AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೊಬ್ಬ ಕುಟುಂಬಸ್ಥ ದಯವಿಟ್ಟು ದೂರು ನೀಡಬೇಡಿ… ಅಂತ ಅವನು ಗೋಗರೆದ: ವಿಮಾನದಲ್ಲಿ ಮೂತ್ರ ವಿಸರ್ಜನೆಯ ಶಾಕ್​ಗೊಳಗಾದ ಮಹಿಳೆ

ನವೆಂಬರ್ 26 ರಂದು ವಿಮಾನದಲ್ಲಿ ಪಾನಮತ್ತನಾಗಿದ್ದ ಮಿಶ್ರಾ ತನ್ನ ಪ್ಯಾಂಟಿನ ಜಿಪ್ ಎಳೆದು ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿ ಅವರೆದುರು ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸುತ್ತಾ ನಿಂತುಬಿಟ್ಟಿದ್ದ. ಬೇರೊಬ್ಬ ಪ್ರಯಾಣಿಕ ಹೋಗಿ ನಿನ್ನ ಸ್ಥಳದಲ್ಲಿ ಕೂತ್ಕೋ ಅಂತ ಗದರುವವರೆಗೆ ಅವನು ಅದೇ ಸ್ಥಿತಿಯಲ್ಲಿ ನಿಂತಿದ್ದ.

ನಾನೊಬ್ಬ ಕುಟುಂಬಸ್ಥ ದಯವಿಟ್ಟು ದೂರು ನೀಡಬೇಡಿ... ಅಂತ ಅವನು ಗೋಗರೆದ: ವಿಮಾನದಲ್ಲಿ ಮೂತ್ರ ವಿಸರ್ಜನೆಯ ಶಾಕ್​ಗೊಳಗಾದ ಮಹಿಳೆ
ಏರ್ ಇಂಡಿಯ ವಿಮಾನ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jan 06, 2023 | 4:31 PM

Share

ನವದೆಹಲಿ: ಕಳೆದ ವರ್ಷ ಏರ್ ಇಂಡಿಯ (Air India) ವಿಮಾನವೊಂದರಲ್ಲಿ ಕಂಠಮಟ್ಟ ಕುಡಿದಿದ್ದ ಪ್ರಯಾಣಿಕನೊಬ್ಬ ಬಿಸಿನೆಸ್ ಕ್ಲಾಸ್ನಲ್ಲಿ ಆಸೀನಳಾಗಿದ್ದ ಮಹಿಳ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಳಿಕ ವಿಮಾನದ ಸಿಬ್ಬಂದಿಯು (flight faculty) ಆ ಪ್ರಯಾಣಿಕನ್ನು ಮಹಿಳೆಯ ಬಳಿ ಕರೆತಂದು ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದರೆಂಬ ಸಂಗತಿ ಬೆಳಕಿಗೆ ಬಂದಿದೆ. ಅವನನ್ನು ತನ್ನಲ್ಲಿಗೆ ಕರೆತಂದಾಗ ಅಳಲಾರಂಭಿಸಿದನ್ನು ಕಂಡು ತಾನು ದಿಗ್ಭ್ರಮೆಗೊಳಗಾದೆ ಎಂದು ಮಹಿಳೆ ಹೇಳಿದ್ದಾರೆ. ನವೆಂಬರ್ 27 ರಂದು ಅಂದರೆ ನ್ಯೂ ಯಾರ್ಕ್ ನಿಂದ-ದೆಹಲಿಗೆ ಪ್ರಯಾಣಿಸಿದ ಮರುದಿನ ಮಹಿಳೆ ಏರ್-ಇಂಡಿಯ ಗ್ರೂಪ್ ಚೇರ್ಮನ್ ಎನ್ ಚಂದ್ರಶೇಖರನ್ (N Chandrasekharan) ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಆದರೆ, ಏರ್ ಇಂಡಿಯ ಜೂನ್ 4 ರಂದು ಮುಂಬೈನ ಉದ್ಯಮಿ ಎಂದು ಗುರುತಿಸಲಾಗಿರುವ ಶಂಕರ್ ಮಿಶ್ರಾ ವಿರುದ್ಧ ದೂರು ದಾಖಲಿಸಿರುವುದನ್ನು ಎಫ್ ಐ ಅರ್ ಬಯಲುಗೊಳಿಸುತ್ತದೆ.

