ಮನಸಿಗೆ ಮುದ.. ಮೈ ತುಂಬಿ ತುಳುಕುತಿದಾಳೆ ಸಂತೆಬೆನ್ನೂರಿನ ಐತಿಹಾಸಿಕ ಕಲ್ಯಾಣಿ!

| Updated By: ಸಾಧು ಶ್ರೀನಾಥ್​

Updated on: Sep 10, 2020 | 10:02 AM

ದಾವಣಗೆರೆ: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಈ ನಡುವೆ ಸಂತೇಬೆನ್ನೂರಿನಲ್ಲಿರುವ ಐತಿಹಾಸಿಕ ಪುಷ್ಕರಣಿಗೆ ಹೊಸ ಆಕರ್ಷಣೆ ಸಿಕ್ಕಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿರುವ ಐತಿಹಾಸಿಕ ಪುಷ್ಕರಣಿ ಮೈತುಂಬಿ ಹರಿಯುತ್ತಿದೆ. ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಪುಷ್ಕರಣಿ ಮಂಟಪದವರೆಗೆ ನೀರು ತುಂಬಿದೆ. ಹೀಗಾಗಿ ನಿರಂತರವಾಗಿ ನಾಲ್ಕು ಕಡೆಯಿಂದ ಪುಷ್ಕರಣಿಗೆ ನೀರು ಹರಿದು ಬರುತ್ತಿದೆ. ಇದು ನೋಡುಗರನ್ನು ಕೈ ಬೀಸಿ ಕರೆದಂತಿದೆ. ಈ ಸುಂದರ ರಮಣೀಯ ದೃಶ್ಯವನ್ನು ಕಂಡು ಜನ, ಸ್ಥಳೀಯರಿಗೆ ಸಂತಸವಾಗಿದೆ. ಭೂಮಿಯಿಂದ ಪುಷ್ಕರಣಿಗೆ ಹರಿದು ಬರುವ […]

ಮನಸಿಗೆ ಮುದ.. ಮೈ ತುಂಬಿ ತುಳುಕುತಿದಾಳೆ ಸಂತೆಬೆನ್ನೂರಿನ ಐತಿಹಾಸಿಕ ಕಲ್ಯಾಣಿ!
Follow us on

ದಾವಣಗೆರೆ: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಈ ನಡುವೆ ಸಂತೇಬೆನ್ನೂರಿನಲ್ಲಿರುವ ಐತಿಹಾಸಿಕ ಪುಷ್ಕರಣಿಗೆ ಹೊಸ ಆಕರ್ಷಣೆ ಸಿಕ್ಕಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿರುವ ಐತಿಹಾಸಿಕ ಪುಷ್ಕರಣಿ ಮೈತುಂಬಿ ಹರಿಯುತ್ತಿದೆ.

ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಪುಷ್ಕರಣಿ ಮಂಟಪದವರೆಗೆ ನೀರು ತುಂಬಿದೆ. ಹೀಗಾಗಿ ನಿರಂತರವಾಗಿ ನಾಲ್ಕು ಕಡೆಯಿಂದ ಪುಷ್ಕರಣಿಗೆ ನೀರು ಹರಿದು ಬರುತ್ತಿದೆ. ಇದು ನೋಡುಗರನ್ನು ಕೈ ಬೀಸಿ ಕರೆದಂತಿದೆ. ಈ ಸುಂದರ ರಮಣೀಯ ದೃಶ್ಯವನ್ನು ಕಂಡು ಜನ, ಸ್ಥಳೀಯರಿಗೆ ಸಂತಸವಾಗಿದೆ.

ಭೂಮಿಯಿಂದ ಪುಷ್ಕರಣಿಗೆ ಹರಿದು ಬರುವ ನೀರು ಧುಮ್ಮಿಕ್ಕುತ್ತಿರುವುದನ್ನ ನೋಡಿದರೆ ಪ್ರಕೃತಿಯ ಸೊಬಗು ಮನಸ್ಸನ್ನು ಮುದಗೊಳಿಸುತ್ತದೆ. ಮಳೆ ಬಂದು ಕಲ್ಯಾಣಿ ತುಂಬಿದಾಗ ಮಾತ್ರ ಇಂತಹ ದೃಶ್ಯಗಳನ್ನು ನೋಡಲು ಸಾಧ್ಯವಾಗುತ್ತೆ.


Published On - 10:01 am, Thu, 10 September 20