ಅತಿ ದೊಡ್ಡ ಅಕ್ರಮ ಅಕ್ಕಿ ಅಡ್ಡೆ ಮೇಲೆ ಖಾಕಿ ದಾಳಿ, ಸಾವಿರಾರು ಕ್ವಿಂಟಾಲ್ ಅಕ್ಕಿ ಸೀಜ್
ಹುಬ್ಬಳ್ಳಿ: ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಬೆಳಗಾವಿ ಜಿಲ್ಲಾ ಪೊಲೀಸರು ದಾಳಿ ನಡೆಸಿ ಗೋಡೌನ್ ಸೀಜ್ ಮಾಡಿದ್ದಾರೆ. ಮಂಜುನಾಥ ಹರ್ಲಾಪುರ ಎಂಬುವರಿಗೆ ಸೇರಿದ ಹುಬ್ಬಳ್ಳಿಯ ಕಸಬಾಪೇಟೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗೋದಾಮು ಇದಾಗಿದೆ. ಜೊತೆಗೆ ಉತ್ತರ ಕರ್ನಾಟಕದ ಅತಿ ದೊಡ್ಡ ಅಕ್ರಮ ಅಕ್ಕಿ ಅಡ್ಡೆ ಕೂಡ ಇದು. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಂದ ಅಕ್ರಮ ಪಡಿತರ ಸಂಗ್ರಹಿಸಲಾಗುತ್ತಿತ್ತು. ಅದನ್ನೇ ಪಾಲೀಶ್ ಮಾಡಿ ಮುಂಬೈಗೆ ರವಾನಿಸಲಾಗುತ್ತಿತ್ತು. ಬೆಳಗಾವಿಯ ಇಟಗಿ ಸಮೀಪ ಒಂದು ಟ್ರಕ್ ಸೀಜ್ ಆದ […]

ಹುಬ್ಬಳ್ಳಿ: ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಬೆಳಗಾವಿ ಜಿಲ್ಲಾ ಪೊಲೀಸರು ದಾಳಿ ನಡೆಸಿ ಗೋಡೌನ್ ಸೀಜ್ ಮಾಡಿದ್ದಾರೆ. ಮಂಜುನಾಥ ಹರ್ಲಾಪುರ ಎಂಬುವರಿಗೆ ಸೇರಿದ ಹುಬ್ಬಳ್ಳಿಯ ಕಸಬಾಪೇಟೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗೋದಾಮು ಇದಾಗಿದೆ. ಜೊತೆಗೆ ಉತ್ತರ ಕರ್ನಾಟಕದ ಅತಿ ದೊಡ್ಡ ಅಕ್ರಮ ಅಕ್ಕಿ ಅಡ್ಡೆ ಕೂಡ ಇದು.
ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಂದ ಅಕ್ರಮ ಪಡಿತರ ಸಂಗ್ರಹಿಸಲಾಗುತ್ತಿತ್ತು. ಅದನ್ನೇ ಪಾಲೀಶ್ ಮಾಡಿ ಮುಂಬೈಗೆ ರವಾನಿಸಲಾಗುತ್ತಿತ್ತು. ಬೆಳಗಾವಿಯ ಇಟಗಿ ಸಮೀಪ ಒಂದು ಟ್ರಕ್ ಸೀಜ್ ಆದ ಹಿನ್ನೆಲೆಯಲ್ಲಿ ಅಲ್ಲಿಂದ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯ ಅಡ್ಡೆಯ ಮೇಲೆ ದಾಳಿ ನಡೆಸಲಾಗಿತ್ತು.
ಇಷ್ಟೊಂದು ದೊಡ್ಡ ಮಟ್ಟದ ಅಡ್ಡೆಯಿದ್ರು ಹುಬ್ಬಳ್ಳಿಯ ಪೊಲೀಸರಿಗೆ ಮಾಹಿತಿಯೇ ಇರಲಿಲ್ವಾ? ಅಥವಾ ಮಾಹಿತಿ ಇದ್ರು ಅಡ್ಜಸ್ಟ್ ಮಾಡಿಕೊಂಡು ಸುಮ್ಮನಿದ್ರಾ? ಅಂತ ಹುಬ್ಬಳ್ಳಿಯ ಖಾಕಿಯ ಮೇಲೆ ಅನುಮಾನ ಶುರುವಾಗಿದೆ. ಬೆಳಗಾವಿ ಪೊಲೀಸರು ಸಾವಿರಾರು ಕ್ವಿಂಟಾಲ್ ಅಕ್ಕಿಯನ್ನು ಸೀಜ್ ಮಾಡಿದ್ದಾರೆ. ಇದೇ ಅಕ್ಕಿ ಅಡ್ಡೆ ಮೇಲೆ ಹಲವಾರು ಭಾರಿ ದಾಳಿಯಾಗಿದೆ. ದಾಳಿಯಾದ್ರು ಪ್ರಭಾವಿಗಳ ರಕ್ಷಣೆ ಪಡೆದು ಮತ್ತೆ ಬಡವರ ಅನ್ನಕ್ಕೆ ಈ ಖದೀಮರು ಕನ್ನ ಹಾಕುತ್ತಿದ್ರು.
Published On - 8:46 am, Thu, 10 September 20