AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯ 3 ದಿನವೂ ಪಟಾಕಿ ಹಚ್ತೀನಿ, ಜೈಲಿಗೆ ಹಾಕಿದ್ರೂ OK -ಸರ ಸಿಡಿಸಿ ವಾಟಾಳ್​ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಸರ್ಕಾರ ಕೆಲ ನಿರ್ಬಂಧ ಹೇರಿರುವುದನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಪಟಾಕಿ ಸಿಡಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಾಟಾಳ್ ಇಂದು ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಸರ್ಕಾರ ನಿಷೇಧ ಮಾಡಿರುವ 2 ಸಾವಿರದ ಸರಪಟಾಕಿ ಸಿಡಿಸಿ ಪ್ರತಿಭಟನೆ ನಡೆಸಿದರು. ದೀಪಾವಳಿ ಅಂದ್ರೆ ಪಟಾಕಿ ಹೊಡೆಯಲೇ ಬೇಕು. […]

ದೀಪಾವಳಿಯ 3 ದಿನವೂ ಪಟಾಕಿ ಹಚ್ತೀನಿ, ಜೈಲಿಗೆ ಹಾಕಿದ್ರೂ OK -ಸರ ಸಿಡಿಸಿ ವಾಟಾಳ್​ ಕಿಡಿ
KUSHAL V
|

Updated on: Nov 08, 2020 | 2:34 PM

Share

ಬೆಂಗಳೂರು: ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಸರ್ಕಾರ ಕೆಲ ನಿರ್ಬಂಧ ಹೇರಿರುವುದನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಪಟಾಕಿ ಸಿಡಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಾಟಾಳ್ ಇಂದು ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಸರ್ಕಾರ ನಿಷೇಧ ಮಾಡಿರುವ 2 ಸಾವಿರದ ಸರಪಟಾಕಿ ಸಿಡಿಸಿ ಪ್ರತಿಭಟನೆ ನಡೆಸಿದರು. ದೀಪಾವಳಿ ಅಂದ್ರೆ ಪಟಾಕಿ ಹೊಡೆಯಲೇ ಬೇಕು. ಸರ್ಕಾರ ನಿರ್ಬಂಧ ಹೇರಿರೋದು ಸರಿಯಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.

ಸರ್ಕಾರ ದೀಪಾವಳಿಗೆ ಪಟಾಕಿ ಹೊಡೆಯಬಾರದು ಅಂತಾ ಹೇಳಿದೆ. ಇದು ಇಡೀ ದೇಶದ ಹಬ್ಬ. ಸರ್ಕಾರಕ್ಕೆ ಬುದ್ಧಿಯಿಲ್ಲ. ಪಟಾಕಿ ಹೊಡೆದಿಲ್ಲ ಅಂದ್ರೆ ದೀಪಾವಳಿ ಹಬ್ಬ ಪರಿಪೂರ್ಣವಾಗಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಕಿಡಿಕಾರಿದರು. ಜನ ಇಷ್ಟು ವರ್ಷಗಳಿಂದ ಹಬ್ಬ ಮಾಡಿಕೊಂಡು ಬಂದಿದ್ದಾರೆ. ಕಣ್ಣಿಗೆ ತೊಂದರೆ ಆಗಬಹುದು. ಹಾಗಾಗಿ, ಎಚ್ಚರಿಕೆಯಿಂದ ಎಲ್ಲರೂ ಪಟಾಕಿ ಹಚ್ಚಿ. ಪಟಾಕಿ ಯುವಕರ ಹಬ್ಬ. ಸರ್ಕಾರ ಎಲ್ಲಾ ಬೋಗಸ್, ಸುಳ್ಳು ಹೇಳುತ್ತದೆ. ಅವರಿಗೆ ಬುದ್ಧಿಯಿಲ್ಲ. ಸಿಗರೇಟ್​ನಿಂದ ತೊಂದರೆ ಅಗಲ್ವಾ? ಬಾರ್​ನಲ್ಲಿ ಕುಡಿಯೋದ್ರಿಂದ ಕೊರೊನಾ ಬರಲ್ವಾ? ಸಿನಿಮಾ, ಮಾಲ್ ಎಲ್ಲಾ ಒಪೆನ್ ಮಾಡಿದ್ದಾರೆ. 3 ದಿನ ಪಟಾಕಿ ಹೊಡೆದರೆ ಬೆಂಗಳೂರು ಏನು ಹಾಳಾಗಿ ಹೋಗಲ್ಲ ಎಂದು ವಾಟಾಳ್​ ಕಿಡಿಕಾರಿದರು.

ಜೊತೆಗೆ, ಪಟಾಕಿಯಿಂದ ಕೊರೊನಾ ಬರುತ್ತೆ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಹಸಿರು ಪಟಾಕಿ ಅಂದ್ರೆ ಸುರ್ಸುರ್ ಬತ್ತಿ. ಅದು ಲೆಕ್ಕಕ್ಕೆ ಇಲ್ಲ. ನಾನು 3 ದಿನ ಕೂಡ ಪಟಾಕಿ ಹಚ್ಚುತ್ತೇನೆ. ನನ್ನನ್ನ ಜೈಲಿಗೆ ಹಾಕಿದ್ರು ಪರವಾಗಿಲ್ಲ ಎಂದು ವಾಟಾಳ್​ ನಾಗರಾಜ್​ ಹೇಳಿದ್ದಾರೆ.

Follow Us
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