KAS ಅಧಿಕಾರಿ ಸುಧಾ ಆಪ್ತೆ ಮನೆ ಮೇಲೆ ದಾಳಿ: 3.5 ಕೆ.ಜಿ ಚಿನ್ನ, ₹250 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆ

ಬೆಂಗಳೂರು: KAS ಅಧಿಕಾರಿ ಸುಧಾ, ಆಪ್ತರ ಮನೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ಮನೆಯಲ್ಲಿ ಸಿಕ್ಕ ದಾಖಲೆ ನೋಡಿ ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್​ರ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫ್ಲ್ಯಾಟ್ ಮೇಲೆ ದಾಳಿ ನಡೆದಿತ್ತು. ಈ ವೇಳೆ ಫ್ಲ್ಯಾಟ್‌ನಲ್ಲಿ ಮೂರೂವರೆ ಕೆ.ಜಿ ಚಿನ್ನ, 7 ಕೆ.ಜಿ ಬೆಳ್ಳಿ, 36 ಲಕ್ಷ ರೂ., ₹250 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ರೇಣುಕಾ ಪತಿ ಚಂದ್ರಶೇಖರ್ ನಿವೃತ್ತ DySPಯಾಗಿದ್ದು, […]

KAS ಅಧಿಕಾರಿ ಸುಧಾ ಆಪ್ತೆ ಮನೆ ಮೇಲೆ ದಾಳಿ: 3.5 ಕೆ.ಜಿ ಚಿನ್ನ, ₹250 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆ

Updated on: Nov 08, 2020 | 2:51 PM

ಬೆಂಗಳೂರು: KAS ಅಧಿಕಾರಿ ಸುಧಾ, ಆಪ್ತರ ಮನೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ಮನೆಯಲ್ಲಿ ಸಿಕ್ಕ ದಾಖಲೆ ನೋಡಿ ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ.

ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್​ರ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫ್ಲ್ಯಾಟ್ ಮೇಲೆ ದಾಳಿ ನಡೆದಿತ್ತು. ಈ ವೇಳೆ ಫ್ಲ್ಯಾಟ್‌ನಲ್ಲಿ ಮೂರೂವರೆ ಕೆ.ಜಿ ಚಿನ್ನ, 7 ಕೆ.ಜಿ ಬೆಳ್ಳಿ, 36 ಲಕ್ಷ ರೂ., ₹250 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ರೇಣುಕಾ ಪತಿ ಚಂದ್ರಶೇಖರ್ ನಿವೃತ್ತ DySPಯಾಗಿದ್ದು, ಪುತ್ರ ಎಇಇ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ರೇಣುಕಾ 4 ಕಂಪನಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಈ ಕಂಪನಿಯಲ್ಲಿ ಸುಧಾ ಬೇನಾಮಿ ಇದ್ಯಾ ಎಂದು ತನಿಖೆ ಮಾಡಲಾಗುತ್ತಿದೆ.

ಯಲಹಂಕ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ. ಸುಧಾ ಮನೆ ACB ರೇಡ್; ಮನೆಯಲ್ಲಿ ‘ಚಿನ್ನದ ಗಣಿ’

ಇನ್ನು ಎಸಿಬಿ ದಾಳಿ ವೇಳೆಯೆ ರೇಣುಕಾಳ ತಂದೆ ಮೃತಪಟ್ಟಿದ್ದಾರೆ. ನಿನ್ನೆ ತಂದೆ ಸಾವಿನಿಂದಾಗಿ ತನಿಖೆಯ ಅರ್ಧದಲ್ಲೇ ರೇಣುಕಾ ಮತ್ತು ಚಂದ್ರಶೇಖರ್ ಮನೆಯಿಂದ ಹೊರಟಿದ್ದರು. ಹೀಗಾಗಿ ಮಕ್ಕಳ ಸಮ್ಮುಖದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದರು. ಎಸ್ಪಿ ಕುಲ್ ದೀಪ್ ಕುಮಾರ್ ನೇತೃತ್ವದಲ್ಲಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಅಂಡ್ ಟೀಂ ನಿಂದ ದಾಳಿ ನಡೆದಿತ್ತು.

ಇದನ್ನೂ ಓದಿ: ಕಿಡ್ನಾಪ್-ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ KAS ಸುಧಾ ಪತಿ: ಪ್ರಕರಣ ಯಾವುದು ಗೊತ್ತಾ!?

Published On - 2:14 pm, Sun, 8 November 20