ಬಂಧನ ಬೇಡವೆಂದರು

ಅವನನ್ನು ಬಂಧಿಸಬೇಕೆಂಬ ತನ್ನ ಆಗ್ರಹವನ್ನು ಮಹಿಳೆ ವಾಪಸ್ಸು ಪಡೆದಿದ್ದರಿಂದ ಏರ್ ಇಂಡಿಯ ಪೊಲೀಸ್ ಗೆ ದೂರು ಸಲ್ಲಿಸಲಿಲ್ಲ ಎಂದು ಹೇಳಲಾಗಿದೆ. ನಾಪತ್ತೆಯಾಗಿರುವ ಶಂಕರ್ ನನ್ನು ಪೊಲೀಸರು ಹುಡುಕುತ್ತಿದ್ದಾರೆ.

ಇದನ್ನೂ ಓದಿ:  Good News: ಹೊಸಬರಿಗೆ ಉದ್ಯೋಗಾವಕಾಶ ಭಾರತದಲ್ಲೇ ಹೆಚ್ಚು; ವಿದೇಶಗಳನ್ನು ಹಿಂದಿಕ್ಕಿದ ಭಾರತೀಯ ಕಂಪನಿಗಳು

ನವೆಂಬರ್ 26 ರಂದು ವಿಮಾನದಲ್ಲಿ ಪಾನಮತ್ತನಾಗಿದ್ದ ಮಿಶ್ರಾ ತನ್ನ ಪ್ಯಾಂಟಿನ ಜಿಪ್ ಎಳೆದು ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿ ಅವರೆದುರು ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸುತ್ತಾ ನಿಂತುಬಿಟ್ಟಿದ್ದ. ಬೇರೊಬ್ಬ ಪ್ರಯಾಣಿಕ ಹೋಗಿ ನಿನ್ನ ಸ್ಥಳದಲ್ಲಿ ಕೂತ್ಕೋ ಅಂತ ಗದರುವವರೆಗೆ ಅವನು ಅದೇ ಸ್ಥಿತಿಯಲ್ಲಿ ನಿಂತಿದ್ದ. ತನ್ನ ಭಯಾನಕ ಅನುಭವವನ್ನು ಮಹಿಳೆ ಪತ್ರವೊಂದರ ಮೂಲಕ ಏರ್ ಇಂಡಿಯಾದ ಗಮನಕ್ಕೆ ತಂದಿದ್ದರು. ಅ ಪತ್ರ ಎಫ್ ಐ ಅರ್ ನ ಭಾಗವಾಗಿದೆ.

