AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಸ ಮಾಡಿದ್ದ ಕಂಪನಿಯಿಂದಲೇ ಮತ್ತೆ ಮೋಸದ ಸಂಚು.. ವಂಚನೆಗೊಳಗಾಗಿದ್ದವರಿಂದಲೇ SPಗೆ ದೂರು

Another Fraud by Same Company | ಈ ಹಿಂದೆ ಹಿಂದೂಸ್ಥಾನ್ ಇನ್ಫ್ರಾಕಾನ್ ಇಂಡಿಯಾ ಕಂಪನಿಯಿಂದ ಲಕ್ಷಾಂತರ ಜನರಿಗೆ ಮೋಸ ಆಗಿತ್ತು. ಈಗ ಅದೇ ಕಂಪನಿಯ ವಂಚಕರಿಂದ ಮತ್ತೆ ಹೊಸ ಕಂಪನಿ ಹೆಸರಿನಲ್ಲಿ ಜನರಿಗೆ ಮೋಸಕ್ಕೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮೋಸ ಮಾಡಿದ್ದ ಕಂಪನಿಯಿಂದಲೇ ಮತ್ತೆ ಮೋಸದ ಸಂಚು.. ವಂಚನೆಗೊಳಗಾಗಿದ್ದವರಿಂದಲೇ SPಗೆ ದೂರು
ಸಂಗ್ರಹ ಚಿತ್ರ
ಆಯೇಷಾ ಬಾನು
|

Updated on: Feb 12, 2021 | 1:45 PM

Share

ಹಾಸನ: ಈ ಹಿಂದೆ ಹಿಂದೂಸ್ಥಾನ್ ಇನ್ಫ್ರಾಕಾನ್ ಇಂಡಿಯಾ ಕಂಪನಿಯಿಂದ ಲಕ್ಷಾಂತರ ಜನರಿಗೆ ಮೋಸ ಆಗಿತ್ತು. ಈಗ ಅದೇ ಕಂಪನಿಯ ವಂಚಕರಿಂದ ಮತ್ತೆ ಹೊಸ ಕಂಪನಿ ಹೆಸರಿನಲ್ಲಿ ಜನರಿಗೆ ಮೋಸಕ್ಕೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಾಸನ ಎಸ್‌ಪಿಗೆ ವಂಚನೆಗೊಳಗಾಗಿದ್ದವರಿಂದ ದೂರು ದಾಖಲಾಗಿದೆ.2010 ರಲ್ಲಿ ಸ್ಥಾಪನೆಯಾದ ಹಿಂದೂಸ್ಥಾನ್ ಇನ್ಫ್ರಾಕಾನ್ ಇಂಡಿಯಾ ಕಂಪನಿ ರಾಜ್ಯದ ಸುಮಾರು 7 ಲಕ್ಷ ಗ್ರಾಹಕರಿಗೆ 700 ಕೋಟಿ ವಂಚನೆ ಮಾಡಿತ್ತು.

ಹಾಸನ ಜಿಲ್ಲೆಯೊಂದರಲ್ಲೇ 50 ಸಾವಿರ ಜನರಿಂದ 30ಕೋಟಿಯಷ್ಟು ಹಣ ವಂಚನೆ ಮಾಡಲಾಗಿತ್ತು ಎಂಬ ಬಗ್ಗೆ ದೂರು ದಾಖಲಾಗಿದೆ. ಈಗ ಅದೇ ಕಂಪನಿ ವಂಚಕರು ಹೊಸ ಕಂಪನಿ ಹೆಸರಿನಲ್ಲಿ ಮತ್ತೆ ವಂಚನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ವಂಚಕ ಲಕ್ಷ್ಮಿ ನಾರಾಯಣ ಮತ್ತು ತಂಡದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಹಾಸನ SP ಮೊರೆ ಹೋಗಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ ಹಾಗೂ ವಂಚನೆಗೊಳಗಾದವರಿಗೆ ಪರಿಹಾರ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಹಿಂದೂಸ್ಥಾನ್ ಇನ್ಫ್ರಾಕಾನ್ ಇಂಡಿಯಾ ಕಂಪನಿ ಹೆಸರಿನಲ್ಲಿ ಮೋಸ ಮಾಡಿದ್ದ ಹಳೆ ತಂಡ ಈಗ LKN ಎಂಬ ಹೊಸ ಹೆಸರಿನಲ್ಲಿ ಹಾಸನಲ್ಲಿ ಸಭೆ ನಡೆಸಿದೆ. ಈ ಹಿಂದೆ ವಂಚನೆ ಮಾಡಿ ಹಣ ಕಬಳಿಸಿದ್ದ ಹಣವನ್ನೇ ಜನರಿಗೆ ನೀಡದೆ ಇದೀಗ ಹೊಸ ಪ್ಲಾನ್​ನೊಂದಿಗೆ ಮತ್ತೆ ಮೋಸ ಮಾಡಲು ಈ ತಂಡ ಸಜ್ಜಾಗಿದೆ. ಹಾಗಾಗಿ ಮತ್ತೊಮ್ಮೆ ಈ ಕಂಪನಿಯಿಂದ ಜನರಿಗೆ ಮೋಸ ಆಗುವ ಮೊದಲು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕಿದೆ.

ಇದನ್ನೂ ಓದಿ: ಅಜ್ಮೀರಾ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣ: 8.41 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