3,000 ಕಂಟೈನ್‌ಮೆಂಟ್ ಜೋನ್‌ಗೆ ಆಹಾರ ಪೂರೈಕೆ ವೈಫಲ್ಯ, BBMPಗೆ ಹೈಕೋರ್ಟ್ ಚಾಟಿ
ಬೆಂಗಳೂರು: ಕೊರೊನಾ ಸೋಂಕು ನಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿಗೆ ಕರ್ನಾಟಕ ಹೈಕೋರ್ಟ್ ಚಾಟಿ ಏಟು ಬೀಸಿದೆ. ಬೆಂಗಳೂರಿನ ಕಂಟೈನ್‌ಮೆಂಟ್ ಜೋನ್‌ಗಳನ್ನ ಸರಿಯಾಗಿ ನಿಭಾಯಿಸಲು ವಿಫಲವಾಗಿರೋದಕ್ಕೆ ಗರಮ್ ಆಗಿರುವ ಹೈಕೋರ್ಟ್ ಕೂಡಲೇ ಸರಿಯಾದ ಕ್ರಮ ಕೈಗೊಳ್ಳಿ ಎಂದು ಎಚ್ಚರಿಸಿದೆ. ಬೆೆಂಗಳೂರಿನ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಆಹಾರ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಬಿಬಿಎಂಪಿ ವಕೀಲರು, ಈ ಜೋನ್‌ಗಳಲ್ಲಿ ಆಹಾರ ಪೂರೈಕೆ ಸಾಧ್ಯವಾಗಿಲ್ಲ, ಆದ್ರೆ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪಡಿತರ ಅಂಗಡಿಗಳಿವೆ. ಜನರು ಅಲ್ಲಿಂದ ಆಹಾರ ಧಾನ್ಯ ಪಡೆಯಲು ನಿರ್ಬಂಧ […]
ಬೆಂಗಳೂರು: ಕೊರೊನಾ ಸೋಂಕು ನಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿಗೆ ಕರ್ನಾಟಕ ಹೈಕೋರ್ಟ್ ಚಾಟಿ ಏಟು ಬೀಸಿದೆ. ಬೆಂಗಳೂರಿನ ಕಂಟೈನ್‌ಮೆಂಟ್ ಜೋನ್‌ಗಳನ್ನ ಸರಿಯಾಗಿ ನಿಭಾಯಿಸಲು ವಿಫಲವಾಗಿರೋದಕ್ಕೆ ಗರಮ್ ಆಗಿರುವ ಹೈಕೋರ್ಟ್ ಕೂಡಲೇ ಸರಿಯಾದ ಕ್ರಮ ಕೈಗೊಳ್ಳಿ ಎಂದು ಎಚ್ಚರಿಸಿದೆ.
ಬೆೆಂಗಳೂರಿನ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಆಹಾರ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಬಿಬಿಎಂಪಿ ವಕೀಲರು, ಈ ಜೋನ್‌ಗಳಲ್ಲಿ ಆಹಾರ ಪೂರೈಕೆ ಸಾಧ್ಯವಾಗಿಲ್ಲ, ಆದ್ರೆ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪಡಿತರ ಅಂಗಡಿಗಳಿವೆ. ಜನರು ಅಲ್ಲಿಂದ ಆಹಾರ ಧಾನ್ಯ ಪಡೆಯಲು ನಿರ್ಬಂಧ ಇಲ್ಲವೆಂದು ಹೇಳಿದರು.
ಬಿಬಿಎಂಪಿ ವಕೀಲರ ಈ ಹೇಳಿಕೆಯಿಂದ ಗರಂ ಆದ ಹೈಕೋರ್ಟ್, ಬಿಬಿಎಂಪಿ ಕಂಟೈನ್‌ಮೆಂಟ್ ಜೋನ್ ಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹೀಗಾಗಿಯೇ ಜನ ಕಂಟೈನ್‌ಮೆಂಟ್ ಜೋನ್ ನಿಯಮ ಪಾಲಿಸುತ್ತಿಲ್ಲ. ಹೀಗೆಯೇ ಮುಂದುವರಿದ್ರೆ ಇದರಿಂದ ಕೋವಿಡ್-19 ಸೋಂಕು ಮತ್ತಷ್ಟು ಏರಿಕೆಯಾಗಬಹುದು. ಹೀಗಾಗಿ ತಕ್ಷಣವೆ 3,000 ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಅಗತ್ಯವಿದ್ದವರಿಗೆ ಆಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು.
Published On - 6:29 pm, Thu, 9 July 20