ದಾಸವಾಳದ ಔಷಧೀಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?
ಹೈ ಬಿಪಿ ಇರುವವರಿಗೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ಸ್ತ್ರೀಯರಿಗೆ ಕಾಡುವ ಮುಟ್ಟಿನ ಸಮಸ್ಯೆಗೂ ಕೂಡ ದಾಸವಾಳ ರಾಮಬಾಣವಾಗಿದ್ದು, ದಾಸವಾಳದ ಮೊಗ್ಗನ್ನು ಅರೆದು ಹಾಲಿನಲ್ಲಿ ಸೇರಿಸಿ ಕುಡಿಯುವುದರಿಂದ ಈ ಸಮಸ್ಯೆ ದೂರವಾಗುತ್ತದೆ.

ದಾಸವಾಳ ಹೂವುಗಳು ಎಂದರೆ ಸಾಮಾನ್ಯವಾಗಿ ಎಲ್ಲರೂ ದೇವರಿಗೆ ಪ್ರಿಯವಾದ ಹೂವು ಎಂದುಕೊಳ್ಳುತ್ತಾರೆ. ಇಲ್ಲವೇ ಅಲಂಕಾರಕ್ಕೆ ಹೇಳಿ ಮಾಡಿಸಿದ್ದು ಎಂದು ತಿಳಿಯುತ್ತಾರೆ. ಆದರೆ ಹೂವು ಹೇಗೆ ವಿವಿಧ ಬಣ್ಣಗಳಿಂದ ಸುಂದರವಾಗಿ ಇದೆಯೋ ಹಾಗೆಯೇ ಅದರ ಉಪಯೋಗಗಳು ಕೂಡ ಬಹಳಷ್ಟಿವೆ ಎಂದು ತಿಳಿದುಕೊಂಡವರು ಬಹುಶಃ ಅಲ್ಪಸ್ವಲ್ಪ ಮಂದಿಯಷ್ಟೇ. ಹಾಗಿದ್ದರೆ ಮನೆಯ ಅಂಗಳದಲ್ಲಿ ಅರಳುವ ದಾಸವಾಳ ಎಷ್ಟು ಅನುಕೂಲಕಾರಿ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
ಮನೆಯಲ್ಲಿ ಸ್ವಲ್ಪ ಜಾಗ ಇದ್ದರೆ ಸಾಕು ಈ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಇನ್ನು ಅತ್ಯಂತ ವೇಗವಾಗಿ ಬೆಳೆಯುತ್ತದೆ ಎನ್ನುವ ಹೆಗ್ಗಳಿಕೆಗೂ ಈ ಗಿಡಗಳು ಪಾತ್ರವಾಗಿದೆ. ಬಿಳಿ, ಕೆಂಪು, ಹಳದಿ, ಗುಲಾಬಿ, ನೇರಳೆ ಹೀಗೆ ಹಲವು ಬಣ್ಣಗಳನ್ನು ಹೊಂದಿರುವ ದಾಸವಾಳ ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ದಾಸವಾಳದಲ್ಲಿ ತಯಾರಿಸಿದ ಔಷಧ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಜನಪ್ರಿಯವಾಗಿದೆ.
ಸೌಂದರ್ಯ ವರ್ಧಕ ಔಷಧಿ: ನೈಸರ್ಗಿಕ ಬಣ್ಣಗಳ ತಯಾರಿಕೆಗಳಲ್ಲಿ ದಾಸವಾಳ ಹೂವಿನಂತಹ ಹೆಚ್ಚು ಬಳಕೆ ಆಗುವ ಹೂವು ಇನ್ನೊಂದು ಇಲ್ಲ ಎನ್ನುವ ಮಾತಿದ್ದು, ದಾಸವಾಳದ ಎಲೆ ಮತ್ತು ಹೂವುಗಳು ಮಹಿಳೆಯರ ತಲೆ ಕೂದಲು ಹೇರಳವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅದರಲ್ಲೂ ಬಿಳಿ ದಾಸವಾಳದ ಎಲೆ ಮತ್ತು ಹೂವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ ಮತ್ತು ಉದುರುವಿಕೆ ಕೂಡ ಕಡಿಮೆಯಾಗುತ್ತದೆ. ದಾಸವಾಳದ ಹೂವನ್ನು ಪುಡಿ ಮಾಡಿ ಹಚ್ಚುವುದರಿಂದ ಕೂದಲು ಬುಡದಲ್ಲಿ ಧೃಡವಾಗಿರುತ್ತದೆ ಮತ್ತು ಉದುರುವಿಕೆ ಕಡಿಮೆಯಾಗುತ್ತದೆ ಹಾಗೂ ಹೊಟ್ಟಿನ ಸಮಸ್ಯೆ ಕೂಡ ದೂರವಾಗುತ್ತದೆ.

