
ಬೆಂಗಳೂರು: ಡೆಡ್ಲಿ ಕೊರೊನಾದಿಂದ ಬೆಂಗಳೂರಿನಲ್ಲಿ ರಕ್ತಕ್ಕೂ ಬರ ಬಂದಿದೆ. ಬೆಂಗಳೂರಲ್ಲಿ ಕಳೆದ 6 ತಿಂಗಳಿಂದ ರಕ್ತದಾನ ಮಾಡ್ತಿಲ್ವಂತೆ, ನಗರದಲ್ಲಿ ಪ್ರತಿ ತಿಂಗಳು 25 ರಕ್ತದಾನ ಕ್ಯಾಂಪ್ಗಳ ಆಯೋಜನೆ ಆಗ್ತಿತ್ತು. ಆದ್ರೆ ಈ ಬಾರಿ ಕೊರೊನಾ ಕಾರಣದಿಂದ ಒಂದೇ ಒಂದು ಬ್ಲಡ್ ಕ್ಯಾಂಪ್ ಇಲ್ಲ. ಕೊರೊನಾ ಸೋಂಕಿನಿಂದಾಗಿ ರಕ್ತದಾನ ಮಾಡಲು ಜನರಿಗೆ ಭಯ ಉಂಟಾಗಿದೆಯಂತೆ.
ಬೆಂಗಳೂರು ನಗರದಲ್ಲಿ ಸುಮಾರು 36 ಬ್ಲಡ್ ಬ್ಯಾಂಕ್‌ಗಳಿವೆ. 14 ಸ್ವಯಂಸೇವಾ ರಕ್ತ ನಿಧಿ, 12 ಖಾಸಗಿ ರಕ್ತ ನಿಧಿ. 10 ಸರ್ಕಾರಿ ಬ್ಲಡ್ ಬ್ಯಾಂಕ್‌ಗಳಿವೆ. ಸ್ವಯಂಸೇವಾ ರಕ್ತ ನಿಧಿಗಳಲ್ಲಿ ತಿಂಗಳಿಗೆ 3,000 ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಈಗ ಶೇಕಡಾ 10ರಷ್ಟೂ ರಕ್ತ ಸಂಗ್ರಹವಾಗಿಲ್ಲ. ಸರ್ಕಾರಿ ಬ್ಲಡ್ ಬ್ಯಾಂಕ್‌ಗಳಲ್ಲಿ ಶೇ.5ರಷ್ಟೂ ರಕ್ತ ಸಂಗ್ರಹವಾಗಿಲ್ಲ. ಸರ್ಕಾರಿ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಉಂಟಾಗಿದೆ. ಆಸ್ಪತ್ರೆಯ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳಿಂದ ರಕ್ತದಾನ ಮಾಡಿಸಿ ರೋಗಿಗಳಿಗೆ ನೀಡುತ್ತಿದ್ದಾರೆ.
ಐಟಿ ಬಿಟಿ ಕಂಪನಿಗಳಲ್ಲಿ ಸೇವಾ ವೀಕ್ ಅಂತ ಆಚರಣೆ ಮಾಡ್ತಿದ್ರು. ಕಾಲೇಜುಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡ್ತಿದ್ರು. ಆದ್ರೆ ಕೊರೊನಾ ಸೋಂಕಿನಿಂದ ಐಟಿ ಬಿಟಿ ಕಂಪನಿಗಳು ವರ್ಕ್ ಫ್ರಂ ಹೊಂ ಮತ್ತು ಕಾಲೇಜುಗಳು ರಜೆ ಘೋಷಣೆ ಮಾಡಿವೆ. ಇದರಿಂದ ರಕ್ತದ ಕೊರತೆ ಉಂಟಾಗಿದೆ ಬ್ಲಡ್ ಡೋನೆಷನ್ ಕ್ಯಾಂಪ್ಗಳು ಆಯೋಜನೆಯಾಗ್ತಿಲ್ಲ.
Published On - 7:57 am, Sun, 30 August 20