AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು BBMP ಕೊಡುಗೆ! ಮೇ ನಂತರ ಕೋವಿಡ್ ನಿಯಂತ್ರಿಸುವಲ್ಲಿ ಕರ್ನಾಟಕ ವಿಫಲ | BBMP fails to manage Covid-19

ಇಲ್ಲೀವರೆಗೆ ಈ ವಿಚಾರವನ್ನು ಸಾಮಾನ್ಯ ಜನ ಮತ್ತು ಮಾಧ್ಯಮಗಳು ಹೇಳುತ್ತಿದ್ದವು. ಈಗ ಇದನ್ನು ಕೇಂದ್ರ ಸರಕಾರವೇ ಹೇಳಿದೆ. ಈ ವರ್ಷದ ಮೇ ತಿಂಗಳ ನಂತರ ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಲು ಕರ್ನಾಟಕ ವಿಫಲವಾಯಿತು ಎಂದು. ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯ ಪ್ರಾಥಮಿಕ ಅಂಶಗಳು ಹೊರಗೆ ಬರುತ್ತಿದ್ದಂತೆಯೇ, ಇದಕ್ಕೆ ಸಂಬಂಧಿಸಿದ ಹಲವು ಮುಚ್ಚಿಟ್ಟ ವಾಸ್ತವಾಂಶಗಳು ಒಂದೊಂದಾಗಿ ಹೊರಬರುತ್ತಿವೆ. ಏಪ್ರಿಲ್ ವರೆಗೆ ರಾಜ್ಯದಲ್ಲಿ ಚೆನ್ನಾಗಿ ನಡೆದಿದ್ದ ಕೋವಿಡ್ ನಿಯಂತ್ರಣ ಕಾರ್ಯ, ಮೇ ತಿಂಗಳಲ್ಲಿ ಕುಸಿಯಲು ಮೂಲ ಕಾರಣವೇ ಬೃಹತ್ ಬೆಂಗಳೂರು ಮಹಾನಗರ […]

ಇದು BBMP ಕೊಡುಗೆ! ಮೇ ನಂತರ ಕೋವಿಡ್ ನಿಯಂತ್ರಿಸುವಲ್ಲಿ ಕರ್ನಾಟಕ ವಿಫಲ | BBMP fails to manage Covid-19
ಲಾಕ್​ಡೌನ್​ ಇನ್ನೂ ಜಾರಿಯಲ್ಲಿದೆ, ಕೊರೊನಾ ಹಾವಳಿ ಮುಗಿದಿಲ್ಲ: ಬೆಂಗಳೂರಿಗೆ ವಾಪಸಾಗುವವರಿಗೆ BBMP ಎಚ್ಚರಿಕೆಯ ಗಂಟೆ
ಸಾಧು ಶ್ರೀನಾಥ್​
|

Updated on:Oct 30, 2020 | 4:18 PM

Share

ಇಲ್ಲೀವರೆಗೆ ಈ ವಿಚಾರವನ್ನು ಸಾಮಾನ್ಯ ಜನ ಮತ್ತು ಮಾಧ್ಯಮಗಳು ಹೇಳುತ್ತಿದ್ದವು. ಈಗ ಇದನ್ನು ಕೇಂದ್ರ ಸರಕಾರವೇ ಹೇಳಿದೆ. ಈ ವರ್ಷದ ಮೇ ತಿಂಗಳ ನಂತರ ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಲು ಕರ್ನಾಟಕ ವಿಫಲವಾಯಿತು ಎಂದು. ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯ ಪ್ರಾಥಮಿಕ ಅಂಶಗಳು ಹೊರಗೆ ಬರುತ್ತಿದ್ದಂತೆಯೇ, ಇದಕ್ಕೆ ಸಂಬಂಧಿಸಿದ ಹಲವು ಮುಚ್ಚಿಟ್ಟ ವಾಸ್ತವಾಂಶಗಳು ಒಂದೊಂದಾಗಿ ಹೊರಬರುತ್ತಿವೆ.