ಬಿಳಿ ದಾಸವಾಳ ಹೂವು
ಈ ಹೂವಿನಲ್ಲಿ ಇರುವ ನೈಸರ್ಗಿಕ ತೈಲವನ್ನು ತಲೆಗೆ ಹಾಗೂ ದೇಹದ ಚರ್ಮಕ್ಕೆ ಹಾಕುವುದುರಿಂದ ಹೆಚ್ಚು ಹೊಳಪನ್ನು ಕೊಡುತ್ತದೆ. ದಾಸವಾಳದ ಹೂವನ್ನು ಒಣಗಿಸಿ ನಂತರ ಅದನ್ನು ಸುಟ್ಟು ಅದರಿಂದ ಬರುವ ಬೂದಿಯನ್ನು ಕಣ್ಣಿನ ಹುಬ್ಬಿಗೆ ಹಚ್ಚಿದರೆ ಕಣ್ಣಿನ ಹುಬ್ಬುಗಳು ಹೆಚ್ಚು ದಪ್ಪವಾಗಿ ಮತ್ತು ಆಕರ್ಷಕವಾಗಿ ಬರುತ್ತದೆ. ದಾಸವಾಳದ ಹೂವುಗಳನ್ನು ಗೋ ಮೂತ್ರದಲ್ಲಿ ರುಬ್ಬಿ ತಲೆಗೆ ಹಚ್ಚುವುದರಿಂದ ನೆರೆಗೂದಲು ಕಡಿಮೆಯಾಗುತ್ತದೆ.
ದಾಸವಾಳ ಸಸ್ಯದ ಬೇರನ್ನು ಬಳಸಿ ತಯಾರಿಸಿದ ಔಷಧಗಳಲ್ಲಿ ಅನೇಕ ತರನಾದ ರೋಗಗಳು ಕೂಡ ಮಾಯವಾಗುತ್ತದೆ. ಅದರಲ್ಲೂ ಬಿಳಿ ದಾಸವಾಳವನ್ನು ತಿಂಡಿಗೂ ಮೊದಲು ಅಂದರೆ ಬೆಳಗ್ಗಿನ ಜಾವ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬಿಳಿ ದಾಸವಾಳ ಎಲ್ಲಕ್ಕಿಂತ ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿದ್ದು, ಬಿಳಿ ದಾಸವಾಳದ ಹೂವನ್ನು ಒಣಗಿಸಿ ಅದನ್ನು ಪುಡಿ ಮಾಡಿ ಸೇವನೆ ಮಾಡುವುದರಿಂದ ಎಲ್ಲಾ ರೀತಿಯ ಕ್ಯಾನ್ಸರ್ ಕಾಯಿಲೆಗಳು ನಿರ್ವಹಣೆ ಆಗುತ್ತವೆ.

ಆರೋಗ್ಯಕ್ಕೆ ಉಪಯುಕ್ತಕಾರಿಯಾದ ದಾಸವಾಳ
ದಾಸವಾಳದಿಂದ ಆರೋಗ್ಯ : ದಾಸವಾಳದ ಹೂವುಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು ಮತ್ತು ಬಾಯಿಯಲ್ಲಿ ಉಂಟಾಗುವ ಹುಣ್ಣುಗಳನ್ನು ದೂರ ಮಾಡಬಹುದು. ದಾಸವಾಳ ಗಿಡದ ಎಲೆಗಳನ್ನು ಬಳಸಿ ಕಷಾಯ ಮಾಡಿ ನಂತರ ಅವುಗಳನ್ನು ಸೇವಿಸುವುದರಿಂದ ಕಫವನ್ನು ದೂರ ಮಾಡಬಹುದು. ದಾಸವಾಳದ ಹೂವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಹಾಲಿನೊಂದಿಗೆ ಬೆರಸಿ ಕುಡಿಯುವುದರಿಂದ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಓದುವ ಮಕ್ಕಳಿಗೆ ಇದು ಉಪಯುಕ್ತಕಾರಿಯಾಗಿದೆ.
ದಾಸವಾಳದ ಗಿಡದ ಎಲೆಗಳನ್ನು ಒಣಗಿಸಿ ಚಹಾ ಮಾಡಿ ಕುಡಿಯುವುದುರಿಂದ ಅಧಿಕ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಹಾಗೂ ಅಧಿಕ ರಕ್ತಡೊತ್ತಡ (High BP) ಇರುವವರಿಗೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಸ್ತ್ರೀಯರಿಗೆ ಕಾಡುವ ಮುಟ್ಟಿನ ಸಮಸ್ಯೆಗೂ ಕೂಡ ದಾಸವಾಳ ರಾಮಬಾಣವಾಗಿದ್ದು, ದಾಸವಾಳದ ಮೊಗ್ಗನ್ನು ಅರೆದು ಹಾಲಿನಲ್ಲಿ ಸೇರಿಸಿ ಕುಡಿಯುವುದರಿಂದ ಈ ಸಮಸ್ಯೆ ದೂರವಾಗುತ್ತದೆ.

ಗುಲಾಬಿ ಬಣ್ಣದ ದಾಸವಾಳ
ಬೇಸಿಗೆಯ ಸಮಯದಲ್ಲಿ ದಾಸವಾಳದ ಹೂವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಸೇವಿಸುವುದರಿಂದ ದೇಹಕ್ಕೆ ತಂಪಾಗುತ್ತದೆ ಮತ್ತು ಉಷ್ಣಾಂಶದಂತಹ ಸಮಸ್ಯೆ ದೂರವಾಗುತ್ತದೆ. ಇನ್ನು ಕೆಂಪು ದಾಸವಾಳವನ್ನು ತಿನ್ನುವುದರಿಂದ ನೈಸರ್ಗಿಕವಾಗಿ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಇನ್ನು ದಾಸವಾಳದ ಎಲೆಯ ರಸವನ್ನು ಹಿಂಡಿ ಗಾಯದ ಮೇಲೆ ಹಾಕುವುದುರಿಂದ ಗಾಯ ಬೇಗನೆ ಗುಣವಾಗುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ಉಷ್ಣಾಂಶ ದೂರ ಮಾಡುವ ಕಾಮಕಸ್ತೂರಿ ಬೀಜಗಳ ಬಳಕೆ ಹೇಗೆ?



