Gold Price: ಇಂದಿನ ಚಿನ್ನದ ಮಾರುಕಟ್ಟೆ.. ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರಾ?

Gold Silver Rate: ಕೈಯ್ಯಲ್ಲಿ ಹಣವಿದ್ದಾಗ ಜನರು ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚು. ಈ ಕುರಿತಂತೆ ಚಿನ್ನ ಖರೀದಿಸುವ ಮುನ್ನ ಗುಣಮಟ್ಟವನ್ನು ಪರಿಶೀಲಿಸಿ ಚಿನ್ನ ಖರೀದಿಸುವುದು ಉತ್ತಮ.

Gold Price: ಇಂದಿನ ಚಿನ್ನದ ಮಾರುಕಟ್ಟೆ.. ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರಾ?
ಚಿನ್ನಾಭರಣ (ಸಾರ್ದರ್ಭಿಕ ಚಿತ್ರ)
Follow us
shruti hegde
| Updated By: Digi Tech Desk

Updated on:Feb 17, 2021 | 10:31 AM

ಬೆಂಗಳೂರು: ಚಿನ್ನದ ಬೆಲೆ ಇಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹ 44,225 ಹಾಗೂ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹ 48,299 ಆಗಿದೆ. ಬೆಳ್ಳಿ ದರದಲ್ಲಿಯೂ ನಿನ್ನೆಗಿಂತ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. 1ಕೆಜಿ ಬೆಳ್ಳಿದರ ₹69,509 ಇದೆ. ಚಿನ್ನದ ದರ ಹಾಗೂ ಬೆಳ್ಳಿಯ ದರದಲ್ಲಿ ಸರಿಸುಮಾರು 20 ರೂ.ಗಳ ಏರಿಳಿತ ಕಂಡುಬಂದರೂ ಸಹ ಒಂದು ಮಟ್ಟಿಗೆ ಸ್ಥಿರತೆಯಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು.

ಕೈಯ್ಯಲ್ಲಿ ಹಣವಿದ್ದಾಗ ಜನರು ಚಿನ್ನದ ಮೇಲೆ ಹೂಡಿಕಿ ಮಾಡುವುದು ಹೆಚ್ಚು. ಚಿನ್ನ ಅತಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಚಿನ್ನದ ಆಯ್ಕೆಗೆ ನಾವು ಅಷ್ಟೊಂದು ಸಮಯ ವ್ಯರ್ಥ ಮಾಡುತ್ತೇವೆ. ಬೆಲೆ ಬಾಳುವ ವಸ್ತುವನ್ನು ಖರೀದಿಸುವ ಮುನ್ನ ಹತ್ತಾರು ಬಾರಿ ಯೋಚಿಸುತ್ತೇವೆ. ಕೊಂಡುಕೊಳ್ಳುವ ಸಮಯದಲ್ಲಿ ಸರಿಯಾಗಿ ಕೊಂಡು ಕೊಳ್ಳದಿದ್ದರೆ, ನಮಗೇ ನಷ್ಟವಾಗುವುದು. ಹಾಗಾಗಿ, ಚಿನ್ನವನ್ನು ಕೊಂಡುಕೊಳ್ಳುವಾಗಾ ಏನನ್ನು ಗಮನಿಸಬೇಕು ಎಂಬುದು ಈ ಕೆಳಗಿನಂತಿದೆ.

BIS ಸ್ಟಾಂಡರ್ಡ್ : ಚಿನ್ನದ ಗುಣಮಟ್ಟವನ್ನು ಆಯ್ಕೆ ಮಾಡುವುದು BIS (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್). ತ್ರಿಕೋನ ಆಕಾರ ಹೊಂದಿರುವ ಈ ಗುರುತು ಚಿನ್ನದ ಪರಿಶುದ್ಧತೆಯನ್ನು ತಿಳಿಸುತ್ತದೆ. ಈ ಚಿಹ್ನೆಯನ್ನು ಗಮನಿಸಿ ಚಿನ್ನ ಖರೀದಿಸುವುದು ಉತ್ತಮ.

ಚಿನ್ನ ತಯಾರಿಕೆಯ ವರ್ಷ: ಚಿನ್ನವನ್ನು ಯಾವಾಗ ತಯಾರಿಸಲಾಯಿತು ಎಂಬುದನ್ನು ಬಿಐಎಸ್​ ನಿರ್ಧರಿಸುತ್ತದೆ. ಯಾವ ವರ್ಷದಲ್ಲಿ ಚಿನ್ನ ತಯಾರಿಸಲಾಗಿದೆ ಎಂಬುದಕ್ಕೆ ಪ್ರತ್ಯೇಕ ಕೋಡ್​ ಇರುತ್ತದೆ. 2000 ನೇ ಇಸವಿಯಲ್ಲಿ ತಯಾರಾದ ಚಿನ್ನಕ್ಕೆ ‘ಎ’ ಎಂದೂ ಹಾಗೂ 2008ರಲ್ಲಾದರೆ ‘ಜೆ’ ಹೀಗೆ ಗುರುತು ನೀಡಲಾಗಿರುತ್ತದೆ.

