ಮತ್ತೊಂದು ಚೀಟ್ ಫಂಡ್​: ಸುಮಾರು ನಾನೂರು ಕೋಟಿ ವಂಚಿಸಿ ಕೆಂಗೇರಿಯಿಂದ ಕಾಲ್ಕಿತ್ತ ಆನಂದ

ಬೆಂಗಳೂರು: ಬಡ್ಡಿ ನೀಡುವುದಾಗಿ ಹಣ ಪಡೆದು ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಈಗ ಬೆಂಗಳೂರಿನ ಕೆಂಗೇರಿಯ ಉಲ್ಲಾಳ ಬಳಿಯಿರುವ ಐಶ್ವರ್ಯ ಲಕ್ಷ್ಮೀ ಚಿಟ್ಸ್ ಪ್ರೈವೇಟ್ ಲಿ. ವಿರುದ್ಧ ಕೇಳಿಬಂದಿದೆ. ಆನಂದ್ ಎಂಬುವನಿಂದ ಸುಮಾರು 200 ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಶೇ. 2ರಷ್ಟು ಬಡ್ಡಿ ಕೊಡುವುದಾಗಿ ಹೇಳಿ ಹಣ ಸಂಗ್ರಹಿಸಿದ್ದ ಆನಂದ್​ ಅಸಲು, ಲಾಭ ಎರಡನ್ನೂ ನೀಡದೆ ಇಂದು ನಾಪತ್ತೆಯಾಗಿದ್ದಾನೆ. ಸುಮಾರು 400-500 ಕೋಟಿ ವಂಚಿಸಿರುವುದು ಈಗ ಬಹಿರಂಗವಾಗಿದೆ. ಭಾರಿ ಮೊತ್ತದ ಹಣ ಪಡೆದು […]

ಮತ್ತೊಂದು ಚೀಟ್ ಫಂಡ್​: ಸುಮಾರು ನಾನೂರು ಕೋಟಿ ವಂಚಿಸಿ ಕೆಂಗೇರಿಯಿಂದ ಕಾಲ್ಕಿತ್ತ ಆನಂದ

Updated on: Nov 12, 2020 | 8:41 PM

ಬೆಂಗಳೂರು: ಬಡ್ಡಿ ನೀಡುವುದಾಗಿ ಹಣ ಪಡೆದು ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಈಗ ಬೆಂಗಳೂರಿನ ಕೆಂಗೇರಿಯ ಉಲ್ಲಾಳ ಬಳಿಯಿರುವ ಐಶ್ವರ್ಯ ಲಕ್ಷ್ಮೀ ಚಿಟ್ಸ್ ಪ್ರೈವೇಟ್ ಲಿ. ವಿರುದ್ಧ ಕೇಳಿಬಂದಿದೆ.

ಆನಂದ್ ಎಂಬುವನಿಂದ ಸುಮಾರು 200 ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಶೇ. 2ರಷ್ಟು ಬಡ್ಡಿ ಕೊಡುವುದಾಗಿ ಹೇಳಿ ಹಣ ಸಂಗ್ರಹಿಸಿದ್ದ ಆನಂದ್​ ಅಸಲು, ಲಾಭ ಎರಡನ್ನೂ ನೀಡದೆ ಇಂದು ನಾಪತ್ತೆಯಾಗಿದ್ದಾನೆ. ಸುಮಾರು 400-500 ಕೋಟಿ ವಂಚಿಸಿರುವುದು ಈಗ ಬಹಿರಂಗವಾಗಿದೆ.

ಭಾರಿ ಮೊತ್ತದ ಹಣ ಪಡೆದು ವಂಚಿಸಿರುವ ಆನಂದ್​ ನಾಪತ್ತೆಯಾಗಿರುವ ಹಿನ್ನೆಲೆಯಿಂದಾಗಿ ಆನಂದ್​ನಿಂದ ಮೋಸ ಹೋದವರು ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ಇದು ಕೋಟ್ಯಂತರ ರೂ. ವಂಚನೆಯಾಗಿರುವುದರಿಂದ ಮೋಸ ಹೋದವರಿಗೆ ಸಿಐಡಿಗೆ ದೂರು ನೀಡಲು ಜ್ಞಾನಭಾರತಿ ಠಾಣೆ ಪೊಲೀಸರು ಸೂಚನೆ ನೀಡಿದ್ದಾರೆ.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us