India vs Australia 2020, 3rd ODI | ಕೊನೆಯ ಪಂದ್ಯವನ್ನು13 ರನ್ಗಳಿಂದ ಗೆದ್ದ ಭಾರತ
ಆಸ್ಟ್ರೇಲಿಯವನ್ನು ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ 13 ರನ್ಗಳಿಂದ ಸೋಲಿಸಿದ ಭಾರತ ವ್ಹೈಟ್ವಾಶ್ ಆಗುವುದನ್ನು ತಪ್ಪಿಸಿಕೊಳ್ಳುವುದರ ಜೊತೆಗೆ ಮುಂಬರುವ ಟಿ20 ಪಂದ್ಯಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿತು.
ಪಂದ್ಯದ ಕೊನೆಯ ಕ್ಷಣಗಳಲ್ಲಿ ಸ್ಥಿಮಿತತೆ ಕಾಯ್ದುಕೊಂಡ ಭಾರತೀಯ ಬೌಲರ್ಗಳು ಅಸ್ಟ್ರೇಲಿಯಾವನ್ನು ಕೊನೆಯ ಒಂದು ದಿನ ಪಂದ್ಯದಲ್ಲಿ 13 ರನ್ಗಳಿಂದ ಸೋಲುಣಿಸಲು ನೆರವಾದರು. ಗೆಲ್ಲಲು 303 ರನ್ ಗಳಿಸಬೇಕಿದ್ದ ಆಸ್ಟ್ರೇಲಿಯ 49.3 ಓವರ್ಗಳಲ್ಲಿ 289 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಭಾರತದ ಪರ ವೇಗದ ಬೌಲರ್ಗಳು ಅತ್ಯುತ್ತಮವಾಗಿ ದಾಳಿ ನಡೆಸಿದರು. 51 ರನ್ಗಳಿಗೆ 3 ವಿಕೆಟ್ ಪಡೆದ ಶಾರ್ದುಲ್ ಠಾಕುರ್ ಅತ್ಯಂತ ಯಶಸ್ವೀ ಬೌಲರ್ ಎನಿಸಿದರೆ, ಜಸ್ಪ್ರೀತ್ ಬುಮ್ರಾ 43 ರನ್ಗಳಿಗೆ 2 ಮತ್ತು ಇದೇ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದ ನಟರಾಜನ್ 70 ರನ್ ನೀಡಿ ದುಬಾರಿಯೆನಿಸಿದರೂ 2 ವಿಕೆಟ್ ಪಡೆದರು.
ಅತಿಥೇಯರ ಪರ ಬ್ಯಾಟಿಂಗ್ನಲ್ಲಿ ಮತ್ತೊಮ್ಮೆ ಮಿಂಚಿದ ನಾಯಕ ಆರನ್ ಫಿಂಚ್ 82 ಎಸೆತಗಳಲ್ಲಿ 75ರನ್ ಗಳಿಸಿದರು. ಎರಡನೆ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿ ಅರ್ಧ ಶತಕ ಬಾರಿಸಿದ್ದ ಗ್ಲೆನ್ ಮಾಕ್ಸ್ವೆಲ್ ಮತ್ತೊಮ್ಮೆ ಅದೇ ಧೋರಣೆ ಪ್ರದರ್ಶಿಸಿ ಕೇವಲ 38 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳಿದ್ದ 59 ರನ್ ಬಾರಿಸಿದರು
ಇದಕ್ಕೆ ಮುನ್ನ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ವಿರಾಟ್ ಕೊಹ್ಲಿಯವರ 63 ಮತ್ತು ಆಲ್ರೌಂಡರ್ಗಳಾಗಿರುವ ಹಾರ್ದಿಕ್ ಪಾಂಡ್ಯ (ಅಜೇಯ 92) ಮತ್ತು ರವೀಂದ್ರ ಜಡೇಜಾ (ಅಜೇಯ 66) ಅವರ ಜೊತೆಯಾಟದಲ್ಲಿ ಬಂದ 150 ರನ್ಗಳ ನೆರವಿನಿಂದ ಅತಿಥೇಯರಿಗೆ ಗೆಲ್ಲಲು 303 ರನ್ಗಳ ಸವಾಲೊಡ್ಡಿತು.
Published On - 2:41 pm, Fri, 4 December 20