Gold – Silver Price | ಫೆ 25ಕ್ಕೆ ಗುರು ಪುಷ್ಯ ಯೋಗ! ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

| Updated By: Digi Tech Desk

Updated on: Feb 23, 2021 | 3:28 PM

Gold Silver Rate: ಇದೀಗ ಚಿನ್ನದ ದರದಲ್ಲಿ ಶೇ.0.3ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಆಗಸ್ಟ್​ಗೆ ಹೋಲಿಸಿದರೆ ಚಿನ್ನದ ದರ ಇಳಿಕೆಯತ್ತ ತಿರುಗಿದೆ. Guru Pushya Yoga

Gold - Silver Price | ಫೆ 25ಕ್ಕೆ ಗುರು ಪುಷ್ಯ ಯೋಗ! ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಾಳೆ ಫೆಬ್ರವರಿ 25ಕ್ಕೆ ಗುರು ಪುಷ್ಯ ಯೋಗವಿದೆ. ಚಿನ್ನ ಖರೀದಿಗೆ ಹೇಳಿ ಮಾಡಿಸಿದ ಸಮಯವಿದು. ಕಳೆದ 8 ತಿಂಗಳಿಗೆ ಗಮನಿಸಿದರೆ, ಚಿನ್ನದ ವಹಿವಾಟು ಸ್ವಲ್ಪ ಕಡಿಮೆ ಮಟ್ಟದಲ್ಲಿತ್ತು. ಇದೀಗ ಚಿನ್ನದ ದರದಲ್ಲಿ ಶೇ.0.3ರಷ್ಟು ಏರಿಕೆಯಾಗಿದೆ. ಬೆಲೆ ಇದೀಗ ₹46,340 ಆಗಿದೆ. ಹಾಗೆಯೇ ಸಂತೋಷದ ವಿಷಯ ಏನೆಂದರೆ ಕಳೆದ 6 ತಿಂಗಳಲ್ಲಿ ಚಿನ್ನದ ದರ 10 ಗ್ರಾಂಗೆ ಸರಿಸುಮಾರು 10,000ದಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಆಗಸ್ಟ್​ ತಿಂಗಳಿನಲ್ಲಿ ಚಿನ್ನದ ದರ ಗರಿಷ್ಠ ಮಟ್ಟವನ್ನು ತಲುಪಿತ್ತು. ಅಂದರೆ 10 ಗ್ರಾಂಗೆ 55,200ಕ್ಕೆ ಏರಿಕೆಯಾಗಿತ್ತು. ಪ್ರಸ್ತುತದಲ್ಲಿ ದರವನ್ನು ಗಮನಿಸದರೆ ಗ್ರಾಹಕರಿಗೆ ಚಿನ್ನ ಕೊಳ್ಳಲು ಸರಿಯಾದ ಸಮಯವಿದು. ಹಾಗೆಯೇ ಬೆಳ್ಳಿದರ ಸರಕು ವಿನಿಮಯ ಕೇಂದ್ರ (ಎಂಸಿಎಕ್ಸ್​) ಶೇ. 0.8ರಷ್ಟು ಏರಿಕೆ ಕಂಡಿದ್ದು, ಇದೀಗ ಬೆಲೆ ₹70,000ಕ್ಕೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ 22 ಕ್ಯಾರೆಟ್​ ಚಿನ್ನದ ದರ 10ಗ್ರಾಂಗೆ ₹45,410 ಇದೆ ಹಾಗೂ ಮುಂಬೈನಲ್ಲಿ ಚಿನ್ನದ ದರ ₹45,130ಕ್ಕೆ ಮಾರಾಟವಾಗುತ್ತಿದೆ.