ಆಭರಣ ತಯಾರಕರ ಮಾಹಿತಿ: ಅಷ್ಟೊಂದು ಬೆಲೆ ಬಾಳುವ ವಸ್ತುವನ್ನು ಖರೀದಿಸುವಾಗ ಎಷ್ಟು ಒಳ್ಳೆಯ ಗುಣಮಟ್ಟವನ್ನು ಹೊಂದಿದೆ ಎಂಬುದರ ಕುರಿತು ಸ್ವಲ್ಪ ಯೋಚಿಸಿ. ಹಾಗೂ ಪರಿಶುದ್ಧ ಚಿನ್ನಕ್ಕೆ ‘ಕೆಡಿಎಂ’ ಹಾಲ್ ಮಾರ್ಕ್​ ಇಲ್ಲದಿದ್ದರೆ ಅದು ಪರಿಶುದ್ಧ ಚಿನ್ನವಲ್ಲ ಎಂಬುದು ತಿಳಿಯುತ್ತದೆ. ಈ ಕುರಿತಾಗಿ ಸ್ವಲ್ಪ ಗಮನಿಸುವುದು ಉತ್ತಮ.

ಚಿನ್ನಾಭರಣ ಪರಿಶುದ್ಧ ಪರೀಕ್ಷಿಸುವ ಅಗತ್ಯ ಏನಿರಬಹುದು ಎಂಬ ಗೊಂದಲ ನಿಮ್ಮಲ್ಲಿ ಮೂಡಿರಬಹುದು. ಈ ಕುರಿತಂತೆ, ಚಿನ್ನದ ಮೇಲೆ ಹೂಡಿಕೆ ಮಾಡಲು ಚಿನ್ನ ಖರೀದಿಸುವ ಸಮಯದಲ್ಲಿ ಗಮನ ನೀಡದಿದ್ದರೆ, ಮಾರಾಟ ಮಾಡುವ ಸಂದರ್ಭದಲ್ಲಿ ಚಿನ್ನದ ಅಂಗಡಿಗಳಲ್ಲಿ ಸಮಸ್ಯೆ ಉಂಟಾಗಬಹುದು. ಪರಿಶುದ್ಧ ಚಿನ್ನಕ್ಕೆ ಉತ್ತಮ ಮೌಲ್ಯ ಸಿಗುವಾಗ ಸಮಸ್ಯೆ ಉಂಟಾಗಬಹುದು. ಈ ನಿಟ್ಟಿನಲ್ಲಿ ಚಿನ್ನವನ್ನು ಖರೀದಿಸುವ ಮುನ್ನ ಸ್ವಲ್ಪ ಯೋಚಿಸಿ.

ಇದನ್ನೂ ಓದಿ: Gold Rate: ಚಿನ್ನದ ಬೆಲೆ ಮತ್ತೆ ಗಗನಕ್ಕೆ, ಬೆಳ್ಳಿ ಬೆಲೆಯೂ ಏರಿದೆ.. ಬೆಂಗಳೂರಲ್ಲಿ ಚಿನ್ನದ ದರ ಎಷ್ಟಿದೆ ಗೊತ್ತಾ?

ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್: ಗ್ರಾಂ       22 ಕ್ಯಾರೆಟ್ ಚಿನ್ನ (ಇಂದು)        22 ಕ್ಯಾರೆಟ್ ಚಿನ್ನದ (ನಿನ್ನೆ)

1 ಗ್ರಾಂ            ₹4,425                                      ₹4,425 8ಗ್ರಾಂ            ₹35,400                                   ₹35,400 10 ಗ್ರಾಂ         ₹44,250                                   ₹44,250 100ಗ್ರಾಂ        ₹4,42,500                               ₹4,42,500

24 ಕ್ಯಾರೆಟ್ ಚಿನ್ನದ ಬೆಲೆ: ಗ್ರಾಂ         ಇಂದು                             ನಿನ್ನೆ

1ಗ್ರಾಂ         ₹4,829                         ₹4,829 8ಗ್ರಾಂ        ₹38,632                       ₹38,632 10ಗ್ರಾಂ      ₹48,290                       ₹48,290 100ಗ್ರಾಂ    ₹4,82,900                   ₹4,82,900

ಬೆಳ್ಳಿ ದರ: ಶನಿವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದರೂ ಕೂಡಾ ಬೆಳ್ಳಿದರ ಏರಿಕೆಯಾಗಿತ್ತು. ನಂತರದ ಬೆಲೆಯಲ್ಲಿ ಬೆಳ್ಳಿ ಸ್ಥಿರತೆ ಕಾಪಾಡಿಕೊಂಡು ಬಂದಿದೆ. ಸಾಮಾನ್ಯವಾಗಿ ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ಚಿನ್ನದ ಬೆಲೆ ಏರಿಕೆಯತ್ತ ಜಿಗಿದಾಗ ಬೆಳ್ಳಿಯನ್ನು ಕೊಂಡುಕೊಳ್ಳುವವರ ಸಂಖ್ಯೆ ಏರುತ್ತದೆ.

ಗ್ರಾಂ      ಬೆಳ್ಳಿ ದರ (ಇಂದು)           ನಿನ್ನೆ 1ಗ್ರಾಂ        ₹69.50                         ₹69.50 8ಗ್ರಾಂ        ₹556                            ₹556 10ಗ್ರಾಂ      ₹695                            ₹695 100 ಗ್ರಾಂ   ₹6,950                       ₹6,950 1 ಕೆ.ಜಿ         ₹68,500                   ₹68,500

Published On - 9:57 am, Wed, 17 February 21

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