Gold/Silver Price: ಹಾವು ಏಣಿ ಆಟದತ್ತ.. ಚಿನ್ನದ ದರ ಮೊತ್ತ! ಏರಿಕೆ ಎಷ್ಟು?

Gold Silver Rates: ಅಚ್ಚು ಮೆಚ್ಚಿನ ಪ್ರೇಯಸಿಗೆ, ಪ್ರೀತಿಯಿಂದ ಪ್ರೀತಿಸುವ ಹೆಂಡತಿ- ಮಕ್ಕಳಿಗೆ, ಸರ್ಪ್ರೈಸ್ ಕೊಡಲು ಹೊರಟಿರುವ ಸ್ನೇಹಿತರಿಗೆ ಚಿನ್ನ ಕೊಡಿಸಬೇಕು ಎಂಬ ತುಡಿತವಿದ್ದರೆ, ಇಂದಿನ ಚಿನ್ನದ ದರದ ಮಾಹಿತಿ ನಿಮಗಾಗಿ..

Gold/Silver Price: ಹಾವು ಏಣಿ ಆಟದತ್ತ.. ಚಿನ್ನದ ದರ ಮೊತ್ತ! ಏರಿಕೆ ಎಷ್ಟು?
ಸಾಂದರ್ಭಿಕ ಚಿತ್ರ
Follow us
| Updated By: ಸಾಧು ಶ್ರೀನಾಥ್​

Updated on:Feb 22, 2021 | 11:10 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಹಾವು ಏಣಿ ಆಟ ಆಡುತ್ತಲೇ ಇರುತ್ತದೆ. 2 ದಿನಗಳ ಹಿಂದೆ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನ ಇದೀಗ ಕೊಂಚವೇ ದರದಲ್ಲಿ ಏರಿಕೆಯತ್ತ ಮುಖ ಮಾಡಿರುವುದು ಕಂಡು ಬರುತ್ತಿದೆ. ವರ್ಷದಿಂದ ವರ್ಷಕ್ಕೆ ದರ ಹೋಲಿಸಿದರೆ ₹50,000 ಕ್ಕೆ ತಲುಪಿದ್ದ ಚಿನ್ನ ದರ ಇದೀಗ ₹40,000 ಆಸು ಪಾಸಿನಲ್ಲಿರುವುದು ಗ್ರಾಹಕರಿಗೆ ಖುಷಿಯ ಸಂಗತಿಯೇ ಸರಿ. ಇಂದು ಬೆಂಗಳೂರಿನಲ್ಲಿ  10 ಗ್ರಾಂ ಚಿನ್ನ ದರ ₹43,270 ಇದೆ. ಹಾಗೂ 24 ಕ್ಯಾರೆಟ್ ಚಿನ್ನ ದರ ₹ 47,200ಕ್ಕೆ ಮಾರಾಟವಾಗುತ್ತಿದೆ.

ಹುಡುಗಿಯರಿಗೆ ಚಿನ್ನ ಕಂಡರೆ ಇಷ್ಟ. ಹುಡುಗರಿಗೆ ಚಿನ್ನದಂತ ಹುಡುಗಿ ಕಂಡರೆ ಇಷ್ಟ!‌ ಪ್ರಿಯತಮನನ್ನು ಖುಷಿ ಪಡಿಸಲು ಆತನಿಗಿಷ್ಟವಾದ ಚಿನ್ನದಂತಹ  ಹುಡುಗಿಯ ಜೊತೆಗೆ, ಚಿನ್ನವನ್ನೂ ತೊಟ್ಟಿರುವ  ಪ್ರೇಯಸಿಯನ್ನು ನೋಡಲು ಆತನಿಗೆ ಇಷ್ಟವಿಲ್ಲದೇ ಹೋದೀತೆ? ಚಿನ್ನ ಎಂಬ ಮಾತು ಕರೆದಷ್ಟೇ ಹೊತ್ತು.. ಚಿನ್ನದಂತ ಹೆಂಡತಿ ಎಂಬ ಮಾತು ಕೇಳಿದಷ್ಟೇ ಹೊತ್ತು.. ಅದೇ ಮನೆಯಲ್ಲಿ ಚಿನ್ನವಿದ್ದರೆ ನೋಡಿದ ಅಷ್ಟೂ ಹೊತ್ತು.. ಹಾಗಾದರೆ ಚಿನ್ನ ಕೊಂಡುಕೊಳ್ಳ ಬೇಕು ಎಂಬ ತುಡಿತ ನಿಮ್ಮಲ್ಲಿದ್ದರೆ ಚಿನ್ನದ ದರದ ಮಾಹಿತಿ ಇಲ್ಲಿದೆ. ಕೂಡಿಟ್ಟ ಮೌಲ್ಯಕ್ಕೆ ಚಿನ್ನ ಬೇಕು ಅಂದಾಕ್ಷಣ ಹಿಂದೆ ಮುಂದೆ ಯೋಚಿಸುವ ಅಗತ್ಯವೇ ಇಲ್ಲ. ದರ ಕಡಿಮೆ ಇದ್ದಾಗಲೇ ಕೊಂಚ ಯೋಚಿಸಿ ಖರೀದಿಸುವುದು ಉತ್ತಮ.