ಏಪ್ರಿಲ್ ವರೆಗೆ ರಾಜ್ಯದಲ್ಲಿ ಚೆನ್ನಾಗಿ ನಡೆದಿದ್ದ ಕೋವಿಡ್ ನಿಯಂತ್ರಣ ಕಾರ್ಯ, ಮೇ ತಿಂಗಳಲ್ಲಿ ಕುಸಿಯಲು ಮೂಲ ಕಾರಣವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಬುದು ಇದರ ಮುಖ್ಯ ಅಂಶ. ದಿನದಿಂದ ದಿನಕ್ಕೆ ಏರುತ್ತಿದ್ದ ಸೋಂಕಿತರ ಸಂಖ್ಯೆಯನ್ನು ಕಡಿಮೆ ತೋರಿಸುವುದು (under reporting of infected people), ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಗುರುತಿಸಲು ಹಿಂದೇಟು ಹಾಕುವುದು (not showing inclination to trace primary contacts of Covid-19 positives) ಮತ್ತು ಸೋಂಕಿತರನ್ನು ಕುಟುಂಬದ ಸದಸ್ಯರಿಂದ ಬೇರ್ಪಡಿಸಿ ಮನೆಯಿಂದ ಹೊರಗೆ ನಿಗದಿತ ಕ್ಯಾಂಪ್ ಗಳಲ್ಲಿ ಕ್ವಾರಂಟೈನ್ (institutional quarantine) ಮಾಡಿ ಶುಶ್ರೂಷೆ ನೀಡದೇ ಇರುವುದು ಮುಖ್ಯ ಕಾರಣವೆಂಬ ಅಂಶಗಳು ಈಗ ಹೊರಬಿದ್ದಿವೆ.

ಇಲ್ಲೀವರೆಗೆ ಈ ಕುರಿತಾಗಿ ಯಾವುದೇ ಆರೋಪ ಬಂದರೂ ರಾಜ್ಯ ಸರಕಾರ ಮತ್ತು ಬಿ ಬಿ ಎಮ್ ಪಿ ಸಾರಾಸಗಟಾಗಿ ಅಲ್ಲಗಳೆಯುತ್ತಿತ್ತು. ಕೇಂದ್ರದ ಆರೋಗ್ಯ ಇಲಾಖೆ ಆಧಿಕಾರಿಗಳು ಕರ್ನಾಟಕಕ್ಕೆ ಭೇಟಿ ನೀಡಿದ ನಂತರ ಕೇಂದ್ರಕ್ಕೆ ಸಲ್ಲಿಸಿದ ವರದಿಯ ಅಂಶಗಳು ಹೊರಗೆ ಬರುತ್ತಿದ್ದಂತೆಯೇ ಈಗ ಆರೋಗ್ಯ ಇಲಾಖೆಯ ಕೆಲ ಅಧಿಕಾರಿಗಳು ಆಫ್ ದಿ ರೆಕಾರ್ಡ ಆಗಿ ಮಾತನಾಡಲು ಮುಂದೆ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ TV9 ಡಿಜಿಟಲ್, ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಹಲವಾರು ಆಘಾತಕಾರಿ ಅಂಶಗಳು ಹೊರಗೆ ಬಂದವು. ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಪ್ರಕಾರ, ಏಪ್ರಿಲ್ ತನಕ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯ ಸರಕಾರ ಪ್ರಾಯಶಃ ಯಶಸ್ವಿಯಾಗಿತ್ತು. ನಮ್ಮ ಆಶಾ ಕಾರ್ಯಕರ್ತೆಯರಾಗಲೀ, ಸ್ವಯಂ ಸೇವಕರಾಗಲಿ ಕೋವಿಡ್ ಸೋಂಕಿತರನ್ನು ಗುರುತಿಸಿ ನಮ್ಮ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಒಂದು ದಿನಕ್ಕೆ ಮೂರು ಅಥವಾ ನಾಲ್ಕು ಸೋಂಕಿತರನ್ನು ಪರೀಕ್ಷಿಸಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

