕ್ಕವರಾಗಿ ಕಾಣುತ್ತಾರೆ. ಕಾರ್ಯಕ್ರಮ ನಡೆಯುವಾಗ ಅಲ್ಲಿದ್ದವರ ದೃಷ್ಟಿ ಶೃತಿ ಮೇಲೆಯೇ ನೆಟ್ಟಿದ್ದರೆ ಆಶ್ಚರ್ಯವಿಲ್ಲ ಮಾರಾಯ್ರೇ.
ತಿಳಿಬಣ್ಣದ ಸಿಂಪಲ್ ಸೀರೆಯುಟ್ಟು ಅದಕ್ಕೆ ಕಾಂಟ್ರಾಸ್ಟ್ ಆಗಿರುವ ಹಸಿರು ಬಣ್ಣದ ರವಿಕೆ ಮ್ಯಾಚ್ ಮಾಡಿ, ಕೈ ತುಂಬಾ ಹಸಿರು ಬಳೆ, ಕತ್ತಲ್ಲಿ ದೊಡ್ಡ ಆದರೆ ಅವರಿಗೆ ಒಪ್ಪುವ ಹಾರ, ದೊಡ್ಡ ಕಿವಿಯೋಲೆ ಮತ್ತು ಈಗ ಹೆಚ್ಚು ಫ್ಯಾಶನ್ ನಲ್ಲಿರುವ ದೊಡ್ಡ ಉಂಗುರ-ಲುಕ್ಸ್ ನಲ್ಲಿ ಶೃತಿ ಈಗಲೂ ಯಾವುದೇ ಯುವ ನಟಿಯರಿಗಿಂತ ಕಮ್ಮಿಯಿಲ್ಲ ಮಾರಾಯ್ರೇ.
ಅವರಿಬ್ಬರಿಗೂ ಒಳ್ಳೆಯದಾಗಲಿ ಮತ್ತು ‘ಗಿಚ್ಚಿ ಗಿಲಿಗಿಲಿ,’ ಶೋ ಯಶಸ್ಸಿನ ಎಲ್ಲ ಮಜಲುಗಳನ್ನು ದಾಟಿ ಮುಂದೆ ಸಾಗಲಿ ಅಂತ ಹಾರೈಸೋಣ.
ಇದನ್ನೂ ಓದಿ:‘ಆ್ಯಂಕರ್ಗಳಿಗೆ ಬೈಯ್ಯುತ್ತಿದ್ದೆ, ಆದ್ರೆ ಈಗ ನಾನೇ ಆ್ಯಂಕರ್’: ಹೊಸ ಜರ್ನಿ ಆರಂಭಿಸಿದ ಬಿಗ್ ಬಾಸ್ ಮಂಜು