Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price: ಗ್ರಾಹಕರಿಗೆ ಸಿಹಿ ಸುದ್ಧಿ; ಚಿನ್ನಕೊಳ್ಳಲು ಸುಸಂದರ್ಭ, ವಿವಿಧ ನಗರಗಳಲ್ಲಿ ಇಂದಿನ ದರ ಇಲ್ಲಿದೆ

Gold Silver Rate in Bengaluru: ಚಿನ್ನದರ ನಿನ್ನೆಗಿಂತ ಇಂದು ಕೊಂಚ ಏರಿಕೆ ಕಂಡಿದೆ. ಬೆಳ್ಳಿ ದರವೂ ಏರಿಕೆಯತ್ತ ಸಾಗಿದೆ.

Gold Silver Price: ಗ್ರಾಹಕರಿಗೆ ಸಿಹಿ ಸುದ್ಧಿ; ಚಿನ್ನಕೊಳ್ಳಲು ಸುಸಂದರ್ಭ, ವಿವಿಧ ನಗರಗಳಲ್ಲಿ ಇಂದಿನ ದರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
shruti hegde
| Updated By: Digi Tech Desk

Updated on:Mar 09, 2021 | 9:35 AM

ಬೆಂಗಳೂರು: ಮಹಿಳೆಯರಿಗೆ ಚಿನ್ನವೆಂದರೆ ಇಷ್ಟ. ಚಿನ್ನಕ್ಕೆ ಮುಗಿ ಬೀಳದವರು ಇದ್ದಾರೆಯೇ? ಚಿನ್ನ ನೋಡಲೂ ಚಂದ ಅಷ್ಟೇ ದುಬಾರಿ ಕೂಡಾ. ಕೊಳ್ಳಲು ಉತ್ತಮ ಸಮಯವನ್ನು ಕಾಯುತ್ತಿರುತ್ತಾರೆ ಗ್ರಾಹಕರು. ಮದುವೆ ಸಮಾರಂಭಗಳಿಗೆ ಚಿನ್ನವಿಲ್ಲದೆ ಶೋಭೆಯಿಲ್ಲ. ಪೂಜೆ-ಪುನಸ್ಕಾರಗಳು, ಬೆಳ್ಳಿಯ ಸಾಮಗ್ರಿಗಳಿಲ್ಲದೇ ಪೂರ್ಣವಾಗುವುದಿಲ್ಲ. ಹಾಗಿದ್ದಲ್ಲಿ ಚಿನ್ನದ ದರ ಎಷ್ಟಿರಬಹುದು? ಬೆಳ್ಳಿ ಯಾವ ದರದಲ್ಲಿ ಮಾರಾಟವಾಗುತ್ತಿದೆ. ಇಂದಿನ ದರ ಹೇಗಿದೆ? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಚಿನ್ನ ಅಥವಾ ಬೆಳ್ಳಿ ಕೊಳ್ಳಲು ನಿರ್ಧಾರ ಮಾಡಿದ್ದರೆ, ಒಮ್ಮೆ ದರ ಗಮನಿಸಿ ಅಂಗಡಿಯತ್ತ ತೆರಳುವುದು ಒಳಿತಲ್ಲವೇ.

ದೈನಂದಿನ ದರ ಬದಲಾವಣೆ ಪರಿಶೀಲಿಸಿದಾಗ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. 22ಕ್ಯಾರೆಟ್ 10ಗ್ರಾಂ ಚಿನ್ನ ನಿನ್ನೆ 41,710 ರೂಪಾಯಿಗೆ ಮಾರಾಟವಾಗಿತ್ತು. ಇಂದಿನ ದರ 42,000 ರೂಪಾಯಿಗೆ ನಿಗದಿಯಾಗಿದೆ. ಹಾಗೂ 24 ಕ್ಯಾರೆಟ್​ 10 ಗ್ರಾಂ ಚಿನ್ನ ನಿನ್ನೆ 45,500 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 45,820 ರೂಪಾಯಿ ಆಗಿದೆ. ಬೆಳ್ಳಿ ದರ ಕೂಡಾ ಏರಿಕೆಯತ್ತ ಸಾಗಿದ್ದು, ಇಂದಿನ ದರ 1 ಕೆ.ಜಿಗೆ 66,500 ರೂಪಾಯಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ನಿನ್ನೆ ದರಕ್ಕಿಂತ 700 ರೂಪಾಯಿ ಏರಿಕೆ ಕಂಡಿದೆ.

