ಮುನಿರತ್ನರನ್ನ ಗೆಲ್ಸಿದ್ರೆ ಸಚಿವರಾಗಿ ಬಂದು ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ: ಸಚಿವ ನಾರಾಯಣಗೌಡ

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನರನ್ನ ಗೆಲ್ಸಿದ್ರೆ ಸಚಿವರಾಗಿ ಬಂದು ಅವರು ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. BJP ಸರ್ಕಾರವನ್ನ 25 ವರ್ಷ ಯಾರೂ ಅಲ್ಲಾಡಿಸಲು ಆಗಲ್ಲ ಉಪಚುನಾವಣೆ ಬಳಿಕ ಮುನಿರತ್ನ ಸಚಿವರಾಗಿ ಬರುತ್ತಾರೆ. ಈ ಸರ್ಕಾರವನ್ನು 25 ವರ್ಷ ಯಾರೂ ಅಲ್ಲಾಡಿಸಲು ಆಗಲ್ಲ ಎಂದು ಪ್ರಚಾರದ ವೇಳೆ ಸಚಿವ ನಾರಾಯಣಗೌಡ ಹೇಳಿದ್ದಾರೆ. ನವೆಂಬರ್ 3ರಂದು ಆರ್.ಆರ್.ನಗರ ಅಸೆಂಬ್ಲಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ R.R. ನಗರ ಬಿಜೆಪಿ […]

ಮುನಿರತ್ನರನ್ನ ಗೆಲ್ಸಿದ್ರೆ ಸಚಿವರಾಗಿ ಬಂದು ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ: ಸಚಿವ ನಾರಾಯಣಗೌಡ

Updated on: Oct 27, 2020 | 1:00 PM

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನರನ್ನ ಗೆಲ್ಸಿದ್ರೆ ಸಚಿವರಾಗಿ ಬಂದು ಅವರು ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

BJP ಸರ್ಕಾರವನ್ನ 25 ವರ್ಷ ಯಾರೂ ಅಲ್ಲಾಡಿಸಲು ಆಗಲ್ಲ
ಉಪಚುನಾವಣೆ ಬಳಿಕ ಮುನಿರತ್ನ ಸಚಿವರಾಗಿ ಬರುತ್ತಾರೆ. ಈ ಸರ್ಕಾರವನ್ನು 25 ವರ್ಷ ಯಾರೂ ಅಲ್ಲಾಡಿಸಲು ಆಗಲ್ಲ ಎಂದು ಪ್ರಚಾರದ ವೇಳೆ ಸಚಿವ ನಾರಾಯಣಗೌಡ ಹೇಳಿದ್ದಾರೆ.

ನವೆಂಬರ್ 3ರಂದು ಆರ್.ಆರ್.ನಗರ ಅಸೆಂಬ್ಲಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ R.R. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸಚಿವ ನಾರಾಯಣಗೌಡ ಪ್ರಚಾರ ಇಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ಹಿಂದೆ.. ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸಗಳು ಆಗುತ್ತಿರಲಿಲ್ಲ. ಹೀಗಾಗಿ ನಾವೆಲ್ಲಾ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದೆವು. ಈಗ ಮುನಿರತ್ನ ಸ್ಪರ್ಧಿಸಲು ಕೋರ್ಟ್ ಅವಕಾಶ ನೀಡಿದೆ. ಮುನಿರತ್ನರನ್ನು ಗೆಲ್ಲಿಸಿದ್ರೆ ಅವರು ಸಚಿವರಾಗಿ ಬರುತ್ತಾರೆ
ಕ್ಷೇತ್ರದ ಅಭಿವೃದ್ಧಿಗೆ ಮುನಿರತ್ನ ಕೆಲಸ ಮಾಡುತ್ತಾರೆ ಎಂದು ಪ್ರಚಾರ ಮಾಡುತ್ತಾ ಸಚಿವ ನಾರಾಯಣಗೌಡ ಹೇಳಿದರು.

Published On - 12:59 pm, Tue, 27 October 20