AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರಿಗೆ ತಲುಪಬೇಕಿದ್ದ ಆಯುಷ್ಮಾನ್ ಭಾರತ್ ಕಾರ್ಡ್​ಗಳು ಚರಂಡಿ ಪಾಲು!

ದಾವಣಗೆರೆ:ಸಾಮಾನ್ಯ ಜನರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಎಂಬ ಆರೋಗ್ಯ ಚಿಕಿತ್ಸೆಗಾಗಿ ಜಾರಿಗೆ ತಂದಿರುವ ಕಾರ್ಡ್​ಗಳನ್ನು, ಸಂಬಂಧಪಟ್ಟ ಜನರಿಗೆ ತಲುಪಿಸದೆ ಪೋಸ್ಟ್​ಮ್ಯಾನ್, ಚರಂಡಿಗೆ ಎಸೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಕೇಂದ್ರ ಸರ್ಕಾರ ಆರೋಗ್ಯ ಚಿಕಿತ್ಸೆಗಾಗಿ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಕಾರ್ಡ್​ಗಳನ್ನು, ಪೋಸ್ಟ್​ಮ್ಯಾನ್ ಜನರಿಗೆ ತಲುಪಿಸದೆ ಚರಂಡಿಯಲ್ಲಿ ಬಿಸಾಡಿ ಹೋಗಿದ್ದಾನೆ. ಚರಂಡಿಯಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್​ಗಳನ್ನು ಕಂಡ ಸ್ಥಳೀಯರು, ಈ ವಿಚಾರವನ್ನು ತಹಸೀಲ್ದಾರರಿಗೆ ಮುಟ್ಟಿಸಿದ್ದಾರೆ. […]

ಜನರಿಗೆ ತಲುಪಬೇಕಿದ್ದ ಆಯುಷ್ಮಾನ್ ಭಾರತ್ ಕಾರ್ಡ್​ಗಳು ಚರಂಡಿ ಪಾಲು!
ಸಾಧು ಶ್ರೀನಾಥ್​
| Edited By: |

Updated on: Aug 22, 2020 | 10:50 AM

Share

ದಾವಣಗೆರೆ:ಸಾಮಾನ್ಯ ಜನರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಎಂಬ ಆರೋಗ್ಯ ಚಿಕಿತ್ಸೆಗಾಗಿ ಜಾರಿಗೆ ತಂದಿರುವ ಕಾರ್ಡ್​ಗಳನ್ನು, ಸಂಬಂಧಪಟ್ಟ ಜನರಿಗೆ ತಲುಪಿಸದೆ ಪೋಸ್ಟ್​ಮ್ಯಾನ್, ಚರಂಡಿಗೆ ಎಸೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಕೇಂದ್ರ ಸರ್ಕಾರ ಆರೋಗ್ಯ ಚಿಕಿತ್ಸೆಗಾಗಿ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಕಾರ್ಡ್​ಗಳನ್ನು, ಪೋಸ್ಟ್​ಮ್ಯಾನ್ ಜನರಿಗೆ ತಲುಪಿಸದೆ ಚರಂಡಿಯಲ್ಲಿ ಬಿಸಾಡಿ ಹೋಗಿದ್ದಾನೆ.

ಚರಂಡಿಯಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್​ಗಳನ್ನು ಕಂಡ ಸ್ಥಳೀಯರು, ಈ ವಿಚಾರವನ್ನು ತಹಸೀಲ್ದಾರರಿಗೆ ಮುಟ್ಟಿಸಿದ್ದಾರೆ. ವಿಚಾರ ತಿಳಿದ ದಾವಣಗೆರೆ ತಹಸೀಲ್ದಾರ್ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ಪೋಸ್ಟ್​ಮ್ಯಾನ್ ಈಗ ನಾಪತ್ತೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪೋಸ್ಟ್​ಮ್ಯಾನ್​ನನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.