ಚಿಕ್ಕಬಳ್ಳಾಪುರ: ಚಂಡಮಾರುತದ ಚಳಿ ತಡೆಯಲಾಗದ ಬಡಪಾಯಿ ಕೂಲಿಕಾರ್ಮಿಕರು, ಮಲಗುವಾಗ ರಾತ್ರಿ ಕೊಠಡಿಯಲ್ಲೆ ಕಿಟಕಿ ಬಾಗಿಲು ಮುಚ್ಚಿ, ಕೊಠಡಿ ಬೆಚ್ಚಗೆ ಇರಲು ಟಿನ್ ಡಬ್ಬವೊಂದರಲ್ಲಿ ಸೌದೆ ಇದ್ದಿಲು ತುಂಬಿ ಬೆಂಕಿ ಹಾಕಿದ್ದರು. ಆದ್ರೆ ಕೊಠಡಿಯಲ್ಲಿ ಗಾಳಿಯಾಡದ ಕಾರಣ ಹಾಗೂ ಕಾರ್ಬನ್ ಮೊನಾಕ್ಸೈಡ್ ತುಂಬಿ ಉಸಿರಾಡಲು ಆಗದೆ 15 ವರ್ಷ ಬಾಲಕಿ ಮೃತಪಟ್ಟು, ಆಕೆಯ ತಂದೆ, ತಾಯಿ, ತಂಗಿ ಅಸ್ವಸ್ಥರಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯ ಗೇಟ್ ಬಳಿ ಇರುವ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ತುಮಕೂರು ಮೂಲಕ ಕಾರ್ಮಿಕರಾದ ವೀರಾಜಿನೆಯ ಹಾಗೂ ಶಾಂತಮ್ಮ ದಂಪತಿ ಬಂದಿದ್ದರು. ಜೊತೆಗೆ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕರೆ ತಂದಿದ್ರು. ಆದ್ರೆ ನಿನ್ನೆ ರಾತ್ರಿ ತೀವ್ರ ಚಳಿ ಇದ್ದ ಕಾರಣ ಕೊಠಡಿಯಲ್ಲಿ ಟಿನ್ ಡಬ್ಬದಲ್ಲಿ ಕೆಂಡ ತುಂಬಿ ಸೌದೆ ಹಾಕಿದ್ರು. ರಾತ್ರಿ ಊಟ ಮಾಡಿ ಎಂದಿನಂತೆ ನಾಲ್ಕು ಜನ ಮಲಗಿದ್ರು.
15 ವರ್ಷದ ಅರ್ಚನಾ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.. ಆದ್ರೆ ಮಧ್ಯೆ ರಾತ್ರಿ ದಂಪತಿಯ ಮಗಳು ಅರ್ಚನಾಗೆ ಉಸಿರಾಟ ತೊಂದರೆಯಾಗಿ ವಾಂತಿ ಮಾಡಿಕೊಂಡಿದ್ದಾಳೆ. ಮಗಳಿಗೆ ಏನಾಯಿತು ಅಂತ ದಂಪತಿ ನೋಡುವಷ್ಟರಲ್ಲಿ 15 ವರ್ಷದ ಅರ್ಚನಾ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ನಂತರ ವೀರಾಂಜಿನೆಯ್ಯ ಹಾಗೂ ಶಾಂತಮ್ಮ ಮತ್ತೆ ಅವರ ಮತ್ತೊರ್ವ ಮಗಳು (13) ಅಂಕಿತಾ ಸಹ ಅಸ್ವತ್ಥರಾಗಿದ್ದಾರೆ.
ಬಳಿಕ ಬಾಗಿಲು ತೆಗೆದು ರಾತ್ರಿಯಿಡಿ ಹೊರಗೆ ಕುಳಿತಿದ್ದಾರೆ. ಬೆಳಿಗ್ಗೆ ಕಾರ್ಖಾನೆಯ ಮಾಲೀಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಮಂಚೇನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಅಸ್ವತ್ಥರನ್ನು ಗೌರಿಬಿದನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.