ಪ್ರಮುಖ ನಗರಗಳಲ್ಲಿ ಚಿನ್ನ ದರ:
ನಗರ                22ಕ್ಯಾರೆಟ್​ ಚಿನ್ನ ಬೆಲೆ
ಚೆನ್ನೈ                      ₹43,780
ಮುಂಬೈ                   ₹45,130
ದೆಹಲಿ                      ₹45,410
ಕೋಲ್ಕತ್ತಾ                ₹45,410
ಬೆಂಗಳೂರು            ₹43,270
ಹೈದರಾಬಾದ್        ₹43,270
ಕೇರಳ                      ₹43,270
ಪುಣೆ                         ₹45,130
ಅಹಮದಾಬಾದ್    ₹45,770

ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಆಭರಣ ಮಳಿಗೆಗಳಲ್ಲಿ ಶುಲ್ಕ ವಿಧಿಸುವುದರಿಂದ ಚಿನ್ನದ ಬೆಲೆ ನಗರದಿಂದ ನಗರಕ್ಕೆ ವಿಭಿನ್ನವಾಗಿರುತ್ತದೆ. ಬೆಂಗಳೂರು, ಕೇರಳ ಹಾಗೂ ಹೈದರಾಬಾದ್​ನಲ್ಲಿ ಚಿನ್ನದ ದರ ಸಮಾನದ ದರ ಹೊಂದಿದ್ದು, ಜನರು ಚಿನ್ನ ಕೊಳ್ಳಲು ಮುಗಿಬಿದ್ದಿದ್ದಾರೆ. ಅಂತರಾಷ್ಟ್ರೀಯ ಚಿನ್ನದ ಸಮಿತಿ ಪ್ರಕಾರ ಚಿನ್ನದ ಬೇಡಿಕೆಯಲ್ಲಿ ಭಾರತ ಮುಂದಿದೆ. ದೇಶ, ಚಿನ್ನ ಕೊಂಡು ಕೊಳ್ಳುವಿಕೆಯಲ್ಲಿ ಮೇಲುಗೈ ಸಾಧಿಸುತ್ತಲೇ ಇದೆ. ಜನರು ಹೆಚ್ಚು ಶುದ್ಧ ಚಿನ್ನವನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.

ಬೆಳ್ಳಿ ದರ:
ವಾಸ್ತವದಲ್ಲಿ ಬೆಳ್ಳಿ ದರ ಹೇಗೆ ಏರಿಕೆಯತ್ತ ಸಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಯಾವುದೇ ವಸ್ತುವಿನ ಬೆಲೆ ಕಡಿಮೆ ಇದ್ದಾಗ ಕೊಳ್ಳುವುದು ಮತ್ತು ಬೆಲೆ ಹೆಚ್ಚಿದ್ದಾಗ ಮಾರುವುದು ಸಾಮಾನ್ಯ. ಆದರೆ ಬೆಳ್ಳಿಯ ವಿಷಯಕ್ಕೆ ಬಂದಾಗಿ ಇದು ಕಷ್ಟಸಾಧ್ಯ. ಭಾರತದ ಎಲ್ಲಾ ನಗರಗಳ ಬೆಳ್ಳಿ ಬೆಲೆ, ಚಿನ್ನದಂತೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಬೆಳ್ಳಿಯ ದರ ಸಾಮಾನ್ಯವಾಗಿ ದೀರ್ಘಕಾಲದವರೆಗೆ ಸ್ಥಿರತೆಯನ್ನು ಕಾಪಾಡಿಕೊಂಡಿರುತ್ತದೆ. ಹೂಡಿಕೆ ಮಾಡಲು ನಿರ್ಧರಿಸಿದ್ದರೆ ಷೇrಉ ಹೂಡಿಕೆಗಿಂತ ಬೆಳ್ಳಿಯ ಮೇಲೆ ಹೂಡಿಕೆ ಮಾಡುವುದು ಒಳಿತು.

ಗ್ರಾಂ      ಬೆಳ್ಳಿ ದರ (ಇಂದು)      ನಿನ್ನೆ
1ಗ್ರಾಂ        ₹70                              ₹68.80
8ಗ್ರಾಂ        ₹560                            ₹558.40
10ಗ್ರಾಂ      ₹700                             ₹698
100 ಗ್ರಾಂ   ₹7,000                        ₹6,980
1 ಕೆ.ಜಿ          ₹60,000                      ₹69,800

ಇದನ್ನೂ ಓದಿ: Gold/Silver Prices: ಚಿನ್ನ ದರ ಕೊಂಚ ಏರಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

ಇದನ್ನೂ ಓದಿ: Gold/Silver Price: ಹಾವು ಏಣಿ ಆಟದತ್ತ.. ಚಿನ್ನದ ದರ ಮೊತ್ತ! ಏರಿಕೆ ಎಷ್ಟು?

Published On - 9:26 am, Tue, 23 February 21