ಚಿನ್ನ ದರ ಯಾವಾಗ ಇಳಿಕೆಯತ್ತ ಸಾಗುತ್ತದೆಯೋ? ಎಂಬುದನ್ನೇ ಕಾಯುತ್ತಿರುತ್ತಾರೆ ಗ್ರಾಹಕರು. ಇಂದು ಇಳಿಕೆಯತ್ತ ಸಾಗಿದ್ದ ದರ ಗಮನಿಸಿ, ನಾಳೆ ಇನ್ನೂ ದರ ಇಳಿಯ ಬಹುದು ಎಂಬುದರತ್ತ ಮನಸ್ಸು ವಾಲುವುದು ಸಹಜ. ಆದರೆ. ದರ ಏರಲೂ ಬಹುದೆಂಬ ಊಹೆಯಿರಲಿ. ಜೊತೆಗೆ ಗಮನವೂ ಇರಲಿ.

22 ಕ್ಯಾರೆಟ್​ ಚಿನ್ನ ದರ: 1 ಗ್ರಾಂ ಚಿನ್ನ ದರ ನಿನ್ನೆ 4,171 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ 4,200 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,368 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 33,600 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 232 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 41,710 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 42,000 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,17,100 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 4,20,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,900 ರೂಪಾಯಿಯಷ್ಟು ಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ ಮಾಹಿತಿ: 1 ಗ್ರಾಂ ಚಿನ್ನ ದರ ನಿನ್ನೆ 4,550 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ 4,582 ರೂಪಾಯಿ ನಿಗದಿಯಾಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,400 ರೂಪಾಯಿಗೆ ಮಾರಾಟವಾಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ 256 ರೂಪಾಯಿಯಷ್ಟು ಏರಿಕೆ ಕಂಡಿದೆ. ಇಂದಿನ ದರ 36,656 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,500 ರೂಪಾಯಿ ಇದ್ದು, ಇಂದಿನ ದರ 45,820 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 320 ರೂಪಾಯಿಯಷ್ಟು ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,55,000 ರೂಪಾಯಿ ಇದ್ದು, ಇಂದಿನ ದರ 4,58,200 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,200 ರೂಪಾಯಿಯಷ್ಟು ಏರಿಕೆ ಕಂಡಿದೆ.

ಬೆಳ್ಳಿ ದರ: 1ಗ್ರಾಂ ಬೆಳ್ಳಿ ದರ ನಿನ್ನೆ 65.80 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 66.50 ರೂಪಾಯಿಯಾಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 526.40 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 532 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 5 ರೂಪಾಯಿಯಷ್ಟು ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 658 ರೂಪಾಯಿ ಇದ್ದು, ಇಂದಿನ ದರ 665 ರೂಪಾಯಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 7 ರೂಪಾಯಿಯಷ್ಟು ಏರಿಕೆ ಕಂಡಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,580 ರೂಪಾಯಿ ಇದ್ದು, ಇಂದಿನ ದರ 6,650 ರೂಪಾಯಿಯಾಗಿದೆ. ದರ ಬದಲಾವಣೆಯಲ್ಲಿ 70 ರೂಪಾಯಿಯಷ್ಟು ಏರಿಕೆ ಕಂಡಿದೆ. 1ಕೆ.ಜಿ ಬೆಳ್ಳಿ ದರ ನಿನ್ನೆ 65,800 ರೂಪಾಯಿ ಇದ್ದು, ಇಂದಿನ ದರ 66,500 ರೂಪಾಯಿಗೆ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 700 ರೂಪಾಯಿಯಷ್ಟು ಏರಿಕೆಯತ್ತ ಸಾಗಿದೆ.

ಇದನ್ನೂ ಓದಿ: Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?

ಇದನ್ನೂ ಓದಿ: Gold Silver Price: ಚಿನ್ನ ಕೊಳ್ಳಲು ಉತ್ತಮ ಸಮಯ.. ಇಂದು ಎಷ್ಟಿದೆ ಗೊತ್ತಾ ಚಿನ್ನ ದರ?

Published On - 8:20 am, Tue, 9 March 21