 ನಿಷ್ಪ್ರಯೋಜಕ ಸಿಬ್ಬಂದಿ

ತನ್ನ ಸೀಟು, ಬ್ಯಾಗ್ ಮತ್ತು ಬಟ್ಟೆಗಳು ಮೂತ್ರಮಯವಾಗಿವೆ ಎಂದು ಮಹಿಳೆ ಸಿಬ್ಬಂದಿಗೆ ಹೇಳಿದಾಗ ಅವರು ಅವುಗಳನ್ನು ಮುಟ್ಟಲು ನಿರಾಕರಿಸಿದರು ಎಂದು ಮಹಿಳೆ ಹೇಳಿದ್ದಾರೆ. ಕ್ರಿಮಿನಾಶಕ ಸ್ಪ್ರೇವೊಂದನ್ನು ಬಟ್ಟೆಗಳ ಮೇಲೆ ಸಿಂಪಡಿಸಿ ತೊಡಲು ಒಂದು ಜೊತೆ ಪೈಜಾಮಾ ಮತ್ತು ಸಾಕ್ಸ್ ನೀಡಿದರೆಂದು ಮಹಿಳೆ ಹೇಳಿದ್ದಾರೆ. ಅವರು ಬೇರೆ ಸೀಟು ನೀಡುವಂತೆ ಕೇಳಿದಾಗ ಸಿಬ್ಬಂದಿ ಯಾವುದೂ ಖಾಲಿಯಿಲ್ಲ ಎಂದರಂತೆ, ಆದರೆ ಸಹ ಪ್ರಯಾಯಣಿಕರೊಬ್ಬರು ಸೀಟು ಖಾಲಿಯಿದೆ ಎಂದು ಹೇಳಿದರು ಅಂತ ಮಹಿಳೆ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಥಮ ದರ್ಜೆಯ ಸೀಟು ಕೊಡಬಾರದೆಂದು ಪೈಲಟ್ ಹೇಳಿದ್ದಾನೆ ಅಂತ ಫ್ಲೈಟ್ ಸಿಬ್ಬಂದಿ ತನಗೆ ತಿಳಿಸಿದರೆಂದು ಅವರು ಹೇಳಿದ್ದಾರೆ. ವಿಮಾನ ಲ್ಯಾಂಡ್ ಅಗುತ್ತಿದ್ದಂತೆಯೇ ಶಂಕರ ಮಿಶ್ರಾನನ್ನು ಬಂಧಿಸಬೇಕೆಂದು ಅವರು ಹೇಳಿದಾಗ ಅವನು ಕ್ಷಮಾಪಣೆ ಕೇಳ ಬಯಸಿದ್ದಾನೆ ಅಂತ ನನ್ನಲ್ಲಿಗೆ ಕರೆತಂದರು ಎಂದು ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: ದಂತಶಕ್ತಿ; 15,730 ಕಿ.ಗ್ರಾಂ ಟ್ರಕ್​ ಅನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್​ ವಿಶ್ವ ದಾಖಲೆ ಮಾಡಿದ ಈಜಿಪ್ತಿನ ಸಾಹಸಿಯ ವಿಡಿಯೋ ವೈರಲ್ 

