ಮಹಿಳಾ ಕಾನ್ಸ್‌ಟೇಬಲ್‌ಗೆ ಕಾಟ ಕೊಟ್ಟ ಖದೀಮ ಅರೆಸ್ಟ್.. ಖೇಲ್ ಖತಂ ನಾಟಕ್ ಬಂದ್!
ಮಹಿಳಾ ಕಾನ್ಸ್‌ಟೇಬಲ್‌ಗೆ ತೊಂದರೆ ಕೊಡುತ್ತಿದ್ದ ಸ್ನೇಹಿತನನ್ನು ಬಂಧಿಸಲಾಗಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗೆ ಕಾಟ ಕೊಡುತ್ತಿದ್ದ ಕಿಡಿಗೇಡಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದ ಸತೀಶ್ ಇಂತಹ ಕೃತ್ಯ ಮಾಡಿರುವುದಾಗಿ ತಿಳಿದು ಬಂದಿದೆ.
ಕಾನ್ಸ್‌ಟೇಬಲ್ ಮತ್ತು ಸತೀಶ್ ಸಹಪಾಠಿಯಾಗಿದ್ದರು. ಮೊದಲಿನಿಂದಲೂ ಸ್ನೇಹಿತರು. ಸತೀಶ್ ಕಾನ್ಸ್‌ಟೇಬಲ್‌ಗೆ ಪದೇ ಪದೇ ಕರೆಮಾಡಿ ಕಿರಿ ಕಿರಿ ಮಾಡುತ್ತಿದ್ದ. ಇದನ್ನು ಸಹಿಸದ ಕಾನ್ಸ್‌ಟೇಬಲ್, ತಮ್ಮ ಸ್ನೇಹಿತರ ಗ್ರೂಪಿನಿಂದ ಸತೀಶನನ್ನು ತೆಗೆದು ಹಾಕಿದ್ದರು.
ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಸತೀಶ್, ಕಡೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳಾ ಕಾನ್ಸ್‌ಟೇಬಲ್ ಫೋನ್ ನಂಬರ್ಅನ್ನು ದೊಡ್ಡದಾಗಿ ಬರೆದಿದ್ದ. ಇದರ ಬಳಿಕ ಮಹಿಳಾ ಕಾನ್ಸ್‌ಟೇಬಲ್‌ಗೆ ಅಶ್ಲೀಲ ಕರೆಗಳು ಬರಲಾರಂಭಿಸಿದವು. ಈ ಕುರಿತು ತನಿಖೆ ಆರಂಭಿಸಿದಾಗ ಸತೀಶ್ ಸಿಕ್ಕಿ ಬಿದ್ದಿದ್ದಾನೆ.
ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಶೌಚಾಲಯದಲ್ಲಿ ನಂಬರ್ ಬರೆದಿರುವುದು ಸತೀಶ್ ಎಂಬುದು ಬೆಳಕಿಗೆ ಬಂದಿದೆ.
ಯುವತಿ ಮೇಲೆ ಹಲ್ಲೆ ನಡೆಸಿ, ರಾತ್ರೋ ರಾತ್ರಿ ಮನೆ ಧ್ವಂಸಗೊಳಿಸಿದ ಕಿಡಿಗೇಡಿಗಳು