ಇದೀಗ ಕೊಳ್ಳಬಹುದಾದ 22 ಕ್ಯಾರೆಟ್ ಚಿನ್ನದ ದರವಿದೆ : ನಿನ್ನೆ 1 ಗ್ರಾಂ ಚಿನ್ನದ ದರ ₹4,326 ಇದ್ದು, ಇದೀಗ ₹4,327 ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ ₹34,616 ಇದ್ದು, ಇದೀಗ ₹34,608 ಆಗಿದೆ. ಹಾಗೂ 10 ಗ್ರಾಂ ಚಿನ್ನ ದರ ನಿನ್ನೆ ₹47,260 ಇದ್ದು, ಇದೀಗ ₹43,270ಕ್ಕೆ ಮಾರಾಟವಾಗುತ್ತಿದೆ.

24 ಕ್ಯಾರೆಟ್ ಚಿನ್ನದ ದರ: ನಿನ್ನೆ 1 ಗ್ರಾಂ ಚಿನ್ನದ ದರ ₹4,719 ಇದ್ದು, ಇದೀಗ ₹4,720 ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ₹ 37, 752 ಇದ್ದು ಇದೀಗ ₹37,760 ಆಗಿದೆ. ನಿನ್ನೆ 10 ಗ್ರಾಂ ₹47,190 ಇದ್ದ ಚಿನ್ನದ ದರ, ಇದೀಗ ₹47,200 ಕ್ಕೆ ಮಾರಾಟವಾಗುತ್ತಿದೆ. ಹಾಗೂ 100 ಗ್ರಾಂ ಚಿನ್ನ ನಿನ್ನೆ ₹4,72,000ಕ್ಕೆ ಮಾರಾಟವಾಗುತ್ತಿದ್ದು, ಇಂದು ₹4,72,000 ಇದೆ.

ಹಿಂದಿನ ವರ್ಷದಲ್ಲಿ 24 ಕ್ಯಾರೆಟ್ ಚಿನ್ನದ ದರ ₹57 ಸಾವಿರದ ಸನಿಹಕ್ಕೆ ತಲುಪಿತ್ತು. ಅದಾದ ನಂತರದಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿತು. ಚಿನ್ನದ ದರ ₹47 ಸಾವಿರಕ್ಕೆ ಬಂದು ತಲುಪಿತು. ಮಧ್ಯಂತರದಲ್ಲಿ ದರ ಹಾವು ಏಣಿ ಆಟ ಪ್ರಾರಂಭಿಸಿದ್ದರೂ ಸಹ ಇದೀಗ ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಂಗೆ ₹47,200 ಆಗಿದೆ. ಚಿನ್ನ ಖರೀದಿಗೆಂದು ಹಣ ಕೂಡಿಟ್ಟ ಜನರಿಗೆ ಇದು ಭಾರೀ ಪ್ರಮಾಣದ ಖುಷಿ ತಂದಿದೆ.

ಬೆಳ್ಳಿ ದರ: ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ 100 ರೂ ವ್ಯತ್ಯಾಸ ಕಂಡು ಬಂದಿದೆ. ನಿನ್ನೆ ಬೆಳ್ಳಿ ದರ 1 ಕೆಜಿಗೆ ₹68,700 ಇತ್ತು. ಇಂದು ದರ ₹69,800 ಆಗಿದೆ. ಬೆಳ್ಳಿಯ ದರ ಕೊಂಚವೇ ಏರಿಕೆ ಕಂಡಿದೆ ಎಂದು ಹೇಳಬಹುದು. ಮನೆಯಲ್ಲಿ ವಿಶೇಷ ಪೂಜೆಗೆ ಬೆಳ್ಳಿಯನ್ನು ಖರೀದಿಸುವವರಿಗೆ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ಗ್ರಾಂ      ಬೆಳ್ಳಿ ದರ (ಇಂದು)      ನಿನ್ನೆ 1ಗ್ರಾಂ        ₹69                              ₹68.80 8ಗ್ರಾಂ        ₹552                            ₹558.40 10ಗ್ರಾಂ      ₹690                             ₹698 100 ಗ್ರಾಂ   ₹6,900                        ₹6,980 1 ಕೆ.ಜಿ          ₹69,000                      ₹68,800

ಇದನ್ನೂ ಓದಿ: Gold/Silver Prices: ಚಿನ್ನ ದರ ಕೊಂಚ ಏರಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

ಇದನ್ನೂ ಓದಿ: Gold/Silver Prices: ಇಳಿಕೆಯತ್ತ ಚಿನ್ನದ ದರ; ಆಭರಣ ಕೊಳ್ಳಲು ಸುಸಂದರ್ಭ

Published On - 9:31 am, Mon, 22 February 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