ಪತ್ರದ ಸಾರಾಂಶ 

‘ನನಗೆ ಅವನೊಂದಿಗೆ ಮಾತಾಡುವುದಾಗಲೀ ಅಥವಾ ಅವನ ಮುಖ ನೋಡುವುದಾಗಲೀ ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ ಮತ್ತು ವಿಮಾನ ಲ್ಯಾಂಡ್ ಆದ ಕೂಡಲೇ ಅವನನ್ನು ಬಂಧಿಸುವುದು ನನಗೆ ಬೇಕಾಗಿತ್ತು. ಆದರೆ, ಸಿಬ್ಬಂದಿ ನನ್ನ ಇಚ್ಛೆಗೆ ವಿರುದ್ಧವಾಗಿ ಅಪರಾಧಿಯನ್ನು ನನ್ನ ಮುಂದೆ ಕರೆತಂದು ಕೂರಿಸಿದರು. ಸಿಬ್ಬಂದಿಯ ಆಸನಗಳಲ್ಲಿ ಒಬ್ಬರಿಗೊಬ್ಬರು ಎದುರುಬದುರು ನಾವು ಕೂತಿದ್ದೆವು. ಅವರು ಅಳಲು ಪ್ರಾರಂಭಿಸಿ ನನ್ನಲ್ಲಿ ಕ್ಷಮೆಯಾಚಿಸಲು ಪ್ರಾರಂಭಿಸಿದಾಗ ನಾನು ದಿಗ್ಭ್ರಮೆಗೊಳಗಾದೆ. ತಾನೊಬ್ಬ ಕುಟುಂಬಸ್ಥ ಮತ್ತು ಈ ಘಟನೆಯಿಂದ ತನ್ನ ಹೆಂಡತಿ ಮತ್ತು ಮಗುವಿಗೆ ತೊಂದರೆಯಾಗಬಾರದು ಅಂತ ಗೋಗರೆಯುತ್ತಾ ದೂರು ನೀಡಬೇಡಿ ಎಂದ. ವಿಮಾನದಲ್ಲಿ ನಡೆದ ಭಯಾನಕ ಘಟನೆಯಿಂದ ಆದಾಗಲೇ ಆಘಾತಕ್ಕೊಳಗಾದ ಸ್ಥಿತಿಯಲ್ಲಿದ್ದ ನನಗೆ ಅವನನ್ನು ನನ್ನ ಮುಂದೆ ತಂದು ನಿಲ್ಲಿಸಿದ್ದು ಇನ್ನಷ್ಟು ಹೇವರಿಕೆ ಹುಟ್ಟಿಸಿತ್ತು. ಅವನ ಕೃತ್ಯಗಳನ್ನು ಕ್ಷಮಿಸಲಾಗದು ಅಂತ ಹೇಳಿದೆ. ಆದರೆ ಅವನ ಅಳುಮುಖ, ದೈನೇಸಿಯಂತೆ ನಿಂತಿದ್ದ ಭಂಗಿ ಮತ್ತು ನಾನಿದ್ದ ಆಘಾತಕಾರಿ ಸ್ಥಿತಿ, ಅವನ ಬಂಧನಕ್ಕೆ ಆಗ್ರಹಿಸುವುದನ್ನು ತಡೆದವು,’ ಎಂದು ಮಹಿಳೆ ಪತ್ರದಲ್ಲಿ ಬರೆದಿದ್ದಾರೆ.

ಸಿಇಒ ಪ್ರತಿಕ್ರಿಯೆ 

ಏರ್ ಇಂಡಿಯ ಸಿಬ್ಬಂದಿಯಲ್ಲಿ ವೃತ್ತಿಪರತೆಯ ಕೊರತೆ ನಿಚ್ಚಳವಾಗಿ ಕಂಡಿತು, ಅವರು ಒಬ್ಬ ಮಹಿಳಾ ಪ್ರಯಾಣಿಕಳ ಗೌರವ ಮತ್ತು ಭದ್ರತೆ ಕಾಯುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಪ್ರಯಾಣಿಕರಿಗೆ ಎಷ್ಟು ಪ್ರಮಾಣದ ಅಲ್ಕೊಹಾಲ್ ನೀಡಬೇಕೆಂದು ಸಹ ಅವರಿಗೆ ಗೊತ್ತಿಲ್ಲ, ಸೂಕ್ಷ್ಮ ಮತ್ತು ಸಂದಿಗ್ಧ ಸ್ಥಿತಿ ಹ್ಯಾಂಡಲ್ ಮಾಡುವುದು ಅವರಿಗೆ ಗೊತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಈ ಪ್ರಕರಣ ಈಗ ಇತ್ಯರ್ಥಗೊಂಡಿದ್ದರೂ ವಿಮಾನದಲ್ಲಿ ಏನು ನಡೆಯಿತು ಅನ್ನೋದನ್ನು ಕೂಡಲೇ ವರದಿ ಮಾಡುವಂತೆ ಏರ್ ಇಂಡಿಯಾ ಸಿ ಈ ಓ ಕ್ಯಾಂಬೆಲ್ ವಿಲ್ಸನ್ ತಮ್ಮ ಸಿಬ್ಬಂದಿಗೆ ಬರೆದಿದ್ದಾರೆ. ಮಹಿಳೆ ಅನುಭವಿಸಿದ ಯಾತನೆ ಮತ್ತು ಮಾನಸಿಕ ನೋವು ನಮಗೆ ಅರ್ಥವಾಗುತ್ತದೆ ಮತ್ತು ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಎಂದು ವಿಲ್ಸನ್ ಹೇಳಿದ್ದಾರೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