ಯಾವಾಗ ಮೇ ತಿಂಗಳಲ್ಲಿ ಅಂತರ್ ರಾಜ್ಯ ಗಡಿಯನ್ನು ತೆರೆದು ಬೆಂಗಳೂರಿಗೆ ಪ್ರತಿದಿನ 30-40,000 ಜನ ಬರಲು ಪ್ರಾರಂಭಿಸಿದರೋ ಆಗ ಎಲ್ಲವೂ ಕೈ ಮೀರಿತು. ಪ್ರತಿದಿನ ಹೊಸದಾಗಿ ಮೂರರಿಂದ ನಾಲ್ಕು ಸಾವಿರ ಜನ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದರೆ, ಬಿ ಬಿ ಎಮ್ ಪಿ ಮಾತ್ರ 1700-1800 ಕೇಸನ್ನು ತನ್ನ ವರದಿಯಲ್ಲಿ ತೋರಿಸುತ್ತಿತ್ತು. ಉದಾಹರಣೆಗೆ, ಉಡುಪಿಯಲ್ಲಿ ಅದೇ ವೇಳೆಯಲ್ಲಿ 30000-40000 ಜನ institutional quarantine ಗೆ ಒಳಗಾಗುತ್ತಿದ್ದರು. ನಮ್ಮ ಬೆಂಗಳೂರಿನಲ್ಲಿ ಬರೀ 1800 ಜನ institutional quarantine ಒಳಗಾಗುತ್ತಿದ್ದರು. ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಗುರುತಿಸಲು ಬಿ ಬಿ ಎಮ್ ಪಿ ಸಂಪೂರ್ಣ ವಿಫಲವಾಗಿತ್ತು.

ಒಂದು ಅಂದಾಜಿನ ಪ್ರಕಾರ, ಒಬ್ಬ ಸೋಂಕಿತನಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ಹತ್ತು ಜನರನ್ನು ಗುರುತಿಸಿ ದಿಗ್ಬಂಧನಕ್ಕೆ (quarentine) ಒಳಪಡಿಸಿದ್ದರೆ ಕರ್ನಾಟಕ ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸಿದಂತೆ ಆಗುತ್ತಿತ್ತು. ಆದರೆ, ಆ ಸಂದರ್ಭದಲ್ಲಿ ಬಿ ಬಿ ಎಮ್ ಪಿ ಮಾಡುತ್ತಿದ್ದ contact tracing ಪ್ರಮಾಣ ಬರೀ 0.3 ಪ್ರತಿಶತ ಇತ್ತು. ಮೊದಲು ಸರಕಾರಿ ಆಸ್ಪತ್ರೆಗಳು ತಮ್ಮ ಸೀಮಿತ ಶಕ್ತಿಯೊಂದಿಗೆ ಪ್ರತಿದಿನ ಎಲ್ಲರನ್ನೂ ಚಿಕಿತ್ಸೆಗೆ ಒಳಪಡಿಸುತ್ತಿದ್ದರು.

ಮೇ ನಂತರ ಯಾವಾಗ under-reporting ನಿಂದಾಗಿ ಪರಿಸ್ಥಿತಿ ಕೈ ಮೀರಿದಾಗ ಚಿಕಿತ್ಸಾ ಪ್ರಮಾಣ ಕುಸಿಯಿತು ಮತ್ತು ಕೋವಿಡ್ ಸೋಂಕಿತರ backlog ವಿಪರೀತ ಜಾಸ್ತಿಯಾಯ್ತು, ಎಂದು ಅಧಿಕಾರಿ ವಿವರಿಸಿದರು. ಯಾವಾಗ ರಾಜಧಾನಿಯಿಂದ ಜನ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ತಮ್ಮ ಊರಿಗೆ ಹೋಗಲು ಶುರುಮಾಡಿದರೋ ಆಗ ಗ್ರಾಮೀಣ ಭಾಗದಲ್ಲಿ ಸಹ ಕೋವಿಡ್ ನಿಯಂತ್ರಣ ವ್ಯವಸ್ಥೆ ಕೈ ತಪ್ಪಿತು ಎಂದು ಅವರು ವಿವರಿಸಿದರು.

Published On - 4:12 pm, Fri, 30 October 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್