ಅಪ್ಪಟ ರೈತನಂತೆ ಪೋಸ್ ಕೊಟ್ಟು, ಜಮೀನು ಬಾಡಿಗೆ ಪಡೆದು ಈರುಳ್ಳಿ, ಮೆಣಸಿನಕಾಯಿ ಬೆಳೆದಿದ್ದ; ಆದ್ರೆ ಏನು ದುರ್ಬುದ್ಧಿ ಇತ್ತೋ ಅವನಲ್ಲಿ.. ಬಂಗಾರದಂತ ಆ ಬೆಳೆಗಳ ಮಧ್ಯೆ, ವಿಷಕಾರಿ ಗಾಂಜಾ ಬೆಳೆಯನ್ನು ಬೆಳೆದುಬಿಟ್ಟ ಆ ಖದೀಮ!
ಹೌದು, ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮದ ಬಳಿ ಈರುಳ್ಳಿ ಹೊಲದಲ್ಲಿ ಗಾಂಜಾ ಪತ್ತೆಯಾಗಿದ್ದು, ರೈತನೊಬ್ಬನಿಗೆ ಅತಿಯಾಸೆ ಗತಿಕೇಡು ಎಂಬಂತಾಗಿದೆ. ಇದೀಗ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ, 18 ಕೆ.ಜಿ. ಹಸಿ ಗಾಂಜಾ ಗಿಡಗಗಳು ವಶಕ್ಕೆ ಪಡೆದಿದ್ದಾರೆ. ದುರ್ಬುದ್ಧಿತ ಯುವರೈತ ಚಂದ್ರು ಕಾಶಿನಾಥ ಬನ್ನಿಕೊಪ್ಪ (30) ಎಂಬಾತನನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಂದ ಜಮೀನು ಬಾಡಿಗೆ ಪಡೆದುಕೊಂಡಿದ್ದ ಕಾಶಿನಾಥ ಬನ್ನಿಕೊಪ್ಪ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದ. ಅದ್ರೆ ಪಾಪಿ ಕಾಶಿನಾಥ ಬನ್ನಿಕೊಪ್ಪ ಅವುಗಳ ಮಧ್ಯದಲ್ಲಿ ಅಲ್ಲಲ್ಲಿ ಗಾಂಜಾ ಸಸಿಗಳನ್ನೂ ಬೆಳೆಸಿಬಿಟ್ಟಿದ್ದ! ಅದರಿಂದಲೇ ಈಗ ಪೊಲೀಸರಿಗೆ ತಗಲಾಕೊಂಡಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ರಮೇಶ ಗೋಕಾಕ ಹಾಗೂ ತಂಡ ದಾಳಿ ನಡೆಸಿ, ಗಾಂಜಾ ಸಸಿ ಜೊತೆಗೆ ಗಾಂಜಾಲಿ ಮಾಡಿರುವ ಕಾಶಿನಾಥ ಬನ್ನಿಕೊಪ್ಪನನ್ನೂ ಅಲ್ಲಿಂದ ಎಬ್ಬಿಸಿ ಕರೆದುಕೊಂಡುಬಂದಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿ ಕಾಶಿನಾಥ ಬನ್ನಿಕೊಪ್ಪನನ್ನು ನ್ಯಾಯಾಂಗ ಬಂಧನಕ್ಕೆ ಬಿಟ್ಟು ಬಂದಿದ್ದಾರೆ.